ETV Bharat / bharat

ಭಾರತದಲ್ಲಿ 65 ವರ್ಷಗಳಲ್ಲಿ ಹಿಂದೂ ಜನಸಂಖ್ಯೆ 7.8 ರಷ್ಟು ಕುಸಿತ, ಮುಸ್ಲಿಮರು ಶೇ 43.15 ರಷ್ಟು ಹೆಚ್ಚಳ - population Analysis

author img

By PTI

Published : May 9, 2024, 4:06 PM IST

ಭಾರತದಲ್ಲಿ ಕಳೆದ 65 ವರ್ಷಗಳಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆಯು ಶೇ 43.15 ರಷ್ಟು ಏರಿಕೆ ಕಂಡಿದೆ ಎಂದು ವರದಿಯೊಂದು ಹೇಳಿದೆ.

ಭಾರತದಲ್ಲಿ ಜನಸಂಖ್ಯಾ ಇಳಿಕೆ-ಏರಿಕೆ ವರದಿ
ಭಾರತದಲ್ಲಿ ಜನಸಂಖ್ಯಾ ಇಳಿಕೆ-ಏರಿಕೆ ವರದಿ (Source: File Photo (ETV Bharat))

ನವದೆಹಲಿ: 1950 ರಿಂದ 2015 ರ ನಡುವೆ ಅಂದರೆ 65 ವರ್ಷಗಳಲ್ಲಿ ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಳವಾಗಿದೆ ಎಂದು ಪ್ರಧಾನ ಮಂತ್ರಿ ಆರ್ಥಿಕ ಸಲಹಾ ಸಮಿತಿ ವರದಿಯಲ್ಲಿ ತಿಳಿಸಿದೆ.

ಈಚೆಗೆ ನಡೆದ ಕಾರ್ಯಾಗಾರದಲ್ಲಿ ಪ್ರಧಾನಮಂತ್ರಿ ಆರ್ಥಿಕ ಸಲಹಾ ಸಮಿತಿಯು ಜನಸಂಖ್ಯೆ ಏರಿಕೆ-ಇಳಿಕೆಯ ಬಗ್ಗೆ ಮಾಹಿತಿ ನೀಡಿದೆ. ಅದರಲ್ಲಿ 1950 ರಿಂದ 2015 ರ ನಡುವೆ ಹಿಂದೂ ಜನಸಂಖ್ಯೆಯಲ್ಲಿ ಶೇಕಡಾ 7.82 ರಷ್ಟು ಇಳಿಕೆಯಾಗಿದೆ. ಮುಸ್ಲಿಮರ ಸಂಖ್ಯೆ 43.15 ರಷ್ಟು ಹೆಚ್ಚಾಗಿದೆ. ಜೈನ ಸಮುದಾಯವು 0.45 ರಿಂದ 0.36 ಕ್ಕೆ ಅಂದರೆ, 0.09 ಇಳಿದಿದೆ ಎಂದು ತಿಳಿಸಿದೆ.

ಕ್ರಾಸ್-ಕಂಟ್ರಿ ಅನಾಲಿಸಿಸ್ 1950-2015 ಎಂಬ ಶೀರ್ಷಿಕೆಯಡಿ ಈ ಮಾಹಿತಿ ಪತ್ರವನ್ನು ಸಿದ್ಧಪಡಿಸಲಾಗಿದೆ. ಈ ಅಂಶಗಳನ್ನು ಗಮನಿಸಿದರೆ ದೇಶದಲ್ಲಿ ವೈವಿಧ್ಯತೆಯನ್ನು ಬೆಳೆಸಲು ಅನುಕೂಲಕರ ವಾತಾವರಣವಿದೆ ಎಂದು ಅದು ಹೇಳಿದೆ.

