ಈಗ ಒಂದು ಕಾರು ಹೊಂದುವುದು ಲಕ್ಷುರಿಯಲ್ಲ, ಅಗತ್ಯವಾಗಿ ಬೇಕಿರುವ ವಸ್ತುವೆನ್ನಬಹುದು. ಕಡಿಮೆ ಮೌಲ್ಯದಲ್ಲಿ ಸೊಗಸಾದ ವಿನ್ಯಾಸ ಮತ್ತು ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ ಕಾರನ್ನು ಖರೀದಿಸಲು ಜನರು ಆಶಿಸುತ್ತಾರೆ. ಕೆಲ ಗಟ್ಟಿಕುಳಗಳು ಹೆಚ್ಚಿನ ಮೈಲೇಜ್ ಕೊಡುವ ಕಾರುಗಳ ಕಡೆಗೆ ಮನಸ್ಸು ಮಾಡುತ್ತಾರೆ. ನೀವು ಕೂಡ ಅದೇ ರೀತಿಯ ಯೋಚನೆಯಲ್ಲಿದ್ದರೆ, ಇಲ್ಲಿದೆ ನಿಮಗೆ ಒಳ್ಳೆಯ ಸುದ್ದಿ. ದೇಶದಲ್ಲಿ ಟಾಪ್ ಮಾಡೆಲ್ ಕಾರುಗಳು ಕೇವಲ 10 ಲಕ್ಷ ರೂಪಾಯಿ ಬಜೆಟ್ನಲ್ಲಿ ಲಭ್ಯವಿವೆ.
1. ಟಾಟಾ ಪಂಚ್: ಟಾಟಾ ಮೋಟಾರ್ಸ್ ಕಂಪನಿ 2021ರ ಅಕ್ಟೋಬರ್ನಲ್ಲಿ ಪಂಚ್ ಎಸ್‌ಯುವಿ ಕಾರನ್ನು ಬಿಡುಗಡೆ ಮಾಡಿದೆ. ಗ್ರಾಹಕರು ಇದನ್ನು 5.49 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಆರಂಭಿಕ ಬೆಲೆಯಲ್ಲಿ ಪಡೆಯಬಹುದು. ಅಲ್ಲದೇ, 6 ಲಕ್ಷ ರೂಪಾಯಿ ವೆಚ್ಚದಲ್ಲಿ ಎಂಟ್ರಿ ಲೆವೆಲ್ ಪ್ಯೂರ್ ಎಂಟಿ ರೂಪಾಂತರದಲ್ಲೂ ಲಭ್ಯವಿದೆ. ಟಾಟಾ ಪಂಚ್ ಸದ್ಯ ಪ್ಯೂರ್, ಅಡ್ವೆಂಚರ್, ಅಕಾಂಪ್ಲಿಶ್ಡ್ ಮತ್ತು ಕ್ರಿಯೇಟಿವ್ ಎಂಬ 4 ರೂಪಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯ. ಈ ಕಾರು 7 ಬಣ್ಣಗಳ ಆಯ್ಕೆ ಹೊಂದಿದೆ.
2. ಟಾಟಾ ನೆಕ್ಸಾನ್: ಟಾಟಾ ಮೋಟಾರ್ಸ್‌ನ ಮತ್ತೊಂದು ಮಾದರಿ ಟಾಟಾ ನೆಕ್ಸಾನ್. ಕಾರಿನ ಬೆಲೆ 9.74 ಲಕ್ಷ (ಎಕ್ಸ್ ಶೋ ರೂಂ). ನೆಕ್ಸಾನ್ ಸ್ಮಾರ್ಟ್, ಸ್ಮಾರ್ಟ್+, ಸ್ಮಾರ್ಟ್+ S, ಪ್ಯೂರ್, ಪ್ಯೂರ್ S, ಕ್ರಿಯೇಟಿವ್, ಕ್ರಿಯೇಟಿವ್+, ಕ್ರಿಯೇಟಿವ್+ S, ಫಿಯರ್ಲೆಸ್, ಫಿಯರ್ಲೆಸ್ S, ಫಿಯರ್ಲೆಸ್ + S ಎಂಬ 11 ಮಾದರಿಯಲ್ಲಿ ಲಭ್ಯ. ನೆಕ್ಸಾನ್ 2023 ಕಾರು ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್, ರೆನಾಲ್ಟ್ ಕೈಗಾರ್, ಮಹೀಂದ್ರಾ ಎಕ್ಸ್ಯುವಿ300 ಮತ್ತು ನಿಸ್ಸಾನ್ ಮ್ಯಾಗ್ನೈಟ್‌ನೊಂದಿಗೆ ಸ್ಪರ್ಧೆಯಲ್ಲಿದೆ.
