ETV Bharat / bharat

ಬಿಹಾರ ಉಪ ಮುಖ್ಯಮಂತ್ರಿ ಕಾರಿನ ಮುಂದೆ ಜಿಗಿದ ವಿದ್ಯಾರ್ಥಿನಿ: ಚಾಲಕನ ಮುಂಜಾಗ್ರತೆಯಿಂದ ತಪ್ಪಿದ ಅನಾಹುತ

author img

By ETV Bharat Karnataka Team

Published : Feb 24, 2024, 6:54 AM IST

Updated : Feb 24, 2024, 8:00 AM IST

ಪ್ರತಿಭಟನಾ ನಿರತ ವಿದ್ಯಾರ್ಥಿನಿಯೊಬ್ಬಳು ಬಿಹಾರ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಕಾರಿನ ಮುಂದೆ ಜಿಗಿದಿರುವ ಘಟನೆ ನಡೆದಿದ್ದು, ಕಾರು ಚಾಲಕ ಎಚ್ಚರಿಕೆಯಿಂದಾಗಿ ಭಾರಿ ಅನಾಹುತವೊಂದು ತಪ್ಪಿದೆ.

ಬಿಹಾರ  Bihar  Bihar Deputy CM  ಶಿಕ್ಷಕರ ನೇಮಕಾತಿ  teachers recruitment
ಬಿಹಾರ ಉಪ ಮುಖ್ಯಮಂತ್ರಿ ಕಾರಿನ ಮುಂದೆ ಜಿಗಿದಿದ ವಿದ್ಯಾರ್ಥಿನಿ: ಚಾಲಕ ಎಚ್ಚರಿಕೆಯಿಂದ ತಪ್ಪಿದ ಅನುಹುತ

ಪಾಟ್ನಾ (ಬಿಹಾರ): ವಿದ್ಯಾರ್ಥಿನಿಯೊಬ್ಬಳು ಬಿಹಾರ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರ ಕಾರಿನ ಮುಂದೆ ಜಿಗಿದ ಘಟನೆ ಶುಕ್ರವಾರ ಸಂಜೆ ಪಾಟ್ನಾದ ಬಿಸ್ಕೊಮಾನ್ ಭವನದ ಬಳಿ ನಡೆದಿದೆ. ಆದರೆ, ಚಾಲಕ ಸಕಾಲಕ್ಕೆ ಬ್ರೇಕ್ ಹಾಕಿದ್ದರಿಂದ ಯಾವುದೇ ಅನಾಹುತ ನಡೆಯಲಿಲ್ಲ.

ರಾಜ್ಯದಲ್ಲಿ ಮೂರನೇ ಹಂತದ ಶಿಕ್ಷಕರ ನೇಮಕಾತಿಗಾಗಿ ಎಸ್​ಟಿಇಟಿ (STET) ಹಾಜರಾಗುವ ಅಭ್ಯರ್ಥಿಗಳಿಗೆ ಅರ್ಜಿ ನಮೂನೆಗಳನ್ನು ಭರ್ತಿ ಮಾಡಲು ಶಿಕ್ಷಣ ಸಚಿವಾಲಯ ಅನುಮತಿ ನೀಡದ ಕಾರಣ ಈ ವಿದ್ಯಾರ್ಥಿನಿ ಇತರ ವಿದ್ಯಾರ್ಥಿಗಳೊಂದಿಗೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಳು.

ಉಪಮುಖ್ಯಮಂತ್ರಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಬಿಸ್ಕೊಮಾನ್ ಭವನದ ಹೊರಗೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ಅವರು ಚೌಧರಿ ಅವರ ಬೆಂಗಾವಲು ಪಡೆಯನ್ನು ತಡೆಯಲು ಪ್ರಯತ್ನಿಸಿದರು. ಈ ವೇಳೆ ವಿದ್ಯಾರ್ಥಿನಿಯೊಬ್ಬರು ಬಿಹಾರದ ಡಿಸಿಎಂ ಅವರ ಕಾರಿನ ಮುಂದೆ ಜಿಗಿದಿದ್ದಾರೆ. ಈ ಸಮಯದಲ್ಲಿ ವಿದ್ಯಾರ್ಥಿನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೆಲವು ನಿಮಿಷಗಳ ಕಾಲ ಪ್ರಜ್ಞಾಹೀನಳಾಗಿದ್ದಳು.

