ETV Bharat / business

ಟಾಟಾ, ಮಾರುತಿ, ಹೋಂಡಾ ಕಾರುಗಳ ಮೇಲೆ ಭಾರಿ ಕೊಡುಗೆ: ಈ ಮಾದರಿ ಕಾರಿನ ಮೇಲೆ ಬರೋಬ್ಬರಿ 4 ಲಕ್ಷದ ರಿಯಾಯಿತಿ! - Car Discounts In May

author img

By ETV Bharat Karnataka Team

Published : May 11, 2024, 9:15 PM IST

ನೀವು ಹೊಸ ಕಾರು ತೆಗೆದುಕೊಳ್ಳಬೇಕು ಎಂದು ಬಯಸುತ್ತಿದ್ದೀರಾ? ಹಾಗಾದರೆ ನಿಮಗೆ ಒಳ್ಳೆಯ ಸುದ್ದಿಯೊಂದಿದೆ. ಟಾಟಾ, ಮಾರುತಿ ಸುಜುಕಿ, ಹೋಂಡಾ, ಹ್ಯುಂಡೈ ಮುಂತಾದ ಪ್ರಮುಖ ಆಟೋಮೊಬೈಲ್ ಕಂಪನಿಗಳು ತಮ್ಮ ಇತ್ತೀಚಿನ ಕಾರುಗಳ ಮೇಲೆ ಭಾರಿ ರಿಯಾಯಿತಿಗಳು ಮತ್ತು ಕೊಡುಗೆಗಳನ್ನು ನೀಡುತ್ತಿವೆ. ಇವೆಲ್ಲ ಮಾಹಿತಿಗಳನ್ನು ನೀವು ತಿಳಿದುಕೊಳ್ಳಬೇಕಾ?; ಹಾಗಾದರೆ ಈ ಸುದ್ದಿಯನ್ನೊಮ್ಮೆ ನೋಡಿ

car-discounts-in-may-2024-maruti-suzuki-tata-honda-hyundai-car-discounts-in-may-2024
ಟಾಟಾ, ಮಾರುತಿ, ಹೋಂಡಾ ಕಾರುಗಳ ಮೇಲೆ ಭಾರಿ ಕೊಡುಗೆ: ಈ ಮಾದರಿ ಕಾರಿನ ಮೇಲೆ 4 ಲಕ್ಷದ ರಿಯಾಯಿತಿ! (ETV Bharat)

ಹೈದರಾಬಾದ್​: ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ತಮ್ಮ ಕುಟುಂಬ ಸದಸ್ಯರೊಂದಿಗೆ ಎಲ್ಲಿಯಾದರೂ ಹೋಗಬೇಕು ಎಂಬ ಆಶಯ ಹೊಂದಿರುತ್ತಾರೆ. ಇಂತಹ ಪ್ರವಾಸಗಳಿಗಾಗಿ ಸ್ವಂತ ಕಾರು ಇದ್ದರೆ ಇನ್ನೂ ಚಂದ ಎಂಬ ಯೋಜನೆಯನ್ನೂ ಹೊಂದಿರುತ್ತಾರೆ. ಹೀಗೆ ಮನೆ ಬಳಕೆಗಾಗಿ ಕಾರು ಖರೀದಿ ಮಾಡಬೇಕು ಅಂತಾ ಯೋಚಿಸುತ್ತಿದ್ದೀರಾ? ಅಂತಹವರಿಗಾಗಿ ಒಳ್ಳೆಯ ಸುದ್ದಿಯೊಂದು ಕಾರು ಮಾರುಕಟ್ಟೆಗಳಿಂದ ಹೊರ ಬಂದಿದೆ. ಟಾಟಾ, ಮಾರುತಿ, ಹೋಂಡಾ, ಹ್ಯುಂಡೈ ಕಂಪನಿಗಳು ತಮ್ಮ ಕಾರುಗಳ ಮೇಲೆ ಭಾರೀ ರಿಯಾಯಿತಿ ಮತ್ತು ಕೊಡುಗೆಗಳನ್ನು ಘೊಷಿಸಿವೆ. ಅವುಗಳ ಬಗ್ಗೆ ಈಗ ಒಂದೊಂದಾಗಿ ತಿಳಿದುಕೊಳ್ಳೋಣ

