ETV Bharat / bharat

ಸಹಾಯಕ ಅರಣ್ಯ ವಲಯ ಅಧಿಕಾರಿ ಕೊಲೆ ಪ್ರಕರಣ: 24 ಗಂಟೆಯೊಳಗೆ ಆರೋಪಿ ಅರೆಸ್ಟ್​ - Deputy Ranger Murder Case

author img

By ETV Bharat Karnataka Team

Published : May 19, 2024, 12:15 PM IST

ಸಹಾಯಕ ಅರಣ್ಯ ವಲಯ ಅಧಿಕಾರಿ ಸಂಜಯ್ ತಿವಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 17 ರಂದು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪತ್ತೆಹಚ್ಚಿದ್ದು, ನಂತರ ಆರೋಪಿಯನ್ನು ಬಂಧಿಸಿದ್ದಾರೆ.

CHHATTISGARH  RAIGARH POLICE  DEPUTY RANGER SANJAY TIWARI  DEPUTY RANGER
ಸಹಾಯಕ ಅರಣ್ಯ ವಲಯ ಅಧಿಕಾರಿ ಕೊಲೆ ಪ್ರಕರಣದ ಆರೋಪಿ ಅರೆಸ್ಟ್​ (ETV Bharat)

ರಾಯ್‌ಗಢ (ಛತ್ತೀಸ್‌ಗಢ): ಸಹಾಯಕ ಅರಣ್ಯ ವಲಯ ಅಧಿಕಾರಿ ಸಂಜಯ್ ತಿವಾರಿ ಅವರು ಮೇ 16 ರಂದು ಧರಮ್‌ಜೈಗಢ ಮುಖ್ಯರಸ್ತೆ ಬಳಿ ಅಪಘಾತದಲ್ಲಿ ಸಾವನ್ನಪ್ಪಿಲ್ಲ. ಆದರೆ, ಕೊಲೆ ಮಾಡಲಾಗಿದೆ ಎಂದು ಪೊಲೀಸರು ಮೇ 17 ರಂದು ಬಹಿರಂಗಪಡಿಸಿದ್ದರು. ಪೊಲೀಸರು ಆರೋಪಿಯನ್ನು ಬಂಧಿಸಿ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿ ಬನ್ಸತ್ ಕುಮಾರ್ ಯಾದವ್, ತಿವಾರಿ ಜೊತೆಗಿನ ಹಳೆಯ ವಿವಾದಕ್ಕೆ ಸೇಡು ತೀರಿಸಿಕೊಳ್ಳಲು ಹತ್ಯೆಗೆ ಸಂಚು ರೂಪಿಸಿದ್ದ. ಮೇ 16 ರಂದು ಯಾದವ್ ಅವರು ಬೈಕ್‌ನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬೊಲೆರೊದಿಂದ ಸಂಜಯ್ ತಿವಾರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪೊಲೀಸ್ ಅಧಿಕಾರಿ ಹೇಳಿದ್ದೇನು?: ಧರಮ್‌ಜೈಗಢದ ಉಪವಿಭಾಗೀಯ ಪೊಲೀಸ್ ಅಧಿಕಾರಿ ಸಿದ್ಧಾರ್ಥ್ ತಿವಾರಿ ಮಾತನಾಡಿ, ''ಮೇ 16 ರಂದು ಮಧ್ಯಾಹ್ನ ಉಪಜ್‌ನ ಧರಮ್‌ಜೈಗಢ ಮುಖ್ಯರಸ್ತೆಯ ಬಳಿ ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಧರಮ್‌ಜೈಗಢ ಪೊಲೀಸರು ಸ್ಥಳಕ್ಕೆ ಧಾವಿಸಿ, ಗಾಯಗೊಂಡ ವ್ಯಕ್ತಿಯನ್ನು ಸಿವಿಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದ್ರೆ, ಅದಾಗಲೇ ಆ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದರು. ಅಪರಿಚಿತರ ವಿರುದ್ಧ ಧರಮ್‌ಜೈಗಢ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ'' ಎಂದು ತಿಳಿಸಿದ್ದಾರೆ.

