ETV Bharat / bharat

ಪ್ರಧಾನಿ ಮೋದಿಯವರು ನನ್ನ ಗಂಡನನ್ನು ಜೈಲಿಗೆ ಹಾಕಿದ್ದು ಸಮರ್ಥನೀಯವೇ?; ಕೇಜ್ರಿವಾಲ್ ಪತ್ನಿ ಸುನಿತಾ ಪ್ರಶ್ನೆ - INDIA Blocs Rally

author img

By ETV Bharat Karnataka Team

Published : Mar 31, 2024, 5:32 PM IST

Sunita Read Kejriwal Message: ದೆಹಲಿಯ ರಾಮಲೀಲಾ ಮೈದಾನದಲ್ಲಿ 'ಸಂವಿಧಾನ ಉಳಿಸಿ' ಬೃಹತ್​ ಸಮಾವೇಶದಲ್ಲಿ ಬಂಧಿತ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕಳುಹಿಸಿದ ಸಂದೇಶವನ್ನು ಪತ್ನಿ ಸುನಿತಾ ಕೇಜ್ರಿವಾಲ್ ಓದಿದರು.

Etv Bharat
Etv Bharat

ನವದೆಹಲಿ: ಜಾರಿ ನಿರ್ದೇಶನಾಯಲದಿಂದ ಬಂಧನಕ್ಕೆ ಒಳಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಳುಹಿಸಿದ ಸಂದೇಶವನ್ನು ಅವರ ಪತ್ನಿ ಸುನಿತಾ ಕೇಜ್ರಿವಾಲ್ ಕಾಂಗ್ರೆಸ್​ ನೇತೃತ್ವದ 'ಇಂಡಿಯಾ' ಮೈತ್ರಿಕೂಟವು ಹಮ್ಮಿಕೊಂಡಿದ್ದ 'ಸಂವಿಧಾನ ಉಳಿಸಿ' ಬೃಹತ್​ ಸಮಾವೇಶದಲ್ಲಿ ಓದಿದರು. ಈ ವೇಳೆ, ಕೇಜ್ರಿವಾಲ್ ಬಂಧನದ ಬಗ್ಗೆ ಕೇಂದ್ರ ಸರ್ಕಾರವನ್ನು ಸುನಿತಾ​ ಪ್ರಶ್ನಿಸಿದರು.

ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಕೇಜ್ರಿವಾಲ್ ಅವರನ್ನು ಮಾರ್ಚ್​ 21ರಂದು ಬಂಧಿಸಲಾಗಿದ್ದು, ಸದ್ಯ ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿದ್ದಾರೆ. ಕೇಜ್ರಿವಾಲ್ ಬಂಧನದ ವಿಷಯದ ಜೊತೆಗೆ ಸಂವಿಧಾನ ರಕ್ಷಣೆ, ಬೆಲೆ ಏರಿಕೆ, ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ, ಚುನಾವಣಾ ಬಾಂಡ್‌ಗಳ ಭ್ರಷ್ಟಾಚಾರ, ವಿಪಕ್ಷದ ನಾಯಕರನ್ನು ಹಣಿಯಲು ಕೇಂದ್ರೀಯ ಸಂಸ್ಥೆಗಳ ದುರುಪಯೋಗದಂತಹ ಅಂಶಗಳನ್ನು ಮುಂದಿಟ್ಟುಕೊಂಡು ರಾಮಲೀಲಾ ಮೈದಾನದಲ್ಲಿ 'ಸಂವಿಧಾನ ಉಳಿಸಿ' ಬೃಹತ್​ ಸಮಾವೇಶ ಆಯೋಜಿಸಲಾಗಿದೆ.

