ETV Bharat / bharat

ಮೀಸೆ ಹೊತ್ತ ಗಂಡಸರು ಸೀರೆಯುಟ್ಟು, ಒಡವೆ ತೊಟ್ಟು ಹೋಳಿ ಆಡುವರು! - Men Get Ready With Sarees For Holi

author img

By ETV Bharat Karnataka Team

Published : Mar 26, 2024, 1:21 PM IST

Updated : Mar 26, 2024, 5:17 PM IST

ಸೀರೆಯುಟ್ಟು ಶೃಂಗಾರಗೊಳ್ಳುವ ಪುರುಷರು ದೇವಸ್ಥಾನಕ್ಕೆ ತೆರಳಿ, ಗ್ರಾಮಕ್ಕೆ ಯಾವುದೇ ಸಮಸ್ಯೆಗಳು ಬಾರದಂತೆ ಬೇಡಿಕೊಂಡು ರತಿ ಮನ್ಮಥರಿಗೆ ಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸುತ್ತಾರೆ.

Men get ready with sarees, jewelry, makeup for Holi in Andhra Pradesh
ಹೋಳಿ ಹಬ್ಬಕ್ಕೆ ಮಹಿಳೆಯರಂತೆ ಸೀರೆಯುಟ್ಟು ಶೃಂಗಾರಗೊಳ್ಳುವ ಪುರುಷರು

ಹೋಳಿ ಹಬ್ಬಕ್ಕೆ ಮಹಿಳೆಯರಂತೆ ಸೀರೆಯುಟ್ಟು ಶೃಂಗಾರಗೊಳ್ಳುವ ಪುರುಷರು

ಕರ್ನೂಲು(ಆಂಧ್ರಪ್ರದೇಶ): ಹೋಳಿ ಎಂದರೆ ಎಲ್ಲರಿಗೂ ನೆನಪಾಗುವುದು ಬಣ್ಣಗಳ ಲೋಕ. ತಮ್ಮ ಪ್ರೀತಿಪಾತ್ರರ ಜೊತೆಗೆ ಬಣ್ಣಗಳ ಜೊತೆ ಆಟವಾಡಿ ಸಂಭ್ರಮಿಸುವ ಹಬ್ಬ ಇದು. ಆದರೆ ಆಂಧ್ರಪ್ರದೇಶದ ಒಂದು ಪ್ರದೇಶದಲ್ಲಿ ಹೋಳಿ ಹಬ್ಬವೆಂದರೆ ಬಣ್ಣಗಳಲ್ಲ, ಹೊಸ ಸೀರೆ, ಆಭರಣಗಳನ್ನು ಧರಿಸಿ ಅಲಂಕಾರಗೊಳ್ಳುವ ಆಚರಣೆ. ಅದರಲ್ಲೂ ಇಲ್ಲೊಂದು ಟ್ವಿಸ್ಟ್​ ಇದೆ. ಇಲ್ಲಿ ಸೀರೆ, ಒಡವೆ ಹಾಕಿಕೊಂಡು ಶೃಂಗಾರಗೊಳ್ಳುವುದು ಮಹಿಳೆಯರಲ್ಲ, ಗಂಡಸರು.

ಹೌದು, ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಆದೋನಿ ಮಂಡಲದ ಸಂತೆಕೂಡ್ಲೂರು ಗ್ರಾಮದಲ್ಲಿ ಈ ಹೋಳಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಮೀಸೆ ಹೊತ್ತ ಗಂಡಸರು, ಯುವಕರು, ಹುಡುಗರು ಹೋಳಿಗೆ ಸೀರೆ ಉಟ್ಟು, ಒಡವೆ ತೊಟ್ಟು, ಮಹಿಳೆಯರಂತೆ ಅಲಂಕಾರ ಮಾಡಿಕೊಳ್ಳುತ್ತಾರೆ. ನಂತರ ದೇವಸ್ಥಾನಕ್ಕೆ ತೆರಳಿ ರತಿ ಮನ್ಮಥನನ್ನು ಭಕ್ತಿಯಿಂದ ಪೂಜೆ ಮಾಡುತ್ತಾರೆ. ಈ ಊರಲ್ಲಿ ಈ ಸಂಪ್ರದಾಯ ತಲೆಮಾರುಗಳಿಂದ ನಡೆದುಕೊಂಡು ಬರುತ್ತಿದೆ.