"ಐಪಿಸಿಯ ಸೆಕ್ಷನ್ 304ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಮತ್ತು ಪ್ರಕರಣದ ತನಿಖೆಗೆ ನಡೆಸಲಾಗುತ್ತಿತ್ತು. ಪೊಲೀಸರು ಮೃತರನ್ನು ಸಹಾಯಕ ಅರಣ್ಯ ರೇಂಜ್ ಅಧಿಕಾರಿ ಸಂಜಯ್ ತಿವಾರಿ ಎಂದು ಗುರುತಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ, ಘಟನಾ ಸ್ಥಳದ ಬಳಿ ಬೊಲೆರೊ ಪತ್ತೆಯಾಗಿದೆ. ಸಿಜಿ 13 ಯುಇ 0377 ನಂಬರ್ ಪ್ಲೇಟ್ ಬೊಲೆರೊನ ತೀವ್ರ ಹುಡುಕಾಟ ನಡೆಸಲಾಯಿತು. ಇನ್ನು ಬೆಹ್ರಾಪಾರಾ ಗ್ರಾಮಸ್ಥರ ಮೇಲೆ ದಾಳಿ ಮಾಡಿದ್ದ ಕುಮಾರ್​ ಯಾದವ್​ನನ್ನು ಬಂಧಿಸಿದ್ದೇವೆ.

ಯಾದವ್‌ನನ್ನು ವಿಚಾರಣೆಗೆ ಒಳಪಡಿಸಿದಾಗ, ಸಂಜಯ್ ತಿವಾರಿಯೊಂದಿಗೆ ತನಗೆ ಹಳೆಯ ದ್ವೇಷವಿತ್ತು. ಮತ್ತು ಆತನ ಮೇಲೆ ಸೇಡು ತೀರಿಸಿಕೊಳ್ಳಲು ಬಯಸಿದ್ದನು. ಗುರುವಾರ ಬೊಲೆರೋದಿಂದ ಡಿಕ್ಕಿ ಹೊಡೆದು ತಿವಾರಿಯನ್ನು ಕೊಂದಿರುವುದಾಗಿ ಯಾದವ್ ಒಪ್ಪಿಕೊಂಡಿದ್ದಾನೆ. ಪೊಲೀಸರು ಎಫ್‌ಐಆರ್‌ನಿಂದ ಐಪಿಸಿ ಸೆಕ್ಷನ್ 304ಎ ಅನ್ನು ತೆಗೆದುಹಾಕಿ, ಐಪಿಸಿಯ ಸೆಕ್ಷನ್ 302 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ " ಎಂದು ಪೊಲೀಸ್ ಅಧಿಕಾರಿ ಸಿದ್ಧಾರ್ಥ್ ತಿವಾರಿ ತಿಳಿಸಿದ್ದಾರೆ.

ಆರೋಪಿ ಯಾದವ್ ಪತ್ನಿ ಮೃತ ಸಂಜಯ್ ತಿವಾರಿಯ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎಂಬುದನ್ನೂ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ವಿಚಾರ ಹಿಂದೆಯೂ ಇಬ್ಬರ ನಡುವೆ ಹಲವು ವಿವಾದಗಳಿಗೆ ಕಾರಣವಾಗಿತ್ತು. ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಎರಡೂ ಕಡೆಯವರು ಕೌಟುಂಬಿಕ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದರು.

ಔಟ್ ಪೋಸ್ಟ್ ಇನ್ ಚಾರ್ಜ್ ರೈರುಮಖುರ್ದ್, ಸಬ್ ಇನ್ಸ್ ಪೆಕ್ಟರ್ ಮನೀಶ್ ಕಾಂತ್, ಸಹಾಯಕ ಸಬ್ ಇನ್ಸ್ ಪೆಕ್ಟರ್ ಡೇವಿಡ್ ಟೊಪ್ಪೊ, ಅಮೃತ್ ಮಿಂಜ್, ಕಾನಸ್ಟೇಬಲ್​ಗಳಾದ ಸಂತ್ ಲಾಲ್ ಪಟೇಲ್ ಮತ್ತು ವಿಜಯ್ ರಾಥಿಯಾ ಅವರು ಪ್ರಕರಣವನ್ನು 24 ಗಂಟೆಗಳಲ್ಲಿ ಭೇದಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.

ಇದನ್ನೂ ಓದಿ: ಚಲಿಸುತ್ತಿದ್ದ ಬಸ್‌ಗೆ ತಗುಲಿದ ಬೆಂಕಿ: 8 ಜನ ಸಜೀವ ದಹನ, 24ಕ್ಕೂ ಹೆಚ್ಚು ಮಂದಿಗೆ ಗಾಯ - FIRE IN BUS

ETV Bharat Logo

Copyright © 2024 Ushodaya Enterprises Pvt. Ltd., All Rights Reserved.