ETV Bharat / business

ವಿದೇಶಗಳಲ್ಲಿ ಭಾರತೀಯರಿಂದ 109 ಯುನಿಕಾರ್ನ್​ ಸ್ಟಾರ್ಟ್​ಅಪ್​ಗಳ ಸ್ಥಾಪನೆ: ವರದಿ - UNICORN STARTUPS

author img

By ETV Bharat Karnataka Team

Published : Apr 10, 2024, 12:34 PM IST

ಭಾರತೀಯರು ಭಾರತದ ಹೊರಗೆ 109 ಯುನಿಕಾರ್ನ್​ ಸ್ಟಾರ್ಟ್​ಅಪ್​ಗಳನ್ನು ಸ್ಥಾಪಿಸಿದ್ದಾರೆ ಎಂದು ವರದಿ ಹೇಳಿದೆ.

109 unicorn startups set up by Indians abroad Report
109 unicorn startups set up by Indians abroad Report

ನವದೆಹಲಿ: ಭಾರತೀಯ ನವೋದ್ಯಮಿಗಳು ಭಾರತದ ಹೊರಗೆ 109 ಯುನಿಕಾರ್ನ್​ಗಳನ್ನು ಸ್ಥಾಪಿಸಿದ್ದಾರೆ ಎಂದು ಗ್ಲೋಬಲ್ ಯೂನಿಕಾರ್ನ್ ಇಂಡೆಕ್ಸ್ 2024 ರ ವರದಿ ಹೇಳಿದೆ. ಹಾಗೆಯೇ ಭಾರತೀಯರು ಭಾರತದಲ್ಲಿ 109 ಯುನಿಕಾರ್ನ್​ಗಳನ್ನು ಆರಂಭಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಗ್ಲೋಬಲ್ ಯುನಿಕಾರ್ನ್ ಇಂಡೆಕ್ಸ್ ಇದು 2000 ರ ದಶಕದಲ್ಲಿ ಸ್ಥಾಪಿಸಲಾದ ವಿಶ್ವದ ಸ್ಟಾರ್ಟ್​ಅಪ್​ಗಳಿಗೆ ಶ್ರೇಯಾಂಕ ನೀಡುವ ಸೂಚ್ಯಂಕ ಇದಾಗಿದೆ.

ಕನಿಷ್ಠ ಒಂದು ಬಿಲಿಯನ್ ಡಾಲರ್ ಮೌಲ್ಯದ ಮೂಲ ಬಂಡವಾಳದೊಂದಿಗೆ ಆರಂಭವಾಗುವ ಮತ್ತು ಇನ್ನೂ ಸಾರ್ವಜನಿಕ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್​ ಆಗಿರದ ಸ್ಟಾರ್ಟ್ಅಪ್​ಗಳನ್ನು ಯುನಿಕಾರ್ನ್ ಎಂದು ಕರೆಯಲಾಗುತ್ತದೆ. ಹುರುನ್ ರಿಸರ್ಚ್ ಇನ್ ಸ್ಟಿಟ್ಯೂಟ್​ನ ವರದಿಯ ಪ್ರಕಾರ 67 ಯುನಿಕಾರ್ನ್​ಗಳೊಂದಿಗೆ ಭಾರತವು ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದೆ. ತಲಾ 8 ಬಿಲಿಯನ್ ಡಾಲರ್ ಮೌಲ್ಯದ ಆನ್ - ಡಿಮ್ಯಾಂಡ್ ಡೆಲಿವರಿ ಸ್ಟಾರ್ಟ್ಅಪ್ ಸ್ವಿಗ್ಗಿ ಮತ್ತು ಫ್ಯಾಂಟಸಿ ಸ್ಪೋರ್ಟ್ಸ್ ಪ್ಲಾಟ್​ಫಾರ್ಮ್ ಡ್ರೀಮ್ 11 ಹಾಗೂ 7.5 ಬಿಲಿಯನ್ ಡಾಲರ್ ಮೌಲ್ಯದ ರೇಜರ್ ಪೇ ಇವು ಭಾರತದ ಮುಂಚೂಣಿಯ ಯುನಿಕಾರ್ನ್​ಗಳಾಗಿವೆ.