ಮೇ 2024 ರಲ್ಲಿ ಹುಂಡೈ ಕಾರುಗಳ ಮೇಲಿನ ರಿಯಾಯಿತಿ

ಹುಂಡೈ ಗ್ರಾಂಡ್ i10 ನಿಯೋಸ್ : 35 ಸಾವಿರ ರೂ. ನಗದು ರಿಯಾಯಿತಿ + ರೂ.10 ಸಾವಿರ ವಿನಿಮಯ ಬೋನಸ್ + ರೂ.3000 ಕಾರ್ಪೊರೇಟ್ ರಿಯಾಯಿತಿ ನೀಡುವುದಾಗಿ ಹೇಳಿದೆ

  • ಹುಂಡೈ ಔರಾ ; 20 ಸಾವಿರ ನಗದು ರಿಯಾಯಿತಿ + ರೂ.10 ಸಾವಿರ ವಿನಿಮಯ ಬೋನಸ್ + ರೂ.3000 ಕಾರ್ಪೊರೇಟ್ ರಿಯಾಯಿತಿ
  • ಹುಂಡೈ ಎಕ್ಸ್‌ಟರ್ : ಕೆಲವು ರೂಪಾಂತರಗಳ ಮೇಲೆ ರೂ.10 ಸಾವಿರ ನಗದು ರಿಯಾಯಿತಿ
  • ಹುಂಡೈ I20 : ರೂ.35 ಸಾವಿರ ನಗದು ರಿಯಾಯಿತಿ + ರೂ.10 ಸಾವಿರ ವಿನಿಮಯ ಬೋನಸ್
  • ಹುಂಡೈ ವೆನ್ಯೂ: ರೂ.25 ಸಾವಿರ ನಗದು ರಿಯಾಯಿತಿ + ರೂ.10 ಸಾವಿರ ವಿನಿಮಯ ಬೋನಸ್
  • ಹುಂಡೈ ವೆರ್ನಾ : ರೂ.15 ಸಾವಿರ ನಗದು ರಿಯಾಯಿತಿ + ರೂ.20 ಸಾವಿರ ವಿನಿಮಯ ಬೋನಸ್
  • ಹುಂಡೈ ಅಲ್ಕಾಜರ್ : ರೂ.45 ಸಾವಿರ ನಗದು ರಿಯಾಯಿತಿ + ರೂ.10 ಸಾವಿರ ವಿನಿಮಯ ಬೋನಸ್
  • ಹುಂಡೈ ಟಕ್ಸನ್ : ರೂ.50 ಸಾವಿರ ನಗದು ರಿಯಾಯಿತಿ
  • ಹುಂಡೈ ಕೋನಾ EV: ಬರೋಬ್ಬರಿ 4 ಲಕ್ಷ ರೂಪಾಯಿ ರಿಯಾಯಿತಿ

ಮಾರುತಿ ಸುಜುಕಿ ಕಾರುಗಳ ಮೇಲಿನ ರಿಯಾಯಿತಿಗಳು ಇಂತಿವೆ:

