ETV Bharat / bharat

6th Phase Election: 5 ಗಂಟೆವರೆಗೆ ಶೇಕಡಾ 57.70 ರಷ್ಟು ಮತದಾನ.. ಜಮ್ಮು -ಕಾಶ್ಮೀರದಲ್ಲಿ ಅತ್ಯಂತ ಕಡಿಮೆ ವೋಟಿಂಗ್​ - INDIA VOTING TURN OUT

author img

By ETV Bharat Karnataka Team

Published : May 25, 2024, 9:54 AM IST

Updated : May 25, 2024, 6:03 PM IST

ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನ ನಡೆಯುತ್ತಿದ್ದು, ಸಂಜೆ 5 ಗಂಟೆಯವರೆಗೆ ಶೇಕಡಾ 57.70ರಷ್ಟು ಮತದಾನವಾಗಿದೆ.

ಮತದಾನದ ಪ್ರಮಾಣ
ಮತದಾನದ ಪ್ರಮಾಣ (ETV Bharat)

ನವದೆಹಲಿ: 7 ರಾಜ್ಯ, ಒಂದು ಕೇಂದ್ರಾಳಿಡತ ಪ್ರದೇಶದ 58 ಲೋಕಸಭಾ ಸ್ಥಾನಗಳಿಗೆ ನಡೆಯುತ್ತಿರುವ 6ನೇ ಹಂತದ ಮತದಾನ ಬಿರುಸಿನಿಂದ ಸಾಗುತ್ತಿದೆ. ಜನರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ. ದೆಹಲಿಯ ಎಲ್ಲ 7 ಕ್ಷೇತ್ರಗಳು, ಬಿಹಾರದ 8, ಹರಿಯಾಣದ ಎಲ್ಲ 10 ಕ್ಷೇತ್ರ, ಜಾರ್ಖಂಡ್‌ನ 4, ಒಡಿಶಾದ 6, ಉತ್ತರ ಪ್ರದೇಶದ 14, ಪಶ್ಚಿಮ ಬಂಗಾಳದ 8, ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್-ರಜೌರಿ ಏಕೈಕ ಲೋಕಸಭಾ ಸ್ಥಾನಕ್ಕೆ ಮತದಾನ ನಡೆಯುತ್ತಿದೆ.

ಸಂಜೆ 5 ಗಂಟೆಯವರೆಗೂ ಒಟ್ಟು ಶೇಕಡಾ 57.70 ರಷ್ಟು ಮತದಾನವಾಗಿದೆ. ಬೆಳಗ್ಗೆಯಿಂದ ನಡೆದ ಮತದಾನದಲ್ಲಿ ಪಶ್ಚಿಮಬಂಗಾಳ ಮುಂದಿದೆ. ಆ ರಾಜ್ಯದಲ್ಲಿ ಅತಿ ಹೆಚ್ಚು ಮತದಾನವಾಗುತ್ತಿದೆ. ಈವರೆಗೆ ಶೇಕಡಾ 77.99 ರಷ್ಟು ಮತದಾನವಾಗಿದೆ. ಜಮ್ಮು ಕಾಶ್ಮೀರದಲ್ಲಿ ಕಡಿಮೆ 51.35 ಪ್ರತಿಶತದಷ್ಟು ಮತದಾನ ನಡೆದಿದೆ. ರಾಜ್ಯವಾರು ಮತ ಪ್ರಮಾಣದ ವಿವರ ಹೀಗಿದೆ.

ರಾಜ್ಯಗಳು ಶೇಕಡಾವಾರು
ಬಿಹಾರ52.24%
ಹರಿಯಾಣ55.93%
ಜಮ್ಮು ಮತ್ತು ಕಾಶ್ಮೀರ51.35%
ಜಾರ್ಖಂಡ್​61.41%
ದೆಹಲಿ53.73%
ಒಡಿಶಾ59.60%
ಉತ್ತರ ಪ್ರದೇಶ52.02%
ಪಶ್ಚಿಮ ಬಂಗಾಳ77.99%

ಇದನ್ನೂ ಓದಿ: 6ನೇ ಹಂತದ ಲೋಕ ಸಮರ: 58 ಕ್ಷೇತ್ರಗಳಿಗೆ ಮತದಾನ; ಪ್ರಮುಖ ಅಭ್ಯರ್ಥಿಗಳು ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ... - Lok Sabha Election 2024

Last Updated : May 25, 2024, 6:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.