ETV Bharat / bharat

ಗರ್ಭಿಣಿಯಾಗಿದ್ದ ಯುವತಿಯ ಕೊಲೆ; ದೇಹವನ್ನು 20 ತುಂಡುಗಳಾಗಿ ಕತ್ತರಿಸಿ ರಸ್ತೆಗೆಸೆದ ದುಷ್ಕರ್ಮಿಗಳು

author img

By ETV Bharat Karnataka Team

Published : Feb 28, 2024, 11:38 AM IST

ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಗರ್ಭಿಣಿಯನ್ನು ಕೊಲೆ ಮಾಡಿ ಆಕೆಯ ದೇಹವನ್ನು 20 ತುಂಡುಗಳಾಗಿ ಕತ್ತರಿಸಲಾಗಿತ್ತು. ಇದಾದ ಬಳಿಕ ದೇಹದ ತುಂಡುಗಳನ್ನು ಎರಡು ಚೀಲಗಳಲ್ಲಿ ತುಂಬಿ ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದಾರೆ. ಯುವತಿಯ ಗುರುತು ಇನ್ನೂ ಪತ್ತೆಯಾಗಿಲ್ಲ.

Amroha pregnant dead body 20 pieces  Amroha dead body packed in bags  ಗರ್ಭಿಣಿಯ ಕೊಲೆ  ಪೊಲೀಸ್​ ತನಿಖೆ ಆರಂಭ  ಉತ್ತರ ಪ್ರದೇಶದ ಅಮ್ರೋಹಾ
ಗರ್ಭಿಣಿಯ ಕೊಲೆ ಮಾಡಿ ದೇಹವನ್ನು 20 ತುಂಡುಗಳಾಗಿ ಕತ್ತರಿಸಿ ರಸ್ತೆಗೆ ಎಸೆದ ದುಷ್ಕರ್ಮಿಗಳು

ಅಮ್ರೋಹ (ಉತ್ತರ ಪ್ರದೇಶ): ಜಿಲ್ಲೆಯ ಧನೂರ ಬೈಪಾಸ್ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ಎರಡು ಚೀಲಗಳಲ್ಲಿ ಗರ್ಭಿಣಿಯೊಬ್ಬರ ಶವ ಪತ್ತೆಯಾಗಿದೆ. ಯುವತಿಯ ದೇಹವನ್ನು ಹರಿತವಾದ ಆಯುಧದಿಂದ 20 ತುಂಡುಗಳಾಗಿ ಕತ್ತರಿಸಲಾಗಿದೆ. ಬಳಿಕ ಮೃತದೇಹವನ್ನು ಎರಡು ಚೀಲಗಳಲ್ಲಿ ತುಂಬಿ ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದಾರೆ. ಇದನ್ನು ಕಂಡ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಯುವತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ದೇಹದ ತುಂಡುಗಳನ್ನು ಬಟ್ಟೆಯಲ್ಲಿ ಸುತ್ತಿ ಚೀಲದಲ್ಲಿಟ್ಟಿರುವ ಹಂತಕರು: ಖೇತಾಪುರವು ಧನೌರಾ ಬೈಪಾಸ್ ರಸ್ತೆ ಬದಿಯ ಪೊದೆಗಳಲ್ಲಿ ಎರಡು ಚೀಲ ಬಟ್ಟೆ ಬಿದ್ದಿರುವುದನ್ನು ಗ್ರಾಮಸ್ಥರು ನೋಡಿದ್ದಾರೆ. ಎರಡೂ ಚೀಲಗಳಲ್ಲಿ ಬಟ್ಟೆ ತುಂಬಿತ್ತು. ಯುವತಿಯ ದೇಹವನ್ನು ತುಂಡುಗಳಾಗಿ ಕತ್ತರಿಸಿ ಬಟ್ಟೆಯೊಳಗೆ ಅವುಗಳನ್ನು ಸುತ್ತಿ ಎರಡು ಚೀಲಗಳಲ್ಲಿ ಇಟ್ಟು ಬಿಸಾಡಿ ಹೋಗಿದ್ದರು. ಈ ಬಗ್ಗೆ ದಾರಿಯಲ್ಲಿ ಸಂಚರಿಸುತ್ತಿದ್ದ ಜನರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಆ ಎರಡೂ ಚೀಲಗಳನ್ನು ಪರಿಶೀಲಿಸಿದರು. ಒಂದು ಚೀಲದಲ್ಲಿ ಮೃತ ಯುವತಿಯ ತಲೆಯಿಂದ ಸೊಂಟದವರೆಗೆ ತುಂಡಾದ ಭಾಗಗಳನ್ನು ಇಡಲಾಗಿದೆ. ಇದನ್ನು ಗಮನಿಸಿದಾಗ ಯುವತಿ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಆದರೆ ಎರಡನೇ ಬ್ಯಾಗ್‌ನಲ್ಲಿ ಮೃತದೇಹದ ಉಳಿದ ಭಾಗಗಳನ್ನು ಇಟ್ಟಿರುವುದು ಕಂಡುಬಂದಿದೆ.

