ಬಿಜೆಪಿ ಆಡಳಿತದಲ್ಲಿ ಉದ್ಯೋಗಕ್ಕಾಗಿ ಒಂದು ಪೈಸೆಯೂ ನೀಡಬೇಕಾಗಿಲ್ಲ: ಅಮಿತ್ ಶಾ

author img

By ETV Bharat Karnataka Team

Published : Jan 20, 2024, 8:54 PM IST

Amit Shah

ಈ ಹಿಂದೆ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಸರ್ಕಾರಿ ನೌಕರಿ ಪಡೆಯಲು ಜನರು ಲಂಚ ನೀಡಬೇಕಿತ್ತು. ಬಿಜೆಪಿ ಆಡಳಿತದಲ್ಲಿ ಉದ್ಯೋಗಕ್ಕಾಗಿ ಒಂದು ಪೈಸೆಯೂ ನೀಡಬೇಕಾಗಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ

ಗುವಾಹಟಿ (ಅಸ್ಸೋಂ): ಭಗವಾನ್ ಶ್ರೀರಾಮನು 550 ಅವಮಾನದ ವರ್ಷಗಳ ತನ್ನ ಮನೆಗೆ ಮರಳಲಿದ್ದಾನೆ. ಇದು ಇಡೀ ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜನವರಿ 22ರಂದು ರಾಮ ಮಂದಿರ ಉದ್ಘಾಟನೆ ಸಮಾರಂಭದ ಕುರಿತು ಅಮಿತ್​ ಶಾ ಈ ಹೇಳಿಕೆ ನೀಡಿದ್ದಾರೆ.

ಗುವಾಹಟಿಯಲ್ಲಿ ಶನಿವಾರ ಹೊಸದಾಗಿ ರಚಿಸಲಾದ ಐದು ಅಸ್ಸೋಂ ಪೊಲೀಸ್ ಕಮಾಂಡೋ ಬೆಟಾಲಿಯನ್‌ಗಳ ಮೊದಲ ಬ್ಯಾಚ್‌ನ ನಿರ್ಗಮನ ಪಥಸಂಚಲನ ಮತ್ತು ಸಶಸ್ತ್ರ ಸೀಮಾ ಬಲದ 60ನೇ ಸ್ಥಾಪನಾ ದಿನವನ್ನು ಉದ್ದೇಶಿಸಿ ಮಾತನಾಡಿದ ಶಾ, ದೇಶವು ಸೂಪರ್ ಪವರ್ ಆಗುವ ಹಾದಿಯಲ್ಲಿರುವ ಸಮಯದಲ್ಲಿ ರಾಮ ಮಂದಿರದ ಪವಿತ್ರ ಕಾರ್ಯ ನಡೆಯುತ್ತಿದೆ ಎಂದರು. ಇದೇ ವೇಳೆ, ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಭಾರಿ ಬದಲಾವಣೆಯಾಗಿದೆ. ಈ ಹಿಂದೆ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಸರ್ಕಾರಿ ನೌಕರಿ ಪಡೆಯಲು ಜನರು ಲಂಚ ನೀಡಬೇಕಿತ್ತು. ಬಿಜೆಪಿ ಆಡಳಿತದಲ್ಲಿ ಉದ್ಯೋಗಕ್ಕಾಗಿ ಒಂದು ಪೈಸೆಯೂ ನೀಡಬೇಕಾಗಿಲ್ಲ ಎಂದು ಹೇಳಿದರು.

ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಗಡಿ ಗ್ರಾಮಗಳ ಸಂಸ್ಕೃತಿ, ಇತಿಹಾಸ, ಸ್ಥಳಾಕೃತಿ ಮತ್ತು ಭಾಷೆಯನ್ನು ಸೂಕ್ಷ್ಮವಾಗಿ ಸಂಯೋಜಿಸುವಲ್ಲಿ ಮತ್ತು ಆ ಪ್ರದೇಶಗಳ ಜನರನ್ನು ದೇಶದ ಇತರ ಭಾಗಗಳಿಗೆ ಬೆಸೆಯುವಲ್ಲಿ ಎಸ್‌ಎಸ್‌ಬಿ ವಿಶಿಷ್ಟ ಪಾತ್ರವನ್ನು ವಹಿಸುತ್ತದೆ. ಗಡಿಗಳನ್ನು ಕಾಪಾಡುವುದರ ಜೊತೆಗೆ ಸಿಎಪಿಎಫ್‌ಗಳೊಂದಿಗೆ ಎಸ್‌ಎಸ್‌ಬಿ ಛತ್ತೀಸ್‌ಗಢ, ಜಾರ್ಖಂಡ್ ಮತ್ತು ಬಿಹಾರದಲ್ಲಿ ನಕ್ಸಲರ ವಿರುದ್ಧ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿದೆ ಎಂದು ತಿಳಿಸಿದರು.

ಮುಂದಿನ ಮೂರು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶವು ನಕ್ಸಲ್ ಸಮಸ್ಯೆಯಿಂದ ಶೇ.100ರಷ್ಟು ಮುಕ್ತವಾಗಲಿದೆ ಎಂದು ಪ್ರತಿಪಾದಿಸಿದ ಅಮಿತ್​ ಶಾ, ಮ್ಯಾನ್ಮಾರ್ ಗಡಿಯಲ್ಲಿ ಜನರ ಮುಕ್ತ ಸಂಚಾರವನ್ನು ಸರ್ಕಾರ ನಿಲ್ಲಿಸಲಿದೆ. ಭಾರತ - ಮ್ಯಾನ್ಮಾರ್ ಗಡಿಯನ್ನು ಬಾಂಗ್ಲಾದೇಶದ ಗಡಿಯಂತೆ ರಕ್ಷಿಸಲಾಗುವುದು. ಈಶಾನ್ಯ ಭಾಗದಲ್ಲಿ ಶಾಂತಿ ಮತ್ತು ಅಭಿವೃದ್ಧಿಯ ಪ್ರಧಾನ ಮಂತ್ರಿಗಳ ಧ್ಯೇಯವು ಯಶಸ್ವಿಯಾಗಿದೆ ಎಂದು ಅವರು ಹೇಳಿದರು.

ಈ ಹಿಂದೆ ಕೇಂದ್ರ ಸರ್ಕಾರವು ಮ್ಯಾನ್ಮಾರ್‌ನೊಂದಿಗೆ 300 ಕಿಮೀ ವ್ಯಾಪ್ತಿಯ ಬೇಲಿಯಿಲ್ಲದ ಗಡಿಗೆ ಬೇಲಿ ಹಾಕಲು ಸರ್ಕಾರ ಯೋಜಿಸಿದೆ. ಅಂತಾರಾಷ್ಟ್ರೀಯ ಗಡಿಯ ಎರಡೂ ಬದಿಗಳಲ್ಲಿ ವಾಸಿಸುವ ಜನರು ವೀಸಾ ಇಲ್ಲದೇ ಪರಸ್ಪರರ ಪ್ರದೇಶಕ್ಕೆ 16 ಕಿಮೀ ಒಳಗೆ ಪ್ರಯಾಣಿಸಲು ಅನುವು ಮಾಡಿಕೊಡುವ ಮುಕ್ತ ಚಲನೆಯ ಆಡಳಿತವನ್ನು ಕೊನೆಗೊಳಿಸಲು ಯೋಜಿಸಲಾಗಿದೆ ಎಂದು ಹೇಳಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.