ದೇಶದಲ್ಲಿ ಹಿಂದೂ ಸಮುದಾಯವಾದ ಜನಸಂಖ್ಯೆಯು 1950 ರಲ್ಲಿ 84.68 ರಷ್ಟು ಇತ್ತು. 2015 ರ ವೇಳೆಗೆ ಅದು 78.06 ಕ್ಕೆ ಇಳಿಕೆಯಾಗಿದೆ. 1950 ರಲ್ಲಿ ಮುಸ್ಲಿಂ ಜನಸಂಖ್ಯೆಯು ಶೇಕಡಾ 9.84 ರಷ್ಟಿತ್ತು. 2015 ರಲ್ಲಿ ಶೇಕಡಾ 14.09 ಕ್ಕೆ ಏರಿದೆ. ಇದು ಶೇಕಡಾವಾರು 43.15 ರಷ್ಟು ಹೆಚ್ಚಳವಾಗಿದೆ ಎಂದು ಇಎಸಿ-ಪಿಎಂ ಸದಸ್ಯ ಶಮಿಕಾ ರವಿ ನೇತೃತ್ವದ ತಂಡ ಗುರುತಿಸಿದೆ.

ಇನ್ನೂ, ಕ್ರಿಶ್ಚಿಯನ್ ಜನಸಂಖ್ಯೆಯ ಪಾಲು ಶೇ.2.24 ರಿಂದ ಶೇ.2.36 ಕ್ಕೆ ಹೆಚ್ಚಳವಾಗಿದೆ. 65 ವರ್ಷಗಳಲ್ಲಿ 5.38 ಪ್ರತಿಶತ ಏರಿಕೆಯಾಗಿದೆ. ಸಿಖ್ ಸಮುದಾಯವು ಶೇ.1.24 ರಿಂದ ಶೇ.1.85 ಕ್ಕೆ ಏರಿದೆ. ಇದು ಶೇ.6.58 ರಷ್ಟಿದೆ. ಪಾರ್ಸಿ ಜನಸಂಖ್ಯೆಯು ಶೇಕಡಾ 85 ರಷ್ಟು ಕುಸಿತ ಕಂಡಿದೆ. ಅಂದರೆ, 1950 ರಲ್ಲಿ ಶೇಕಡಾ 0.03 ರಷ್ಟಿದ್ದ ಸಮುದಾಯವು 2015 ರಲ್ಲಿ 0.004 ಕ್ಕೆ ಇಳಿದಿದೆ.

ಬಾಂಗ್ಲಾದೇಶದಲ್ಲಿ ಮುಸ್ಲಿಮರ ಪ್ರಮಾಣ ಶೇಕಡಾ 18 ರಷ್ಟು ಹೆಚ್ಚಳವಾಗಿದೆ. ಇದು ಭಾರತೀಯ ಉಪಖಂಡದಲ್ಲೇ ಅತ್ಯಧಿಕ ಏರಿಕೆಯಾಗಿದೆ. ಪಾಕಿಸ್ತಾನದಲ್ಲಿ 3.75 ರಷ್ಟು ಮುಸ್ಲಿಮರು ಹೆಚ್ಚಾಗಿದ್ದಾರೆ. ಇದು 1971 ರಲ್ಲಿ ಬಾಂಗ್ಲಾದೇಶದ ಇಬ್ಭಾಗದ ಬಳಿಕದ ಶೇಕಡಾ 10ರಷ್ಟು ಹೆಚ್ಚಳ ದಾಖಲಾಗಿದೆ. 167 ರಾಷ್ಟ್ರಗಳಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ಮಾಡಿ, ವರದಿ ಸಿದ್ಧಪಡಿಸಿಲಾಗಿದೆ ಎಂದು ಇಎಸಿ-ಪಿಎಂ ತಿಳಿಸಿದೆ.

ಇದನ್ನೂ ಓದಿ: 2021ರ ಡಿಸೆಂಬರ್​ನಲ್ಲೇ ಕೋವಿಶೀಲ್ಡ್‌ ಲಸಿಕೆ ಉತ್ಪಾದನೆ ಸ್ಥಗಿತ, ಅಡ್ಡ ಪರಿಣಾಮಗಳ ಕುರಿತು ತಿಳಿಸಿದ್ದೇವೆ: ಸೆರಂ - Serum Institute

ETV Bharat Logo

Copyright © 2024 Ushodaya Enterprises Pvt. Ltd., All Rights Reserved.