  • ಮಾರುತಿ ಸುಜುಕಿ ಇಗ್ನಿಸ್ : ರೂ.35 ಸಾವಿರ ನಗದು ರಿಯಾಯಿತಿ (MT)/ ರೂ.40 ಸಾವಿರ ನಗದು ರಿಯಾಯಿತಿ (AMT) + ರೂ.15 ಸಾವಿರ ವಿನಿಮಯ ಬೋನಸ್ (ಸ್ಕ್ರ್ಯಾಪ್‌ಪೇಜ್‌ನಲ್ಲಿ ರೂ.5000 ಹೆಚ್ಚುವರಿ ಬೋನಸ್) + ರೂ.3 ಸಾವಿರ ಕಾರ್ಪೊರೇಟ್ ರಿಯಾಯಿತಿ
  • ಮಾರುತಿ ಸುಜುಕಿ ಬಲೆನೊ : 15 ಸಾವಿರ ರೂಪಾಯಿ ನಗದು ರಿಯಾಯಿತಿ (ಸಿಎನ್‌ಜಿ)/ ರೂ.25 ಸಾವಿರ ನಗದು ರಿಯಾಯಿತಿ (ಪೆಟ್ರೋಲ್ ಎಂಟಿ) + ರೂ.15 ಸಾವಿರ ವಿನಿಮಯ ಬೋನಸ್ (ಸ್ಕ್ರ್ಯಾಪೇಜ್‌ನಲ್ಲಿ ರೂ.5000 ಹೆಚ್ಚುವರಿ ಬೋನಸ್) + ರೂ.3 ಸಾವಿರ ಕಾರ್ಪೊರೇಟ್ ರಿಯಾಯಿತಿ
  • ಮಾರುತಿ ಸುಜುಕಿ ಫ್ರಾಂಕ್ಸ್ ಟರ್ಬೊ : ರೂ.43 ಸಾವಿರ ಮೌಲ್ಯದ ಪರಿಕರಗಳು + ರೂ.15 ಸಾವಿರ ನಗದು ರಿಯಾಯಿತಿ + ರೂ.10 ಸಾವಿರ ವಿನಿಮಯ ಬೋನಸ್ (ಸ್ಕ್ರ್ಯಾಪ್‌ಪೇಜ್‌ನಲ್ಲಿ ರೂ.5000 ಹೆಚ್ಚುವರಿ) + ರೂ.7000 ಕಾರ್ಪೊರೇಟ್ ರಿಯಾಯಿತಿ
  • ಮಾರುತಿ ಸುಜುಕಿ ಸಿಯಾಜ್ : 20 ಸಾವಿರ ರೂಪಾಯಿ ನಗದು ರಿಯಾಯಿತಿ + ರೂ.25 ಸಾವಿರ ವಿನಿಮಯ ಬೋನಸ್ (ಸ್ಕ್ರ್ಯಾಪ್‌ಪೇಜ್‌ನಲ್ಲಿ ರೂ.5000 ಹೆಚ್ಚುವರಿ) + ರೂ.10 ಸಾವಿರ ಕಾರ್ಪೊರೇಟ್ ರಿಯಾಯಿತಿ
  • ಮಾರುತಿ ಸುಜುಕಿ ಜಿಮ್ನಿ : ರೂ.50 ಸಾವಿರ ರಿಯಾಯಿತಿ
  • ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಮೈಲ್ಡ್ ಹೈಬ್ರಿಡ್ : ರೂ.25 ಸಾವಿರ ನಗದು ರಿಯಾಯಿತಿ + ರೂ.30 ಸಾವಿರ ವಿನಿಮಯ ಬೋನಸ್ (ಸ್ಕ್ರ್ಯಾಪ್‌ಪೇಜ್‌ನಲ್ಲಿ ರೂ.5000 ಹೆಚ್ಚುವರಿ) + ರೂ.4 ಸಾವಿರ ಕಾರ್ಪೊರೇಟ್ ರಿಯಾಯಿತಿ
  • ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಸ್ಟ್ರಾಂಗ್ ಹೈಬ್ರಿಡ್ : ರೂ.20 ಸಾವಿರ ನಗದು ರಿಯಾಯಿತಿ + ರೂ.50 ಸಾವಿರ ವಿನಿಮಯ ಬೋನಸ್ + ರೂ.4 ಸಾವಿರ ಕಾರ್ಪೊರೇಟ್ ರಿಯಾಯಿತಿ
  • ಮಾರುತಿ ಸುಜುಕಿ ಆಲ್ಟೊ ಕೆ10: 25 ಸಾವಿರ ರೂ ನಗದು ರಿಯಾಯಿತಿ (ಸಿಎನ್‌ಜಿ) / ರೂ.40 ಸಾವಿರ ನಗದು ರಿಯಾಯಿತಿ (ಎಂಟಿ) / ರೂ.45 ಸಾವಿರ ನಗದು ರಿಯಾಯಿತಿ (ಎಎಂಟಿ)+ ರೂ.15 ಸಾವಿರ ವಿನಿಮಯ ಕೊಡುಗೆ+ ರೂ.2500 ಕಾರ್ಪೊರೇಟ್ ರಿಯಾಯಿತಿ
  • ಮಾರುತಿ ಸುಜುಕಿ ಸೆಲೆರಿಯೊ : 30 ಸಾವಿರ ರೂ. ನಗದು ರಿಯಾಯಿತಿ (ಸಿಎನ್‌ಜಿ) / ರೂ.35 ಸಾವಿರ ನಗದು ರಿಯಾಯಿತಿ (ಎಂಟಿ) + ರೂ.15 ಸಾವಿರ ವಿನಿಮಯ ಕೊಡುಗೆ + .2000 ಕಾರ್ಪೊರೇಟ್ ರಿಯಾಯಿತಿ
  • ಮಾರುತಿ ಸುಜುಕಿ ವ್ಯಾಗನ್ ಆರ್ : ರೂ.25 ಸಾವಿರ ನಗದು ರಿಯಾಯಿತಿ (ಸಿಎನ್‌ಜಿ) / ರೂ.35 ಸಾವಿರ ನಗದು ರಿಯಾಯಿತಿ (ಎಂಟಿ) / ರೂ.40 ಸಾವಿರ ನಗದು ರಿಯಾಯಿತಿ (ಎಎಂಟಿ) + ರೂ.20 ವೇಲು ಎಕ್ಸ್‌ಚೇಂಜ್ ಆಫರ್ + ರೂ.5000 ಕಾರ್ಪೊರೇಟ್ ರಿಯಾಯಿತಿ
  • ಮಾರುತಿ ಸುಜುಕಿ ಇಕೋ : ರೂ.20 ಸಾವಿರ ನಗದು ರಿಯಾಯಿತಿ (ಸಿಎನ್‌ಜಿ) / ರೂ.10 ಸಾವಿರ ನಗದು ರಿಯಾಯಿತಿ (ಪೆಟ್ರೋಲ್) / ರೂ.40 ಸಾವಿರ ನಗದು ರಿಯಾಯಿತಿ (ಎಎಂಟಿ) + ರೂ.10 ಸಾವಿರ ವಿನಿಮಯ ಕೊಡುಗೆ
  • ಮಾರುತಿ ಸುಜುಕಿ ಸ್ವಿಫ್ಟ್ : ರೂ.15 ಸಾವಿರ ನಗದು ರಿಯಾಯಿತಿ (ಎಂಟಿ) / ರೂ.20 ಸಾವಿರ ನಗದು ರಿಯಾಯಿತಿ (ಎಎಂಟಿ) + ರೂ.20 ಸಾವಿರ ನಗದು ರಿಯಾಯಿತಿ + ರೂ.20 ಸಾವಿರ ವಿನಿಮಯ ಕೊಡುಗೆ + ರೂ.7 ಸಾವಿರ
  • ಮಾರುತಿ ಸುಜುಕಿ ಡಿಜೈರ್: ರೂ.10 ಸಾವಿರ ನಗದು ರಿಯಾಯಿತಿ (ಎಂಟಿ) / ರೂ.15 ಸಾವಿರ ನಗದು ರಿಯಾಯಿತಿ (ಎಎಂಟಿ) + ರೂ.15 ಸಾವಿರ ವಿನಿಮಯ ಕೊಡುಗೆ

