ETV Bharat / bharat

ಭಾರತೀಯ ನೌಕಾಪಡೆ ಮಾಜಿ ಸಿಬ್ಬಂದಿ ಬಿಡುಗಡೆ ಬೆನ್ನಲ್ಲೇ ಫೆ.14ರಂದು ಮೋದಿ ಕತಾರ್‌ ಭೇಟಿ

author img

By PTI

Published : Feb 12, 2024, 5:23 PM IST

ಫೆಬ್ರವರಿ 14ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕತಾರ್​ಗೆ ಭೇಟಿ ನೀಡಲಿದ್ದಾರೆ.

Narendra Modi  Qatar
Narendra Modi Qatar

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇದೇ ತಿಂಗಳ 14ರಂದು ಕತಾರ್ ರಾಜಧಾನಿ ದೋಹಾಗೆ ಭೇಟಿ ನೀಡಲಿದ್ದಾರೆ. ಎರಡು ದಿನಗಳ ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರವಾಸವನ್ನು ಮುಗಿಸಿದ ನಂತರ ಪ್ರಧಾನಿ ದೋಹಾಗೆ ಪ್ರಯಾಣಿಸುವರು. ಜೈಲಿನಲ್ಲಿದ್ದ ಎಂಟು ಮಾಜಿ ಭಾರತೀಯ ನೌಕಾಪಡೆಯ ಸಿಬ್ಬಂದಿಯನ್ನು ಕತಾರ್​ ರಾಷ್ಟ್ರ ಬಿಡುಗಡೆ ಮಾಡಿದ ಒಂದು ದಿನದ ನಂತರ ಮೋದಿ ಕತಾರ್ ಭೇಟಿ ನೀಡುವ ಬಗ್ಗೆ ಸರ್ಕಾರ ಘೋಷಣೆ ಮಾಡಿದೆ. ಅವರಲ್ಲಿ ಏಳು ಮಂದಿ ಸೋಮವಾರ ಬೆಳಿಗ್ಗೆ ಭಾರತಕ್ಕೆ ಮರಳಿದರು.

ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸಲು ಪ್ರಧಾನಿ ಮೋದಿ ಮತ್ತು ಕತಾರ್ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ವಿಸ್ತೃತ ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಹೇಳಿದರು.

8 ಜನ ಭಾರತೀಯರನ್ನು ಬಿಡುಗಡೆ ಮಾಡಿದ ಕತಾರ್: ಇಸ್ರೇಲ್ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಕಳೆದ ವರ್ಷ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಎಂಟು ಭಾರತೀಯ ಮಾಜಿ ನೌಕಾ ಅಧಿಕಾರಿಗಳನ್ನು ಕತಾರ್ ಬಿಡುಗಡೆ ಮಾಡಿದೆ ಎಂದು ಭಾರತ ಸರ್ಕಾರ ಸೋಮವಾರ ಬೆಳಿಗ್ಗೆ ತಿಳಿಸಿದೆ. ದೋಹಾ ಮೂಲದ ರಕ್ಷಣಾ ಉಪಕರಣಗಳನ್ನು ತಯಾರಿಸುವ ಕಂಪನಿ ದಹ್ರಾ ಗ್ಲೋಬಲ್​ನಲ್ಲಿ ಕೆಲಸ ಮಾಡುತ್ತಿದ್ದ ಇವರನ್ನು ಆಗಸ್ಟ್ 2022 ರಲ್ಲಿ ಬಂಧಿಸಿ ಜೈಲಿನಲ್ಲಿ ಇಡಲಾಗಿತ್ತು. ನಂತರ ಕಳೆದ ವರ್ಷ ಅಕ್ಟೋಬರ್ ನಲ್ಲಿ ಅವರಿಗೆ ಮರಣದಂಡನೆ ವಿಧಿಸಲಾಗಿತ್ತು.

ಭಾರತೀಯ ಅಧಿಕಾರಿಗಳು ಮತ್ತು ಕತಾರ್ ಅಧಿಕಾರಿಗಳ ಮಧ್ಯೆ ತಿಂಗಳುಗಳ ಕಾಲ ನಡೆದ ಮಾತುಕತೆಯ ನಂತರ ಬಂಧನದಲ್ಲಿದ್ದ ಭಾರತೀಯರ ಬಿಡುಗಡೆಯಾಗಿದೆ. ಕತಾರ್ ಡಿಸೆಂಬರ್​ನಲ್ಲಿ ಎಂಟು ಜನರಿಗೆ ವಿಧಿಸಿದ್ದ ಮರಣದಂಡನೆಯನ್ನು ರದ್ದುಪಡಿಸಿದ್ದರೂ, ಅವರನ್ನು ಜೈಲಿನಲ್ಲಿಟ್ಟಿತ್ತು.

ಈ ಎಂಟು ಜನರಿಗೆ ಯಾವ ಆರೋಪಗಳ ಮೇಲೆ ಶಿಕ್ಷೆ ವಿಧಿಸಲಾಗಿತ್ತು ಎಂಬ ಬಗ್ಗೆ ಕತಾರ್ ಅಥವಾ ಭಾರತ ಎರಡೂ ದೇಶಗಳು ಮಾಹಿತಿ ನೀಡಿಲ್ಲ. ಆದಾಗ್ಯೂ ಇಸ್ರೇಲ್ ಪರವಾಗಿ ಬೇಹುಗಾರಿಕೆ ನಡೆಸಿದ ಆರೋಪವನ್ನು ಇವರ ಮೇಲೆ ಹೊರಿಸಲಾಗಿತ್ತು ಎಂದು ವರದಿಗಳು ಹೇಳಿವೆ. ಮತ್ತೊಂದು ವಿಷಯವೇನೆಂದರೆ, ಮರಣದಂಡನೆ ಜಾರಿ ಮಾಡುವುದು ಕತಾರ್​ನಲ್ಲಿ ತುಂಬಾ ಅಪರೂಪ. 2020 ರಲ್ಲಿ ಜಾರಿಗೊಳಿಸಲಾದ ಮರಣದಂಡನೆ ಶಿಕ್ಷೆಯೇ ಕೊನೆಯದಾಗಿದೆ. ಕತಾರ್​ನಲ್ಲಿ ಲಕ್ಷಾಂತರ ಭಾರತೀಯರು ಕೆಲಸ ಮಾಡುತ್ತಿರುವುದು ಗಮನಾರ್ಹ. ಕತಾರ್​ನ ಬಹುದೊಡ್ಡ ಸಂಖ್ಯೆಯ ಕಾರ್ಮಿಕರು ಭಾರತಿಯರೇ ಆಗಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನ ಭಾರತಕ್ಕೆ ದೊಡ್ಡ ಆಸ್ತಿ, ಅವರ ಆತಿಥ್ಯ ದೊಡ್ಡದು: ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.