ಧರಣಿ ನಿರತ ವಿದ್ಯಾರ್ಥಿಗಳೊಂದಿಗೆ ಡಿಸಿಎಂ ಮಾತುಕತೆ: ಘಟನೆಯ ನಂತರ ಉಪಮುಖ್ಯಮಂತ್ರಿ ಕಾರಿನಿಂದ ಕೆಳಗಿಳಿದು ಧರಣಿ ನಿರತ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು. ವಿದ್ಯಾರ್ಥಿನಿಯನ್ನು ರಕ್ಷಿಸುವಲ್ಲಿ ಅವರು ಸಹ ಸಹಾಯ ಮಾಡಿದರು. ಚೌಧರಿ ಅವರು, ಧರಣಿ ನಿರತ ವಿದ್ಯಾರ್ಥಿಗಳ ಬೇಡಿಕೆಯನ್ನು ಶಿಕ್ಷಣ ಇಲಾಖೆಗೆ ತಲುಪಿಸುವುದು ಹಾಗೂ ಅವರ ಕುಂದುಕೊರತೆಗಳನ್ನು ಪರಿಹರಿಸಲು ತಿಳಿಸಲಾಗುವುದು ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.

ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಗ್ರಹಗಳೇನು: ಮೂರನೇ ಹಂತದ ಶಿಕ್ಷಕರ ನೇಮಕಾತಿಗಾಗಿ ಎಸ್​ಟಿಇಟಿ ಪರೀಕ್ಷೆಯನ್ನು ನಿಗದಿತ ಸಮಯಕ್ಕೆ ನಡೆಸಲು ಇಲಾಖೆ ವಿಫಲವಾಗಿದೆ. ಇದು ಉದ್ಯೋಗಾಸಕ್ತರನ್ನು ಕೆರಳಿಸಿದೆ. ಇಲಾಖೆ ವಿಳಂಬ ನೀತಿಯನ್ನು ಖಂಡಿಸಿ ಅಭ್ಯರ್ಥಿಗಳು ಬೀದಿಗಿಳಿದಿದ್ದಾರೆ. ಇನ್ನೊಂದು ಕಡೆ ಶಿಕ್ಷಣ ಸಚಿವಾಲಯ ಎಸ್​ಟಿಇಟಿ ಪರೀಕ್ಷೆ ನಡೆಸಲು ಅನುಮತಿ ನೀಡದಿರುವುದೇ ಈ ವಿಳಂಬಕ್ಕೆ ಕಾರಣ ಎನ್ನಲಾಗುತ್ತಿದೆ. ಸರಿಯಾದ ಸಮಯಕ್ಕೆ ಎಸ್​ಟಿಇಟಿ ಪರೀಕ್ಷೆಯನ್ನು ನಡೆಸಲು ಶಿಕ್ಷಣ ಸಚಿವಾಲಯಕ್ಕೆ ರಾಜ್ಯ ಸರ್ಕಾರ ಸೂಚನೆ ನೀಡಬೇಕು. ವಿದ್ಯಾರ್ಥಿಗಳ ಭವಿಷ್ಯದ ಚೆಲ್ಲಾಟವಾಡಬಾರದು. ಆದಷ್ಟು ಬೇಗ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಬೇಕು ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದಾರೆ.

ಬಿಹಾರದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ ಎಂಬ ವರದಿಗಳಿವೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಉದ್ಯೋಗಾಕಾಂಕ್ಷಿಗಳು ಸರ್ಕಾರದ ವಿರುದ್ಧ ಆಗಾಗ ಪ್ರತಿಭಟನೆ ಹಮ್ಮಿಕೊಳ್ಳುತ್ತಲೇ ಇರುತ್ತಾರೆ. ಈ ಹಿಂದೆ ಕೇಂದ್ರ ಸರ್ಕಾರ ಅಗ್ನಿವೀರ ನೇಮಕಾತಿ ಘೋಷಣೆ ಮಾಡಿದಾಗ, ಬಿಹಾರದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದಿದ್ದವು.

ಇದನ್ನೂ ಓದಿ: ಪ್ರೀತಿ ತಿರಸ್ಕರಿಸಿದ್ದ ಶಿಕ್ಷಕನ ಮೇಲೆ ದ್ವೇಷ - ಪತ್ನಿ, ಪುತ್ರಿಯ ಮಾನಹಾನಿ: ಪೋಕ್ಸೋ ಕಾಯ್ದೆಯಡಿ ಯುವತಿ ಅರೆಸ್ಟ್

Last Updated : Feb 24, 2024, 8:00 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.