ETV Bharat / bharat

ಅಯೋಧ್ಯೆಯ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ವಿಡಿಯೋ ತೋರಿಸಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು

author img

By ETV Bharat Karnataka Team

Published : Feb 20, 2024, 12:01 PM IST

ಅಯೋಧ್ಯೆಯ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ವಿಡಿಯೋ ತೋರಿಸುತ್ತಲೇ ವೈದ್ಯರು ಯಶಸ್ವಿಯಾಗಿ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

Ayodhya Ram Pratishtha  ಅಯೋಧ್ಯೆಯ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ  ವಿಡಿಯೋ ತೋರಿಸಿ ಶಸ್ತ್ರಚಿಕಿತ್ಸೆ  ಮೆದುಳಿನ ಶಸ್ತ್ರಚಿಕಿತ್ಸೆ ಯಶಸ್ವಿ  Brain surgery successful
ಅಯೋಧ್ಯೆಯ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ವಿಡಿಯೋ ತೋರಿಸಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು

ಗುಂಟೂರು (ಆಂಧ್ರ ಪ್ರದೇಶ): ವಿಡಿಯೋ ತೋರಿಸಿ ಶಸ್ತ್ರಚಿಕಿತ್ಸೆ ಮಾಡುವುದರಲ್ಲಿ ಹೆಸರುವಾಸಿಯಾಗಿರುವ ಗುಂಟೂರು ಜಿಲ್ಲೆಯ ವೈದ್ಯ ಶ್ರೀನಿವಾಸ ರೆಡ್ಡಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಇದೇ ಫೆ.11ರಂದು ಗುಂಟೂರು ಜಿಲ್ಲೆಯ ಅರಂದಲ್‌ಪೇಟೆಯ ಸಾಯಿ ಆಸ್ಪತ್ರೆಯಲ್ಲಿ ಮಣಿಕಂಠ ಎಂಬವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಈ ವೇಳೆ ಅಯೋಧ್ಯೆಯ ಬಾಲರಾಮನ ಪ್ರತಿಷ್ಠಾಪನೆ ಕಾರ್ಯಕ್ರಮದ ವಿಡಿಯೋ ತೋರಿಸುತ್ತಲೇ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿ ಮುಗಿಸಿದ್ದಾರೆ.

ಗುಂಟೂರು ಜಿಲ್ಲೆಯ ಚೇಬ್ರೋಲು ಮಂಡಲದ ಗೋದಾವರೂರಿನ ಆಟೋ ಚಾಲಕ ಮಣಿಕಂಠ ಫಿಟ್ಸ್ ಕಾಯಿಲೆಯಿಂದ ಬಳಲುತ್ತಿದ್ದರು. ಇದನ್ನು ಆಪರೇಷನ್ ಮೂಲಕ ಗುಣಪಡಿಸಬಹುದು. ಆದರೆ, ಈ ಕಾಯಿಲೆಯನ್ನು ನಿರ್ಲಕ್ಷ್ಯ ಮಾಡಿದರೆ, ಕೈ ಅಲಗಾಡಿಸಲು ಮತ್ತು ಮಾತು ಕಳೆದುಕೊಳ್ಳುವ ಅಪಾಯವಿದೆ ಎಂದು ವೈದ್ಯರು ತಿಳಿಸಿದ್ದರು.

ಅರಿವಳಿಕೆ ನೀಡದೇ ಮೆದುಳಿನ ಶಸ್ತ್ರಚಿಕಿತ್ಸೆ: ಅರಿವಳಿಕೆಗೆ ಒಳಪಡಿಸದೇ ವ್ಯಕ್ತಿ ಎಚ್ಚರವಾಗಿರುವಾಗಲೇ ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಿದರೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎಂದು ವೈದ್ಯರು ಹೇಳಿಸಿದ್ದರು. ಮಣಿಕಂಠನಿಗೆ ಭಕ್ತಿ ಜಾಸ್ತಿ ಇದೆ. ಇದರೊಂದಿಗೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದ ಬಾಲರಾಮನ ಪ್ರತಿಷ್ಠಾಪನೆ ಕಾರ್ಯಕ್ರಮದ ವಿಡಿಯೋ ತೋರಿಸಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿ ಮುಗಿಸಿದ್ದಾರೆ. ಆಪರೇಷನ್ ವೇಳೆ ಆ ವಿಡಿಯೋಗಳನ್ನು ನೋಡುತ್ತಲೇ ಮಣಿಕಂಠ 'ಜೈ ಶ್ರೀರಾಮ್' ಎಂದು ಹೇಳಿದ್ದು, ಎಲ್ಲರಲ್ಲೂ ಅಚ್ಚರಿ ತಂದಿದೆ ಎಂದು ವೈದ್ಯರು ಕೂಡಾ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆ ವಿವರ: ಶ್ರೀ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಐತಿಹಾಸಿಕ ಕ್ಷಣವೊಂದು ಫೆ.22ರಂದು ಅನಾವರಣಗೊಂಡಿತ್ತು. ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯ ವೈಭವದಿಂದ ಜರುಗಿತ್ತು. ದೆಹಲಿಯಿಂದ ಅಯೋಧ್ಯೆಗೆ ಬಂದ ಪ್ರಧಾನಿ ಮೋದಿ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಶ್ರೀರಾಮ ಮಂದಿರಕ್ಕೆ ತಲುಪಿದ್ದರು. ಬಾಲರಾಮನಿಗೆ ವಿಶೇಷವಾದ ವಸ್ತ್ರಗಳನ್ನು ತಂದು ಪಂಡಿತರಿಗೆ ಅರ್ಪಿಸಿದ್ದರು.

ಪ್ರಧಾನಿ ಮೋದಿ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಲಾಗಿತ್ತು. ವೇದ ಮಂತ್ರ, ಮಂಗಳವಾದ್ಯಗಳೊಂದಿಗೆ ಗರ್ಭಗುಡಿಯಲ್ಲಿರುವ ರಾಮಲಲ್ಲಾ ಪ್ರತಿಮೆಗೆ ಪ್ರಧಾನಿ ನರೇಂದ್ರ ಮೋದಿ ಪ್ರಾಣ ಪ್ರತಿಷ್ಠಾಪನೆ ವಿಧಿ - ವಿಧಾನಗಳನ್ನು ನೆರವೇರಿಸಿದ್ದರು. ಮಧ್ಯಾಹ್ನ 12.20 ರಿಂದ 1ರ ನಡುವಿನ ಅಭಿಜಿತ್ ಲಗ್ನದಲ್ಲಿ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ನಡೆದಿತ್ತು. ವಿದ್ವಾಂಸರ ಸಮ್ಮುಖದಲ್ಲಿ 51 ಇಂಚು ಎತ್ತರದ ರಾಮಲಲ್ಲಾ ಪ್ರತಿಮೆ ಅನಾವರಣಗೊಂಡಿತ್ತು. ಜಗತ್ತಿನಾದ್ಯಂತ ಲಕ್ಷಾಂತರ ಜನರು ಟಿವಿಯಲ್ಲಿ ನೇರಪ್ರಸಾರ ವೀಕ್ಷಿಸಿ, ಜೈ ಶ್ರೀರಾಮ ಎಂಬ ಘೋಷಣೆ ಮೊಳಗಿದ್ದವು.

ಇದನ್ನೂ ಓದಿ: ಪುಣೆ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹100 ಕೋಟಿಗೂ ಹೆಚ್ಚು ಮೌಲ್ಯದ ಡ್ರಗ್ಸ್ ವಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.