ಯುವತಿಯ ಎರಡೂ ಕೈಗಳನ್ನು ಹಲವು ತುಂಡಾಗಿಸಿದ ದುಷ್ಕರ್ಮಿಗಳು: ಯುವತಿ ವಯಸ್ಸು ಸುಮಾರು 23 ರಿಂದ 24 ವರ್ಷ ಎಂದು ಅಂದಾಜಿಸಲಾಗಿದೆ. ಮೃತದೇಹದ ಭಾಗಗಳಿದ್ದ ಬ್ಯಾಗ್‌ಗಳನ್ನು ತೆರೆದು ಪರಿಶೀಲಿಸಿದ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ''ಹಂತಕರು ಯುವತಿಯನ್ನು ಅಮಾನುಷವಾಗಿ ಕೊಲೆಗೈದಿದ್ದಾರೆ. ಯುವತಿಯ ಎರಡೂ ಕೈಗಳನ್ನು ಹಲವಾರು ತುಂಡುಗಳಾಗಿ ಕತ್ತರಿಸಿದ್ದರು. ಸೊಂಟದ ಕೆಳಗಿನ ಭಾಗವನ್ನು ಹರಿತವಾದ ಆಯುಧದಿಂದ ಹಲವಾರು ತುಂಡುಗಳಾಗಿ ಕತ್ತರಿಸಿದ್ದಾರೆ'' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಾಪತ್ತೆಯಾದವರ ಬಗ್ಗೆ ತನಿಖೆ ಆರಂಭ: ''ಯುವತಿಯ ದೇಹವನ್ನು 20 ತುಂಡುಗಳಾಗಿ ಕತ್ತರಿಸಿ ಎರಡು ಚೀಲಗಳಲ್ಲಿ ರಸ್ತೆಬದಿಯಲ್ಲಿ ಎಸೆಯಲಾಗಿದೆ. ಈವರೆಗೆ ಯುವತಿಯ ಗುರುತು ಪತ್ತೆಯಾಗಿಲ್ಲ. ಸುತ್ತಮುತ್ತಲಿನ ಪ್ರದೇಶಗಳನ್ನು ಹೊರತುಪಡಿಸಿ, ಎಲ್ಲಾ ಪೊಲೀಸ್ ಠಾಣೆಗಳಲ್ಲಿ ನಾಪತ್ತೆಯಾದವರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಮೃತಪಟ್ಟಿರುವ ಯುವತಿಯ ಗುರುತು ಪತ್ತೆ ಹಚ್ಚಲಾಗುವುದು'' ಎಂದು ಸಿಒ ಅಂಜಲಿ ಕಟಾರಿಯಾ ತಿಳಿಸಿದ್ದಾರೆ. ಈ ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ: ತೆಲಂಗಾಣದಲ್ಲಿ ₹500ಗೆ ಸಿಲಿಂಡರ್​ ಗ್ಯಾಸ್; 200 ಯೂನಿಟ್​ ವಿದ್ಯುತ್​ ಉಚಿತ ಗ್ಯಾರಂಟಿ ಜಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.