ಹೋಂಡಾ ಕಾರುಗಳ ಮೇಲೆ ಭಾರಿ ರಿಯಾಯಿತಿ

  • ಹೋಂಡಾ ಅಮೇಜ್ : 96 ಸಾವಿರದವರೆಗೆ ರಿಯಾಯಿತಿ (ರೂ.20 ಸಾವಿರ ನಗದು ರಿಯಾಯಿತಿ + ರೂ.10 ಸಾವಿರ ವಿನಿಮಯ ಬೋನಸ್ + ಕಾರ್ಪೊರೇಟ್ ರಿಯಾಯಿತಿ)
    ಹೋಂಡಾ ಸಿಟಿ : 1.15 ಲಕ್ಷದವರೆಗೆ ರಿಯಾಯಿತಿ (ಎಲ್ಲಾ ರಿಯಾಯಿತಿಗಳು ಸೇರಿದಂತೆ)
  • Honda City eHEV - 65 ಸಾವಿರದವರೆಗೆ ರಿಯಾಯಿತಿ
  • ಹೋಂಡಾ ಎಲಿವೇಟ್: 55 ಸಾವಿರದವರೆಗೆ ರಿಯಾಯಿತಿ

ಟಾಟಾ ಕಾರುಗಳಲ್ಲೂ ಭಾರಿ ರಿಯಾಯಿತಿ ಘೋಷಣೆ

  • ಟಾಟಾ ಟಿಯಾಗೊ ಪೆಟ್ರೋಲ್ : 35 ಸಾವಿರ ನಗದು ರಿಯಾಯಿತಿ + ರೂ.10 ಸಾವಿರ ವಿನಿಮಯ ಬೋನಸ್
  • ಟಾಟಾ ಟಿಯಾಗೊ ಸಿಎನ್‌ಜಿ: 15 ಸಾವಿರ ನಗದು ರಿಯಾಯಿತಿ + ರೂ.10 ಸಾವಿರ ವಿನಿಮಯ ಬೋನಸ್
  • ಟಾಟಾ ಟಿಗೋರ್ ಪೆಟ್ರೋಲ್ : 30 ಸಾವಿರ ನಗದು ರಿಯಾಯಿತಿ + ರೂ.10 ಸಾವಿರ ವಿನಿಮಯ ಬೋನಸ್
  • ಟಾಟಾ ಟಿಗೋರ್ ಸಿಎನ್‌ಜಿ : 20 ಸಾವಿರ ನಗದು ರಿಯಾಯಿತಿ + ರೂ.10 ಸಾವಿರ ವಿನಿಮಯ ಬೋನಸ್
  • ಟಾಟಾ ಆಲ್ಟ್ರೋಜ್ ಪೆಟ್ರೋಲ್, ಡೀಸೆಲ್ : 30 ಸಾವಿರ ನಗದು ರಿಯಾಯಿತಿ + ರೂ.10 ಸಾವಿರ ವಿನಿಮಯ ಬೋನಸ್
  • Tata Altroz ​​DCA : 10 ಸಾವಿರ ನಗದು ರಿಯಾಯಿತಿ + ರೂ.10 ಸಾವಿರ ವಿನಿಮಯ ಬೋನಸ್

ಇದನ್ನು ಓದಿ:4ನೇ ತಲೆಮಾರಿನ ಹೊಸ ಮಾರುತಿ ಸ್ವಿಫ್ಟ್​ ಕಾರು ಬಿಡುಗಡೆ: ಬೆಲೆ 6.49 ಲಕ್ಷದಿಂದ ಆರಂಭ.. ಕಾರಿನ ವಿನ್ಯಾಸ ಹೇಗಿದೆ ಗೊತ್ತಾ? - MARUTI SUZUKI SWIFT

ಅಕ್ಷಯ ತೃತೀಯಕ್ಕೆ ಚಿನ್ನ ಏಕೆ ಖರೀದಿಸಬೇಕು? ಬಂಗಾರ ದುಬಾರಿ ಅನಿಸಿದ್ರೆ ಇರುವ ಆಯ್ಕೆಗಳೇನು? - Akshaya Tritiya 2024ಸಾಮೂಹಿಕ ಅನಾರೋಗ್ಯ ರಜೆ ಹಾಕಿದ ಸಿಬ್ಬಂದಿ; 70 ಏರ್ ಇಂಡಿಯಾ ವಿಮಾನ ಹಾರಾಟ ರದ್ದು - Air India Express Flights Cancelled

ETV Bharat Logo

Copyright © 2024 Ushodaya Enterprises Pvt. Ltd., All Rights Reserved.