ETV Bharat / bharat

'ಕೇಜ್ರಿವಾಲ್ ಕೋ ಆರ್ಶೀವಾದ್' ಅಭಿಯಾನ ಆರಂಭಿಸಿದ್ದೇವೆ ಎಂದ ಸುನೀತಾ ಕೇಜ್ರಿವಾಲ್​ - sunita kejriwal

author img

By ETV Bharat Karnataka Team

Published : Mar 29, 2024, 4:37 PM IST

Updated : Mar 29, 2024, 5:50 PM IST

Sunita Kejriwal press Conference: ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅರವಿಂದ್ ಕೇಜ್ರಿವಾಲ್ ನಿಜವಾದ ದೇಶಭಕ್ತ. ಇಂದಿನಿಂದ 'ಕೇಜ್ರಿವಾಲ್‌ಗೆ ಆಶೀರ್ವಾದ' ಅಭಿಯಾನ ಆರಂಭವಾಗಿದೆ ಎಂದರು.

SUNITA KEJRIWAL  KEJRIWAL KO ASHIRWAD CAMPAIGN  ARVIND KEJRIWAL ARREST
'ಕೇಜ್ರಿವಾಲ್ ಕೋ ಆರ್ಶಿವಾದ್' ಅಭಿಯಾನ ಆರಂಭಿಸಿದ್ದೇವೆ ಎಂದ ಸುನೀತಾ ಕೇಜ್ರಿವಾಲ್​

ನವದೆಹಲಿ: ಅರವಿಂದ್ ಕೇಜ್ರಿವಾಲ್ ನಿಜವಾದ ದೇಶಭಕ್ತ ಎಂದು ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ. 'ಕೇಜ್ರಿವಾಲ್ ಕೋ ಆರ್ಶಿವಾದ್' ಅಭಿಯಾನ ಆರಂಭಿಸಲಾಗುತ್ತಿದ್ದು, ಇದಕ್ಕಾಗಿ ವಾಟ್ಸ್​ಆ್ಯಪ್​ ಸಂಖ್ಯೆ 8297324624 ಕೂಡ ನೀಡಿದ್ದಾರೆ. ಈ ಸಂಖ್ಯೆಗೆ ಅರವಿಂದ್ ಕೇಜ್ರಿವಾಲ್ ಅವರಿಗೆ ನಿಮ್ಮ ಪ್ರಾರ್ಥನೆ, ಶುಭಾಶಯಗಳು ಮತ್ತು ಆಶೀರ್ವಾದಗಳನ್ನು ಕಳುಹಿಸಬಹುದು ಎಂದು ಅವರು ಹೇಳಿದರು.

ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುನೀತಾ ಕೇಜ್ರಿವಾಲ್​ ಅವರು, ನಿನ್ನೆ ಅರವಿಂದ್ ಕೇಜ್ರಿವಾಲ್ ಅವರು ನ್ಯಾಯಾಲಯದಲ್ಲಿ ತಮ್ಮ ಪರ ವಾದ ಮಂಡಿಸಿದ್ದರು. ನೀವೆಲ್ಲರೂ ಕೇಳಿರಬೇಕು, ಇಲ್ಲವಾದರೆ ಖಂಡಿತಾ ಒಮ್ಮೆ ಕೇಳಿ, ಕೋರ್ಟಿನ ಮುಂದೆ ಏನೇ ಹೇಳಿದರೂ ಧೈರ್ಯ ಬೇಕು, ಆತ ಅಪ್ಪಟ ದೇಶಭಕ್ತ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ಸರ್ವಾಧಿಕಾರದ ವಿರುದ್ಧ ಹೋರಾಡಿದ್ದು ಹೀಗೆಯೇ. ಕಳೆದ 30 ವರ್ಷಗಳಿಂದ ನಾನು ಅವರೊಂದಿಗೆ ಇದ್ದೇನೆ, ದೇಶಪ್ರೇಮ ಅವರ ಪ್ರತಿ ಅಣು ಅಣುವಿನಲ್ಲೂ ಇದೆ. ಅರವಿಂದ್ ಜಿ ಅವರು ದೇಶದ ಅತ್ಯಂತ ಶಕ್ತಿಶಾಲಿ ಭ್ರಷ್ಟ ಮತ್ತು ಸರ್ವಾಧಿಕಾರಿ ಶಕ್ತಿಗಳಿಗೆ ಸವಾಲು ಹಾಕಿದ್ದಾರೆ. ಅರವಿಂದ್ ಜೀ ಅವರನ್ನು ನಿಮ್ಮ ಸಹೋದರ, ನಿಮ್ಮ ಮಗ ಎಂದು ಕರೆದಿದ್ದೀರಿ. ಈ ಹೋರಾಟದಲ್ಲಿ ನಿಮ್ಮ ಸಹೋದರ ಮತ್ತು ನಿಮ್ಮ ಮಗನನ್ನು ನೀವು ಬೆಂಬಲಿಸುವುದಿಲ್ಲವೇ? ಎಂದು ಸುನೀತಾ ಕೇಜ್ರಿವಾಲ್​ ಪ್ರಶ್ನಿಸಿದರು.