ಇದರಲ್ಲಿ ಸುನಿತಾ ಕೇಜ್ರಿವಾಲ್ ಪಾಲ್ಗೊಂಡು ಮಾತನಾಡಿ, ನಾನು ಒಂದು ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ನನ್ನ ಗಂಡನನ್ನು ಜೈಲಿಗೆ ಹಾಕಿದ್ದು ಸಮರ್ಥನೀಯವೇ?, ಕೇಜ್ರಿವಾಲ್ ಅವರ ಸಮಗ್ರತೆ ಮತ್ತು ದೇಶಪ್ರೇಮವನ್ನು ನೀವು ನಂಬುತ್ತೀರಲ್ಲವೇ?, ಅವರ ಜೈಲುವಾಸದಿಂದಾಗಿ ರಾಜೀನಾಮೆ ನೀಡುವಂತೆ ಬಿಜೆಪಿ ಸದಸ್ಯರ ಕರೆ ಹೊರತಾಗಿಯೂ, ಅವರು ಸಿಎಂ ಸ್ಥಾನದಿಂದ ಕೆಳಗಿಳಿಯಬೇಕು ಎಂದು ನೀವು ಬಯಸುತ್ತೀರಾ?. ನಿಮ್ಮ ಕೇಜ್ರಿವಾಲ್ ಸಿಂಹದಂತೆ ಚೇತರಿಸಿಕೊಳ್ಳುತ್ತಾರೆ. ಅವರನ್ನು ದೀರ್ಘಕಾಲ ಬಂಧಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ನಂತರ ಕೇಜ್ರಿವಾಲ್​ ಬರೆದ ಪತ್ರವನ್ನು ಓದಿದ ಸುನಿತಾ, 'ನಾನು ಮತಗಳನ್ನು ಕೇಳುತ್ತಿಲ್ಲ. ಬದಲಿಗೆ ಹೊಸ ಭಾರತವನ್ನು ರೂಪಿಸಲು ಕೊಡುಗೆ ನೀಡಲು 140 ಕೋಟಿ ಭಾರತೀಯರಿಗೆ ನಾನು ಆಹ್ವಾನ ನೀಡುತ್ತೇನೆ. ನನ್ನ ಪ್ರಸ್ತುತ ಬಂಧನದಿಂದ ನಾನು ನಮ್ಮ ಪ್ರೀತಿಯ ರಾಷ್ಟ್ರದ ದುರವಸ್ಥೆಯನ್ನು ಪ್ರತಿಬಿಂಬಿಸುತ್ತಿದ್ದೇನೆ. ಇದು ನನಗೆ ತೀವ್ರ ನೋವುಂಟುಮಾಡುತ್ತಿದೆ. ಭಾರತಕ್ಕೆ ಹೊಸ ದಾರಿಯನ್ನು ರೂಪಿಸಲು ನಾವು ಒಟ್ಟಾಗಿ ಪ್ರಯತ್ನಿಸೋಣ. 'ಇಂಡಿಯಾ' ಮೈತ್ರಿಕೂಟಕ್ಕೆ ಜವಾಬ್ದಾರಿಯನ್ನು ವಹಿಸಿದಲ್ಲಿ, ನಾವು ಪರಿವರ್ತನಾ ಯುಗಕ್ಕೆ ನಾಂದಿಯಾಗಲು ಪ್ರತಿಜ್ಞೆ ಮಾಡುತ್ತೇವೆ. 'ಇಂಡಿಯಾ' ಮೈತ್ರಿಕೂಟದ ಪರವಾಗಿ, ನಾನು ಆರು ಗ್ಯಾರಂಟಿಗಳನ್ನು ನೀಡುತ್ತೇನೆ' ಎಂದು ಹೇಳಿದರು.

ಆರು ಗ್ಯಾರಂಟಿಗಳೇನು?: 'ಇಂಡಿಯಾ' ಮೈತ್ರಿಕೂಟದ ಪರವಾಗಿ ಆರು ಗ್ಯಾರಂಟಿಗಳನ್ನು ಕೇಜ್ರಿವಾಲ್ ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ದೇಶದಾದ್ಯಂತ ಬಡವರಿಗೆ 24x7 ಉಚಿತ ವಿದ್ಯುತ್, ಆರ್ಥಿಕ ಹಿನ್ನೆಲೆಯನ್ನು ಲೆಕ್ಕಿಸದೆ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಖಚಿತಪಡಿಸಿಕೊಳ್ಳಲು ಪ್ರತಿ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳ ನಿರ್ಮಾಣ, ಪ್ರತಿ ಹಳ್ಳಿ ಮತ್ತು ಪ್ರದೇಶದಲ್ಲಿ ಮೊಹಲ್ಲಾ ಚಿಕಿತ್ಸಾಲಯಗಳ, ಜೊತೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಾಣ ಮಾಡಿ, ಪ್ರತಿಯೊಬ್ಬ ನಾಗರಿಕರಿಗೆ ಸರಿಯಾದ ಮತ್ತು ಉಚಿತ ಚಿಕಿತ್ಸೆ ಒದಗಿಸಲಾಗುತ್ತದೆ. ಸ್ವಾಮಿನಾಥನ್ ವರದಿಯ ಪ್ರಕಾರ ರೈತರಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) ಜಾರಿ ಮತ್ತು ದೆಹಲಿಗೆ ರಾಜ್ಯದ ಸ್ಥಾನಮಾನ ನೀಡಲಾಗುತ್ತದೆ ಎಂದು ಕೇಜ್ರಿವಾಲ್ ಬರೆದ ಪತ್ರವನ್ನು ಸುನಿತಾ ಓದಿದರು.

ಇದನ್ನೂ ಓದಿ: ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಯತ್ನ ಎಂದ ರಾಹುಲ್; ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸುವವರೆಗೆ ದೇಶದಲ್ಲಿ ಸಮೃದ್ಧಿ ಸಾಧ್ಯವಿಲ್ಲ-ಖರ್ಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.