ETV Bharat / bharat

ಪ.ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತನ ಹತ್ಯೆ; ಆಂಧ್ರದಲ್ಲಿ ಪೋಲಿಂಗ್​ ಏಜೆಂಟರ ಅಪಹರಣ ಆರೋಪ, ಇವಿಎಂ ಧ್ವಂಸ - Election Related Violence

author img

By ETV Bharat Karnataka Team

Published : May 13, 2024, 10:42 AM IST

ಲೋಕಸಭಾ ಚುನಾವಣೆಯ ನಾಲ್ಕನೇ ಹಂತಕ್ಕೆ ಇಂದು 9 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾನ ನಡೆಯುತ್ತಿದೆ. ಈ ನಡುವೆ ಪಶ್ಚಿಮ ಬಂಗಾಳ ಮತ್ತು ಆಂಧ್ರ ಪ್ರದೇಶದಲ್ಲಿ ಚುನಾವಣಾ ಹಿಂಸಾಚಾರಗಳು ವರದಿಯಾಗಿವೆ.

ಚುನಾವಣಾ ಹಿಂಸಾಚಾರಗಳು
ಚುನಾವಣಾ ಹಿಂಸಾಚಾರಗಳು (ETV Bharat)

ಪಶ್ಚಿಮ ಬಂಗಾಳ/ಆಂಧ್ರಪ್ರದೇಶ: ಆಂಧ್ರಪ್ರದೇಶದ ವಿಶಾಖಪಟ್ಟಣ ಪೂರ್ವ ಕ್ಷೇತ್ರದ 95ನೇ ಮತಗಟ್ಟೆ ಕೇಂದ್ರದಲ್ಲಿ ಬೆಳಗ್ಗೆ 10 ಗಂಟೆವರೆಗೂ ಮತದಾನ ಆರಂಭವಾಗಿಲ್ಲ. ಇದರಿಂದಾಗಿ ಮತದಾರರು ಕೇಂದ್ರದ ಮುಂದೆ ಮೂರು ಗಂಟೆಯಿಂದ ಕಾದು ಕುಳಿತಿದ್ದಾರೆ. ಇತ್ತ, ಅನ್ನಮಯ ಜಿಲ್ಲೆಯಲ್ಲಿ ಜನಸೇನಾ ಪೋಲಿಂಗ್​ ಏಜೆಂಟರನ್ನು ಅಪಹರಣ ಮಾಡಲಾಗಿದೆ. ವೈಎಸ್‌ಆರ್‌ಸಿಪಿ ಕಾರ್ಯಕರ್ತರು ಬಲವಂತವಾಗಿ ಏಜೆಂಟರನ್ನು ಕಿಡ್ನಾಪ್​ ಮಾಡಿದ್ದಾರೆ ಎಂದು ಜನಸೇನಾ ಕಾರ್ಯಕರ್ತರು ಆರೋಪಿಸಿದ್ದಾರೆ. ಇದರಿಂದಾಗಿ ಪರಿಸ್ಥಿತಿ ಭುಗಿಲೆದ್ದು ದಳವಾಯಿ ಮತಗಟ್ಟೆ ಕೇಂದ್ರದಲ್ಲಿ ಇವಿಎಂ ಧ್ವಂಸಗೊಳಿಸಿ ಮತದಾನ ಸ್ಥಗಿತಗೊಳಿಸಲಾಗಿದೆ.

ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತನ ಹತ್ಯೆ: ಭಾನುವಾರ ಸಂಜೆ ಪುರ್ಬಾ ಬರ್ಧಮಾನ್ ಜಿಲ್ಲೆಯ ಕೇತುಗ್ರಾಮ್‌ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದಾರೆ. ಮಿಂಟು ಶೇಖ್ (45) ಮೃತ ದುರ್ದೈವಿ.

ಕೇತುಗ್ರಾಮ ವಿಧಾನಸಭಾ ಕ್ಷೇತ್ರದ ಚೆಂಚೂರಿ ಗ್ರಾಮದ ಬಳಿ ಕೆಲವು ಕಿಡಿಗೇಡಿಗಳು ಮನೆಗೆ ಹಿಂತಿರುಗುತ್ತಿದ್ದ ಮಿಂಟು ಶೇಖ್​​ನನ್ನು ತಡೆದು, ಹಲ್ಲೆ ಮಾಡಿದ್ದಾರೆ. ನೆಲಕ್ಕೆ ಬೀಳಿಸಿ, ಆಯುಧಗಳಿಂದ ದಾಳಿ ಮಾಡಿದ್ದಾರೆ. ಬಳಿಕ ಆತನ ಮೇಲೆ ಬಾಂಬ್ ಎಸೆದು ಸ್ಫೋಟಿಸಿದ್ದಾರೆ ಎಂದು ವರದಿಯಾಗಿದೆ.

ಘಟನೆಯಲ್ಲಿ ತೀವ್ರ ಗಾಯಗೊಂಡ ಮಿಂಟುನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಚಿಕಿತ್ಸೆ ಫಲಿಸದೇ ಶೇಖ್ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಬಿಸಿ ಗಾಳಿ ಇಲ್ಲ, ಮತದಾನ ನಡೆಯುವ 96 ಕ್ಷೇತ್ರಗಳಲ್ಲಿ 'ಸಾಮಾನ್ಯಕ್ಕಿಂತ ಸಾಮಾನ್ಯ ತಾಪಮಾನ': ಚು.ಆಯೋಗ - No Heat Wave Today

ETV Bharat Logo

Copyright © 2024 Ushodaya Enterprises Pvt. Ltd., All Rights Reserved.