ETV Bharat / bharat

ದೇಶದ ಮೊದಲ ನೀರೊಳಗಿನ ಮೆಟ್ರೋ ಮಾರ್ಗಕ್ಕೆ ಪ್ರಧಾನಿ ಮೋದಿ ಚಾಲನೆ

author img

By ETV Bharat Karnataka Team

Published : Mar 6, 2024, 11:57 AM IST

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ರಾಜಕೀಯ ಎದುರಾಳಿ ಸಿಎಂ ಮಮತಾ ಬ್ಯಾನರ್ಜಿ ಅವರ ತವರಿನಲ್ಲಿ ದೇಶದ ಮೊದಲ ನೀರೊಳಗಿನ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಿದರು.

ನೀರೊಳಗಿನ ಮೆಟ್ರೋ ಮಾರ್ಗ
ನೀರೊಳಗಿನ ಮೆಟ್ರೋ ಮಾರ್ಗ

ನವದೆಹಲಿ: ದೇಶದ ಮೊದಲ ನೀರೊಳಗಿನ ಮೆಟ್ರೋ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಉದ್ಘಾಟಿಸಿದರು. ಇದರ ಜೊತೆಗೆ 15,400 ಕೋಟಿ ರೂಪಾಯಿ ವೆಚ್ಚದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಮೆಟ್ರೋ ಕಾರ್ಮಿಕರು ಮತ್ತು ವಿದ್ಯಾರ್ಥಿಗಳೊಂದಿಗೆ ಮಾರ್ಗದ ಮೊದಲ ಸಂಚಾರದಲ್ಲಿ ಮೋದಿ ಪಯಣಿಸಿದರು. ಅವರೊಂದಿಗೆ ಮಾತುಕತೆಯನ್ನೂ ನಡೆಸಿದರು. ಅಲ್ಲದೇ, ನಿಲ್ದಾಣದಲ್ಲಿ ಸೇರಿದ ನೂರಾರು ಜನರತ್ತ ಕೈಬೀಸಿ ಸುಖಕರ ಪ್ರಯಾಣಕ್ಕೆ ಶುಭ ಕೋರಿದರು.

ಎಲ್ಲಿಂದ ಎಲ್ಲಿಗೆ ಸಂಪರ್ಕ?: ನೀರೊಳಗಿನ ಮೆಟ್ರೋ ಯೋಜನೆಯು ಕೋಲ್ಕತ್ತಾದ ಅವಳಿ ನಗರಗಳಾದ ಹೌರಾ ಮತ್ತು ಸಾಲ್ಟ್ ಲೇಕ್ ಅನ್ನು ಸಂಪರ್ಕಿಸುತ್ತದೆ. ಈ ಮಾರ್ಗದ 6 ನಿಲ್ದಾಣಗಳಲ್ಲಿ 3 ನಿಲ್ದಾಣಗಳು ನೀರಿನೊಳಗಿವೆ. ಕೋಲ್ಕತ್ತಾ ಮೆಟ್ರೋದ ಪೂರ್ವ-ಪಶ್ಚಿಮ ಕಾರಿಡಾರ್‌ನ ಹೌರಾ ಮೈದಾನ-ಎಸ್ಸ್ಪಲನೇಡ್ ವಿಭಾಗಕ್ಕೆ ಬರುತ್ತದೆ. ಇದು ಹೂಗ್ಲಿ ನದಿಯ ಅಡಿಯಲ್ಲಿ 16.6 ಕಿ.ಮೀ ದೂರವನ್ನು ಕ್ರಮಿಸುತ್ತದೆ.

ಮಕ್ಕಳು-ಸಿಬ್ಬಂದಿ ಜೊತೆ ಮೋದಿ ಮಾತುಕತೆ: ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಿದ ಬಳಿಕ ಶಾಲಾ ವಿದ್ಯಾರ್ಥಿಗಳ ಜೊತೆಗೆ ಕುಳಿತು ನೀರೊಳಗಿನ ಮೆಟ್ರೋದಲ್ಲಿ ಪ್ರಧಾನಿ ಮೊದಲ ಸವಾರಿ ನಡೆಸಿದರು. ಬಳಿಕ ಮೆಟ್ರೋ ಸಿಬ್ಬಂದಿಯ ಟ್ರೇನ್​ನಲ್ಲಿ ಜೊತೆಗೆ ಮಾತುಕತೆ ನಡೆಸಿದರು. ಈ ವೇಳೆ ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಇದ್ದರು.

ಇದನ್ನೂ ಓದಿ: ದೇಶದ ಮೊಟ್ಟ ಮೊದಲ ಅಂಡರ್ ವಾಟರ್ ಮೆಟ್ರೋ ಸೇವೆ ಇಂದಿನಿಂದ ಕೋಲ್ಕತ್ತಾದಲ್ಲಿ ಪ್ರಾರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.