3. ಮಾರುತಿ ಬ್ರೆಜ್ಜಾ: ಬ್ರೆಜ್ಜಾ ಸಬ್-4 ಮೀಟರ್ ಎಸ್‌ಯುವಿ ಮಾದರಿಯದ್ದಾಗಿದೆ. ಇದು 1.5 ಲೀಟರ್, 4 ಸಿಲಿಂಡರ್, ಎನ್ಎ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 102 ಬಿಹೆಚ್ಪಿ ಪವರ್ ಮತ್ತು 137ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಸಿಎನ್ಜಿ ಮಾದರಿಯಲ್ಲಿ 87 ಬಿಹೆಚ್ಪಿ ಪವರ್ ಮತ್ತು 121ಎನ್ಎಂ ಟಾರ್ಕ್ ಸಾಮರ್ಥ್ಯ ಹೊಂದಿದೆ. ಇದು 5 ಸ್ಪೀಡ್ ಮ್ಯಾನುವಲ್ ಮತ್ತು 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಹೊಂದಿದೆ. ಹ್ಯುಂಡೈ ವೆನ್ಯೂ ಮತ್ತು ಕಿಯಾ ಸೋನೆಟ್‌ಗೆ ಪೈಪೋಟಿ ನೀಡುತ್ತಿರುವ ಮಾರುತಿ ಸುಜುಕಿ ಬ್ರೆಜ್ಜಾ ಬೆಲೆ 8.29 ಲಕ್ಷ ರೂಪಾಯಿಯಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ.
4. ಮಾರುತಿ ಸ್ವಿಫ್ಟ್: ಸ್ವಿಫ್ಟ್ ಮಾರುತಿ ಸುಜುಕಿಯ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಇದರ ಬೆಲೆ ಸುಮಾರು 5.99 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಮಾರುತಿ ಸುಜುಕಿ ಕಂಪನಿಯು ಸ್ವಿಫ್ಟ್ ಕಾರನ್ನು ಪೆಟ್ರೋಲ್ ಮತ್ತು ಡೀಸೆಲ್ನ ಎರಡು ಮಾದರಿಯಲ್ಲಿ ಹೊರತಂದಿದೆ. LXi, VXi, ZXi, ZXi Plus ಎಂಬ 4 ಮಾದರಿಗಳಲ್ಲಿ ಲಭ್ಯವಿದೆ. ಸ್ವಿಫ್ಟ್ 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 89bhp ಪವರ್ ಮತ್ತು 113Nm ಟಾರ್ಕ್ ಸಾಮರ್ಥ್ಯ ಹೊಂದಿದೆ. ಸಿಎನ್ಜಿ ರೂಪಾಂತರದಲ್ಲಿ 76 bhp ಪವರ್ ಮತ್ತು 98Nm ಟಾರ್ಕ್ ಅನ್ನು ಇದು ಉತ್ಪಾದಿಸುತ್ತದೆ. 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳಿವೆ.
5. ಮಹೀಂದ್ರ ಎಕ್ಸ್ಯುವಿ300: ಬಲಿಷ್ಟ ಕಾರುಗಳನ್ನು ನೀಡಿದ ಮಹೀಂದ್ರ ಕಂಪನಿಯು ಎಕ್ಸ್ಯುವಿ300 ಸಬ್ 4 ಮೀಟರ್ ಎಸ್‌ಯುವಿ ಕಾರನ್ನು ಪರಿಚಯಿಸಿದೆ. ಇದು W2, W4, W6, W8, W8 (O) ಎಂಬ 5 ಮಾದರಿಗಳಲ್ಲಿ ಲಭ್ಯವಿದೆ. ಮಹೀಂದ್ರ ಎಕ್ಸ್ಯುವಿ ಕಾರಿನ ಆರಂಭಿಕ ಬೆಲೆ 7.99 ಲಕ್ಷ (ಎಕ್ಸ್ ಶೋ ರೂಂ) ರೂ.ಗೆ ಲಭ್ಯವಿದೆ. ಗ್ರಾಹಕರು ಇದನ್ನು ಬ್ಲೇಜಿಂಗ್ ಬ್ರೋಂಜ್, ನಾಪೋಲಿ ಬ್ಲಾಕ್, ಎವರೆಸ್ಟ್ ವೈಟ್ ಬಣ್ಣದ ಆಯ್ಕೆಯಲ್ಲಿ ಖರೀದಿಸಬಹುದು. ಈ ಕಾರಿನಲ್ಲಿ 5 ಜನರು ಆರಾಮವಾಗಿ ಪ್ರಯಾಣಿಸಲು ಸೂಕ್ತವಾಗಿದೆ.