ETV Bharat / bharat

ಮತದಾನಕ್ಕೆ ಕ್ಯೂನಲ್ಲಿ ನಿಲ್ಲದ ಶಾಸಕ; ಆಕ್ಷೇಪಿಸಿದ ವ್ಯಕ್ತಿಗೆ ಕಪಾಳಮೋಕ್ಷ, ಎಂಎಲ್ಎ​ಗೂ ಬಿತ್ತು ಏಟು! ವಿಡಿಯೋ - Mla Beat Voter

author img

By ETV Bharat Karnataka Team

Published : May 13, 2024, 12:59 PM IST

Updated : May 13, 2024, 1:38 PM IST

MLA Beat Voter : ಅವರು ಆ ಕ್ಷೇತ್ರದ ಶಾಸಕ. ಜನತೆಗೆ ಮಾದರಿಯಾಗಬೇಕಿದ್ದ ಅವರು ಅನಿರೀಕ್ಷಿತವಾಗಿ ಅವಮಾನಿಸಿದ್ದಾರೆ. ಮತಗಟ್ಟೆಯಲ್ಲಿ ಮತದಾರನ ಮೇಲೆ ಹಲ್ಲೆ ನಡೆಸಿದಾಗ, ಮತದಾರ ಸಹ ಶಾಸಕನ ಮೇಲೆ ಹಲ್ಲೆ ನಡೆಸಿದ್ದಾನೆ. ಕೂಡಲೇ ಸಿಟ್ಟಿಗೆದ್ದ ಶಾಸಕರ ಬೆಂಬಲಿಗರು ಮತದಾರನನ್ನು ಹಿಗ್ಗಾಮುಗ್ಗಾ ಥಳಿಸಿದರು.

MLA VOTER SLAPPED EACH OTHER  ANNABATTUNI SHIVAKUMAR BEAT VOTER  VOTER BEAT TO MLA  ANDHRA PRADESH
ತಿರುಗಿ ಶಾಸಕನಿಗೆ ಕಪಾಳಮೋಕ್ಷ ಮಾಡಿದ ವೋಟರ್ (ETV Bharat)

ತಿರುಗಿ ಶಾಸಕನಿಗೆ ಕಪಾಳಮೋಕ್ಷ ಮಾಡಿದ ವೋಟರ್ (ETV Bharat)

ಗುಂಟೂರು (ಆಂಧ್ರಪ್ರದೇಶ): ಮತ ಹಾಕಲು ಹೋದ ಶಾಸಕ ಉದ್ಧಟತನ ಮೆರೆದ ಘಟನೆ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ. ಸರತಿ ಸಾಲಿನಲ್ಲಿ ನಿಂತಿದ್ದ ಮತದಾರ ಶಾಸಕನಿಗೆ ಕಪಾಳಮೋಕ್ಷ ಮಾಡಿದ್ದಾನೆ. ಈ ಘಟನೆ ಜಿಲ್ಲೆಯ ತೆನಾಲಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ.

MLA Annabattuni Shivakumar Beats Voter : ವೈಎಸ್​ಆರ್​ಸಿಪಿ ಶಾಸಕ ಶಿವಕುಮಾರ್ ಮತದಾರನ ಮೇಲೆ ಹಲ್ಲೆ ನಡೆಸಿದ್ದಾರೆ. ಐತಾನಗರದ ಮತಗಟ್ಟೆಗೆ ಮತ ಹಾಕಲು ಬಂದ ಶಾಸಕ ಸರತಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ಒಳಗೆ ನುಗ್ಗಿದರು. ಸರತಿ ಸಾಲಿನಲ್ಲಿ ಬರುವಂತೆ ಒತ್ತಾಯಿಸಿದ ಮತದಾರನ ಮೇಲೆ ಶಾಸಕ ಸಿಟ್ಟಿಗೆದ್ದರು. ಇದ್ಯಾವುದನ್ನೂ ಯೋಚಿಸದೆ ಸೊಕ್ಕಿನಿಂದ ಅವನ ಬಳಿಗೆ ಹೋಗಿ ಕಪಾಳಮೋಕ್ಷ ಮಾಡಿದರು. ಕೂಡಲೇ ಮತದಾರ ಕೂಡ ಶಾಸಕ ಶಿವಕುಮಾರ್ ಅವರ ಕೆನ್ನೆಗೆ ಬಾರಿಸಿದ. ಇದರಿಂದ ಕೆರಳಿದ ಶಾಸಕರ ಬೆಂಬಲಿಗರು ಮನಬಂದಂತೆ ಹಲ್ಲೆ ನಡೆಸಿದ್ದರಿಂದ ಮತದಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಘಟನೆಯಿಂದ ಮತಗಟ್ಟೆ ಕೇಂದ್ರಕ್ಕೆ ಬಂದಿದ್ದ ಮತದಾರರೆಲ್ಲರೂ ಭಯಭೀತರಾಗಿದ್ದರು.

ಐತಾನಗರದಲ್ಲಿ ಮತದಾರರ ಮೇಲೆ ನಡೆದ ಹಲ್ಲೆಯ ಬಗ್ಗೆ ವಿಶೇಷ ಪೊಲೀಸ್ ವೀಕ್ಷಕ ಮಿಶ್ರಾ ಆಕ್ರೋಶ ವ್ಯಕ್ತಪಡಿಸಿದರು. ಐತಾನಗರದ ಮತಗಟ್ಟೆಯಲ್ಲಿನ ಪರಿಸ್ಥಿತಿಯ ಬಗ್ಗೆ ತಿಳಿದ ದೀಪಕ್ ಮಿಶ್ರಾ ಅವರು ಸಿಸಿಟಿವಿ ದೃಶ್ಯಾವಳಿಗಳನ್ನು ತರಲು ಆದೇಶಿಸಿದರು. ಹಿಂಸಾತ್ಮಕ ಘಟನೆಗಳು ನಡೆದ ಇತರ 5 ಪ್ರದೇಶಗಳಲ್ಲಿನ ಪರಿಸ್ಥಿತಿಯ ಬಗ್ಗೆ ವರದಿ ಕೇಳಲಾಗಿದೆ. ಕಮಾಂಡ್ ಕಂಟ್ರೋಲ್ ರೂಂನಿಂದ ಮತದಾನದ ಮಾದರಿಯನ್ನು ವೀಕ್ಷಿಸಲಾಯಿತು. ಯಾವುದೇ ಹಿಂಸಾಚಾರ ನಡೆಯದಂತೆ ನೋಡಿಕೊಳ್ಳಬೇಕು ಎಂದರು.

ಓದಿ: ಬೆಳಗ್ಗೆ 11 ಗಂಟೆವರೆಗೆ ಶೇ.24.87 ರಷ್ಟು ಮತದಾನ: ಆಂಧ್ರ, ಪಶ್ಚಿಮಬಂಗಾಳದಲ್ಲಿ ಘರ್ಷಣೆ; ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ - Lok Sabha Election 2024

Last Updated : May 13, 2024, 1:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.