ಸುನೀತಾ ಕೇಜ್ರಿವಾಲ್ ಅವರು, 'ನಾವೆಲ್ಲರೂ ಒಟ್ಟಾಗಿ ಈ ಹೋರಾಟವನ್ನು ಮಾಡುತ್ತೇವೆ ಎಂಬ ವಿಶ್ವಾಸವಿದೆ. ಇಂದಿನಿಂದ ನಾವು ಕೇಜ್ರಿವಾಲ್ ಕೋ ಆಶೀರ್ವಾದ್ ಎಂಬ ಹೆಸರಿನಿಂದ ಪ್ರಚಾರ ಪ್ರಾರಂಭಿಸುತ್ತಿದ್ದೇವೆ. ನೀವು ಅರವಿಂದ್ ಕೇಜ್ರಿವಾಲ್ ಅವರಿಗೆ ಬೇರೆ ಯಾವುದೇ ಸಂದೇಶವನ್ನು ಕಳುಹಿಸಲು ಬಯಸಿದರೆ, ನಾವು ನೀಡಿದ ಈ ಸಂಖ್ಯೆಗೆ ಕಳುಹಿಸಬಹುದು. ಅನೇಕ ತಾಯಂದಿರು ಮತ್ತು ಸಹೋದರಿಯರು ಅರವಿಂದ್ ಜಿ ಅವರಿಗೆ ಶುಭಾಶಯಗಳನ್ನು ಹೇಳಿದ್ದಾರೆ. ದಯವಿಟ್ಟು ಅದನ್ನು ಲಿಖಿತವಾಗಿ ಕಳುಹಿಸಿ. ಅರವಿಂದ್ ಕೇಜ್ರಿವಾಲ್‌ಗಾಗಿ ಉಪವಾಸ ಸತ್ಯಾಗ್ರಹ ಮಾಡಿರುವುದಾಗಿ ನನಗೆ ಅನೇಕ ಜನರಿಂದ ಕರೆಗಳು ಬಂದಿವೆ. ನೀವೆಲ್ಲರೂ ಅರವಿಂದ್ ಕೇಜ್ರಿವಾಲ್ ಅವರನ್ನು ಎಷ್ಟು ಪ್ರೀತಿಸುತ್ತೀರಿ, ಅದೆಲ್ಲವನ್ನೂ ಬರೆದು ಕಳುಹಿಸಿ. ಪ್ರತಿ ಕುಟುಂಬದ ಪ್ರತಿಯೊಬ್ಬ ಸದಸ್ಯರ ಸಂದೇಶವನ್ನು ಅರವಿಂದ್ ಕೇಜ್ರಿವಾಲ್‌ಗೆ ರವಾನಿಸಲಾಗುತ್ತದೆ. ಜನರ ಸಂದೇಶಗಳನ್ನು ಓದಿದ ನಂತರ ಅವರು ತುಂಬಾ ಖುಷಿಯಾಗುತ್ತದೆ ಎಂದು ಹೇಳಿದರು.

ಓದಿ: ಮತ್ತೆ ಇಡಿ ಕಸ್ಟಡಿಗೆ ಆಪ್ ನಾಯಕ: ಸಿಎಂ ಸ್ಥಾನಕ್ಕಿಲ್ಲ ಆಪತ್ತು, ಕೋರ್ಟ್​ನಲ್ಲಿ ಖುದ್ದಾಗಿ ವಾದ ಮಂಡಿಸಿದ ಕೇಜ್ರಿವಾಲ್ - Delhi Excise Policy Case

Last Updated : Mar 29, 2024, 5:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.