"ಭಾರತೀಯ ನವೋದ್ಯಮಿಗಳು ಬೇರೆ ಯಾವುದೇ ದೇಶಕ್ಕಿಂತ ಹೆಚ್ಚು ಕಡಲಾಚೆಯ ಯುನಿಕಾರ್ನ್​ಗಳನ್ನು ಆರಂಭಿಸಿರುವುದು ಒಂದು ಮಹತ್ವದ ಅಂಶವಾಗಿದೆ. ಭಾರತೀಯರು ಭಾರತದಲ್ಲಿ ಸ್ಥಾಪಿಸಿರುವ 67 ಯುನಿಕಾರ್ನ್​ಗಳಿಗೆ ಹೋಲಿಸಿದರೆ ಭಾರತದ ಹೊರಗೆ 109 ಯುನಿಕಾರ್ನ್​ಗಳನ್ನು ಸಹ-ಸ್ಥಾಪಿಸಿದ್ದಾರೆ (ಕೋ ಫೌಂಡಿಂಗ್)" ಎಂದು ವರದಿ ಹೇಳಿದೆ.

ಭಾರತದ ಹೊರಗೆ ಸ್ಥಾಪಿಸಲಾದ ಯುನಿಕಾರ್ನ್​​ಗಳ ಪೈಕಿ 95 ಯುನಿಕಾರ್ನ್​ಗಳು ಅಮೆರಿಕದ ಬೇ ಏರಿಯಾದಲ್ಲಿದ್ದರೆ, ಯುಕೆಯಲ್ಲಿ ನಾಲ್ಕು, ಸಿಂಗಾಪುರದಲ್ಲಿ ಮೂರು ಮತ್ತು ಜರ್ಮನಿಯಲ್ಲಿ ಎರಡು ಯುನಿಕಾರ್ನ್​ ಇವೆ ಎಂದು ಸೂಚ್ಯಂಕ ತಿಳಿಸಿದೆ. ಅಮೆರಿಕ, ಭಾರತ ಮತ್ತು ಇಂಗ್ಲೆಂಡ್​​​​​​​ನ ಷೇರು ಮಾರುಕಟ್ಟೆಗಳಲ್ಲಿ ಗಮನಾರ್ಹ ಪ್ರಮಾಣದ ಯುನಿಕಾರ್ನ್ ಐಪಿಒಗಳು ಬಂದಿಲ್ಲ.

"ವಿಶ್ವದ ಯುನಿಕಾರ್ನ್​ಗಳ ಈ ಪಟ್ಟಿಯು ಹೊಸ ಕ್ಷೇತ್ರಗಳಲ್ಲಿ ಮೌಲ್ಯ ಸೃಷ್ಟಿಯನ್ನು ಹೆಚ್ಚಿಸಲು ಮತ್ತು ದೇಶಗಳು ಮತ್ತು ನಗರಗಳು ತಮ್ಮ ಭವಿಷ್ಯದ ಆರ್ಥಿಕತೆಗೆ ಯುನಿಕಾರ್ನ್​ಗಳ ಮಹತ್ವವನ್ನು ಗುರುತಿಸಲು ವ್ಯಕ್ತಿಗಳನ್ನು ಪ್ರೇರೇಪಿಸುತ್ತದೆ" ಎಂದು ವರದಿ ಹೇಳಿದೆ.

ವಿಶ್ವದ 53 ದೇಶಗಳ 291 ನಗರಗಳಲ್ಲಿ ಯುನಿಕಾರ್ನ್​ಗಳು ಸ್ಥಾಪನೆಯಾಗಿವೆ. ಕಳೆದ ವರ್ಷ 48 ದೇಶಗಳ 271 ನಗರಗಳಲ್ಲಿ ಯುನಿಕಾರ್ನ್​ಗಳಿದ್ದವು. ಅಮೆರಿಕದ 703 ಯುನಿಕಾರ್ನ್​ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಚೀನಾ 340 ಯುನಿಕಾರ್ನ್​ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ವಿಶ್ವದಾದ್ಯಂತ 1,453 ಯುನಿಕಾರ್ನ್​ಗಳಿವೆ ಎಂದು ಹುರುನ್ ವರದಿ ತಿಳಿಸಿದೆ. ಇದು ಹೊಸ ವಿಶ್ವ ದಾಖಲೆಯಾಗಿದೆ.

ಇದನ್ನೂ ಓದಿ : ಸ್ಯಾಮ್​ಸಂಗ್​ ಗ್ಯಾಲಕ್ಸಿ M ಸರಣಿಯ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ: ₹__ಆರಂಭಿಕ ಬೆಲೆಯಲ್ಲಿ ಲಭ್ಯ - Samsung Smartphones

ETV Bharat Logo

Copyright © 2024 Ushodaya Enterprises Pvt. Ltd., All Rights Reserved.