ಹೋಳಿ ಹಬ್ಬದ ದಿನ ಸಂತೆಕೂಡ್ಲೂರು ಗ್ರಾಮದಲ್ಲಿ ಎಲ್ಲಾ ಗಂಡಸರು ಸೀರೆ ಉಟ್ಟು, ಆಭರಣ, ಹೂಗಳಿಂದ ಸಿಂಗಾರಗೊಳ್ಳುತ್ತಾರೆ. ಹೋಳಿ ಹಬ್ಬದ ದಿನ ಪುರುಷರು ಸೀರೆ ಧರಿಸಿ ಪೂಜಿಸಿದರೆ ಅವರ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಇವರದು.

"ನಮ್ಮ ಹಿರಿಯರ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಈ ಹಬ್ಬವನ್ನು ನಾವು ಪ್ರತೀ ವರ್ಷ ಆಚರಿಸುತ್ತೇವೆ. ಈ ದಿನ ಮಹಿಳೆಯರಂತೆ ಅಲಂಕಾರಗೊಂಡು ಪೂಜಿಸಿದರೆ ನಾವು ಬಯಸಿದ ಕಾರ್ಯಗಳು ನಡೆಯುತ್ತವೆ. ಆರೋಗ್ಯ ಸಮಸ್ಯೆಗಳು, ಮದುವೆ ಸಮಸ್ಯೆಗಳು, ಶೈಕ್ಷಣಿಕ ಅಡೆತಡೆಗಳು, ಹಾಗೂ ಇತರ ಯಾವುದೇ ಸಮಸ್ಯೆಗಳಿದ್ದರೂ, ಈ ದಿನ ಭಕ್ತಿಯಿಂದ ಪೂಜೆ ಮಾಡಿ ಬೇಡಿಕೊಂಡರೆ ನಿವಾರಣೆಯಾಗುತ್ತವೆ. ನಮ್ಮ ಇಷ್ಟಾರ್ಥಗಳು ಈಡೇರುತ್ತವೆ. ಎರಡು ದಿನಗಳ ಕಾಲ ಈ ಉತ್ಸವ ನಡೆಯಲಿದೆ" ಎನ್ನುತ್ತಾರೆ ಭಕ್ತರು.

ಈ ರೀತಿ ಪೂಜೆ ಮಾಡುವುದರಿಂದ ಬೆಳೆಗಳು ಚೆನ್ನಾಗಿ ಬರುತ್ತವೆ, ಗ್ರಾಮದ ಜನರಿಗೆ ಆರೋಗ್ಯ, ಮದುವೆ, ಆರ್ಥಿಕ ಸಮಸ್ಯೆಗಳು ಕಾಡುವುದಿಲ್ಲ ಎಂಬ ನಂಬಿಕೆ ಇದೆ. ಪ್ರತೀ ವರ್ಷ ಹೋಳಿ ಹಬ್ಬದಂದು ವಿವಿಧ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಅದರಲ್ಲೂ ಆಂಧ್ರಪ್ರದೇಶ ಹಾಗೂ ಕರ್ನಾಟಕದ ಗಡಿಪ್ರದೇಶ ಇದಾಗಿರುವುದರಿಂದ ಈ ವಿಚಿತ್ರ ಆಚರಣೆಯನ್ನು ವೀಕ್ಷಿಸಲು ಕರ್ನಾಟಕದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

ಇದನ್ನೂ ಓದಿ: ಬಣ್ಣದೋಕುಳಿಯಲ್ಲಿ ಮಿಂದೆದ್ದ ಕುಂದಾನಗರಿ ಜನ; ಕುಣಿದು ಕುಪ್ಪಳಿಸಿದ ಯುವಜನತೆ - holi celebration

Last Updated : Mar 26, 2024, 5:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.