ETV Bharat / bharat

ಕಡಲ್ಗಳ್ಳರಿಂದ ರಕ್ಷಿಸಿದ್ದಕ್ಕೆ ಭಾರತೀಯ ನೌಕಾಪಡೆಗೆ ಧನ್ಯವಾದ ಹೇಳಿ 'ಇಂಡಿಯಾ ಜಿಂದಾಬಾದ್' ಎಂದ ಪಾಕ್​ ಪ್ರಜೆಗಳು - India Rescued Pakistani Sailors

author img

By ANI

Published : Mar 31, 2024, 10:25 AM IST

ಭಾರತೀಯ ನೌಕಾಪಡೆಯು 23 ಪಾಕಿಸ್ತಾನಿ ಪ್ರಜೆಗಳನ್ನು ಸೊಮಾಲಿಯಾ ಕಡಲ್ಗಳ್ಳರಿಂದ ರಕ್ಷಿಸಿದೆ.

Pakistani sailors  Indian Navy India Zindabad
'ಇಂಡಿಯಾ ಜಿಂದಾಬಾದ್...' ತಮ್ಮನ್ನು ಕಡಲ್ಗಳ್ಳರಿಂದ ರಕ್ಷಿಸಿದ್ದಕ್ಕೆ ಭಾರತೀಯ ನೌಕಾಪಡೆಗೆ ಧನ್ಯವಾದ ತಿಳಿಸಿದ ಪಾಕ್​ ನಾವಿಕರು

'ಇಂಡಿಯಾ ಜಿಂದಾಬಾದ್'

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ನಡೆದ 12 ಗಂಟೆಗಳ ಸುದೀರ್ಘ ಕಾರ್ಯಾಚರಣೆಯಲ್ಲಿ ಭಾರತೀಯ ನೌಕಾಪಡೆಯು 23 ಮಂದಿ ಪಾಕಿಸ್ತಾನಿ ಪ್ರಜೆಗಳನ್ನು ಸೊಮಾಲಿಯಾ ಕಡಲ್ಗಳ್ಳರಿಂದ ರಕ್ಷಣೆ ಮಾಡಿದೆ. ಮಾರ್ಚ್ 29ರಂದು ಬೆಳಿಗ್ಗೆ ಐಎನ್‌ಎಸ್ ಸುಮೇಧಾ ನೌಕೆಯು ಅಪಹರಣಕ್ಕೊಳಗಾದ ಎಫ್‌ವಿ ಅಲ್-ಕಂಬಾರ್ ಹಡಗಿನ ರಕ್ಷಣೆಗೆ ವಿಶೇಷ ಕಾರ್ಯಾಚರಣೆ ಆರಂಭಿಸಿತ್ತು. ಈ ಕಾರ್ಯಾಚರಣೆಯ ವೇಗ ಹಚ್ಚಿಸಲು ಐಎನ್‌ಎಸ್​ ಸುಮೇಧಾ ಜತೆಗೆ ಮಾರ್ಗದರ್ಶಿ ಕ್ಷಿಪಣಿ ಯುದ್ಧನೌಕೆ INS ತ್ರಿಶೂಲ್‌ ಕೂಡಾ ಸೇರಿಕೊಂಡಿತ್ತು.

ಇರಾನ್ ಮೂಲದ ಎಫ್‌ವಿ ಅಲ್-ಕಂಬಾರ್ ಹಡಗು ಸೊಕೊಟ್ರಾ ಎಂಬ ಪ್ರದೇಶದಿಂದ ಸುಮಾರು 90 ನಾಟಿಕಲ್ ಮೈಲು ನೈಋತ್ಯದಲ್ಲಿತ್ತು. ಈ ಹಡಗಿಗೆ ಒಂಬತ್ತು ಶಸ್ತ್ರಸಜ್ಜಿತ ಕಡಲ್ಗಳ್ಳರು ಹತ್ತಿದ್ದಾರೆ. ಸುದ್ದಿ ತಿಳಿದು ಭಾರತೀಯ ನೌಕಾ ಪಡೆಯು ಕಡಲ್ಗಳ್ಳರೊಂದಿಗೆ ಮಾತುಕತೆ ಆರಂಭಿಸಿತ್ತು. ರಕ್ತಪಾತವಿಲ್ಲದೆ ಶರಣಾಗುವಂತೆ ಮನವಿ ಮಾಡಿದೆ. ಬಳಿಕ ನೌಕಪಡೆಯು ಕಡಲ್ಗಳ್ಳರನ್ನು ತಮ್ಮ ವಶಕ್ಕೆ ಪಡೆದುಕೊಂಡಿತು.

ತಮ್ಮನ್ನು ಕಡಲ್ಗಳ್ಳರಿಂದ ರಕ್ಷಿಸಿದ್ದಕ್ಕೆ ಭಾರತೀಯ ನೌಕಾಪಡೆಗೆ ಪಾಕ್​ ನಾವಿಕರು ಧನ್ಯವಾದ ತಿಳಿಸಿದ್ದಾರೆ. ಇದರ ಜತೆಗೆ 'ಇಂಡಿಯಾ ಜಿಂದಾಬಾದ್' ಎಂದು ಘೋಷಣೆ ಕೂಗಿದ್ದಾರೆ.

ಭಾರತೀಯ ನೌಕಾಪಡೆ ಇತ್ತೀಚೆಗೆ ಕಡಲ್ಗಳ್ಳರ ದಾಳಿಗಳ ವಿರುದ್ಧ ಹಲವು ಯಶಸ್ವಿ ಕಾರ್ಯಾಚರಣೆಗಳನ್ನು ನಡೆಸಿದೆ. ಪಾಕಿಸ್ತಾನದ ಪ್ರಜೆಗಳನ್ನು ರಕ್ಷಿಸಿರುವುದು ಇದೇ ಮೊದಲಲ್ಲ. ಈ ವರ್ಷದ ಜನವರಿಯಲ್ಲಿ ಕಡಲ್ಗಳ್ಳರ ದಾಳಿಗೊಳಗಾದ ಇರಾನಿನ ಧ್ವಜವಿದ್ದ ಮೀನುಗಾರಿಕೆ ನೌಕೆ ಅಲ್ ನಯೀಮಿಯಿಂದ 19 ಪಾಕಿಸ್ತಾನಿಗಳನ್ನು ರಕ್ಷಿಸಲಾಗಿತ್ತು. ಅಲ್ಲದೆ, ಈ ತಿಂಗಳ ಆರಂಭದಲ್ಲಿ, ದಾಳಿಗೊಳಗಾದ ನೌಕೆ ರುಯೆನ್ ರಕ್ಷಣೆ ಮಾಡಿತ್ತು ಮತ್ತು 35 ಸೊಮಾಲಿಯಾ ಕಡಲ್ಗಳ್ಳರನ್ನು ಶರಣಾಗುವಂತೆ ಮಾಡಿತ್ತು.

ಇದನ್ನೂ ಓದಿ: ಎಂಬಿಬಿಎಸ್​ ಪ್ರವೇಶಾತಿ ರದ್ದು; ಯೋಧನ ಪುತ್ರನಿಗೆ ಹೆಚ್ಚುವರಿ ಸೀಟು ಸೃಷ್ಟಿಸಿ, ₹ 1 ಲಕ್ಷ ಪರಿಹಾರ ನೀಡಲು ಸುಪ್ರೀಂ ಆದೇಶ - SC ON MBBS SEAT

ETV Bharat Logo

Copyright © 2024 Ushodaya Enterprises Pvt. Ltd., All Rights Reserved.