ETV Bharat / bharat

ಬಿಜೆಪಿ ರಾಷ್ಟ್ರೀಯ ವಕ್ತಾರರಾಗಿ ಪ್ರಶಾಂತ್ ಕಿಶೋರ್ ನೇಮಕವಾಗಿದ್ದಾರೆಯೇ?: ಪ್ಯಾಕ್ಟ್​ ಚೆಕ್​ ಇಲ್ಲಿದೆ... - Fact Check

author img

By ETV Bharat Karnataka Team

Published : May 24, 2024, 9:00 PM IST

ಚುನಾವಣಾ ರಣತಂತ್ರಗಾರ ಪ್ರಶಾಂತ್ ಕಿಶೋರ್ ಅವರನ್ನು ಬಿಜೆಪಿ ತನ್ನ ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಿದ ಎಂದು ಬಿಂಬಿಸುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆದರೆ, ಪತ್ರದ ಅಸಲಿಯತ್ತು ಬೇರೆನೇ ಇದೆ. ಇದರ ಪ್ಯಾಕ್ಟ್​ ಚೆಕ್​ ಇಲ್ಲಿದೆ.

Fact checking a purported appointment letter of Prashant Kishor as BJP spokesperson.
ಬಿಜೆಪಿ ವಕ್ತಾರರಾಗಿ ಪ್ರಶಾಂತ್ ಕಿಶೋರ್ ನೇಮಕ ಪತ್ರದ ಪ್ಯಾಕ್ಟ್​ ಚೆಕ್ (ETV Bharat)

ಹೈದರಾಬಾದ್: ಬಿಜೆಪಿಯ ರಾಷ್ಟ್ರೀಯ ವಕ್ತಾರರನ್ನಾಗಿ ಚುನಾವಣಾ ರಣತಂತ್ರಗಾರ, ರಾಜಕಾರಣಿ ಪ್ರಶಾಂತ್ ಕಿಶೋರ್ ಅವರನ್ನು ನೇಮಕ ಮಾಡಲಾಗಿದೆ ಎಂಬ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಈ ಪತ್ರವು ನಕಲಿ ಎಂದು ಫ್ಯಾಕ್​ಚೆಕ್​ನಲ್ಲಿ ಬಯಲಾಗಿದೆ. ಈ ಕುರಿತು ಕಿಶೋರ್ ಕಚೇರಿ 'ಬೂಮ್' ಫ್ಯಾಕ್ಟ್‌ಚೆಕಿಂಗ್ ವೆಬ್‌ಸೈಚ್​ಗೆ ಖಚಿತ ಪಡಿಸಿದೆ. ಜೊತೆಗೆ ಜನ್ ಸೂರಜ್ ಪಕ್ಷ ಕೂಡ ಸ್ಪಷ್ಟಪಡಿಸಿದೆ.

Screenshot of the fake letter
ಬಿಜೆಪಿಯ ಪತ್ರದ ಸ್ಕ್ರೀನ್‌ಶಾಟ್ (ETV Bharat)

2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಂದಾಜು 300 ಸ್ಥಾನಗಳನ್ನು ಪಡೆಬಹುದು ಎಂದು ಪ್ರಶಾಂತ್​ ಕಿಶೋರ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಈ ಹೇಳಿಕೆಯಿಂದ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದ್ದಾರೆ. ಅಲ್ಲದೇ, ಪತ್ರಕರ್ತ ಕರಣ್ ಥಾಪರ್ ಅವರೊಂದಿಗಿನ ಸಂದರ್ಶನವು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಇದರ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಕಿಶೋರ್, ಈ ಚುನಾವಣೆಯ ಫಲಿತಾಂಶದ ನನ್ನ ಮೌಲ್ಯಮಾಪನದಿಂದ ಅಸಮಾಧಾನಗೊಂಡಿರುವವರು ಜೂನ್ 4ರಂದು ತಮ್ಮೊಂದಿಗೆ ಸಾಕಷ್ಟು ನೀರನ್ನು ಇಟ್ಟುಕೊಳ್ಳಬೇಕು ಎಂದು ತಿರುಗೇಟು ನೀಡಿದ್ದಾರೆ.

ಇದರ ನಡುವೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಪ್ರಶಾಂತ್ ಕಿಶೋರ್ ಅವರನ್ನು ಪಕ್ಷದ ರಾಷ್ಟ್ರೀಯ ಮುಖ್ಯ ವಕ್ತಾರರನ್ನಾಗಿ ನೇಮಿಸಿದ್ದಾರೆ ಎಂಬ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪತ್ರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಬಿಜೆಪಿಯ ರಾಷ್ಟ್ರೀಯ ಮುಖ್ಯ ವಕ್ತಾರರಾಗಿ ಪ್ರಶಾಂತ್ ಕಿಶೋರ್ ಅವರನ್ನು ನೇಮಕ ಮಾಡಿದ್ದಾರೆ. ಈ ನೇಮಕಾತಿ ತಕ್ಷಣವೇ ಜಾರಿಗೆ ಬರುತ್ತದೆ ಎಂದು ಉಲ್ಲೇಖಿಸಲಾಗಿದೆ.

ವೈರಲ್ ಆದ ಪತ್ರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸಹಿ ಇದೆ. ಫೇಸ್‌ಬುಕ್ ಬಳಕೆದಾರರೊಬ್ಬರು ಈ ಪತ್ರವನ್ನು ಹಂಚಿಕೊಂಡಿದ್ದಾರೆ, "ಜನ್ ಸೂರಾಜ್ ಆಂದೋಲನದ ಕಪಟ ಪ್ರಶಾಂತ್ ಕಿಶೋರ್‌ ಅವರಿಗೆ ಅಭಿನಂದನೆಗಳು... ಅವರು ಬಿಹಾರವನ್ನು ಬದಲಾಯಿಸಲು ಹೊರಟಿದ್ದರು. ಆದರೆ, ಅವರೇ ಬದಲಾಗಿದ್ದು, ಎಲ್ಲಿಂದ ಪ್ರಾರಂಭಿಸಿದ್ದರೂ, ಅಲ್ಲಿಗೆ ತಲುಪಿದ್ದಾರೆ ಎಂದು ಬರೆದುಕೊಂದಿದ್ದಾರೆ.

ಪ್ಯಾಕ್ಟ್​ ಚೆಕ್​ನಲ್ಲಿ ಸತ್ಯ ಬಯಲು: ಇಂತಹದೊಂದು ಪತ್ರ ವೈರಲ್​ ಆದ ಬೆನ್ನಲ್ಲೇ ಪ್ಯಾಕ್ಟ್​ ಚೆಕ್​ ಮಾಡಲಾಗಿದೆ. ಇದೊಂದು ಪತ್ರ ನಕಲಿ ಮತ್ತು ಪ್ರಶಾಂತ್ ಕಿಶೋರ್ ಬಿಜೆಪಿಗೆ ಸೇರ್ಪಡೆಗೊಂಡಿಲ್ಲ ಎಂದು ಪ್ಯಾಕ್ಟ್​ ಚೆಕ್ ತಂಡ ಪತ್ತೆ ಮಾಡಿದೆ. ಸಂಬಂಧಿತ ಕೀವರ್ಡ್‌ಗಳೊಂದಿಗೆ ಗೂಗಲ್​ ಸರ್ಚ್​​ ನಡೆಸಿದಾಗಲೂ ವೈರಲ್ ಪತ್ರದಲ್ಲಿ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ಕಂಡುಬಂದಿಲ್ಲ.

ಕಿಶೋರ್ ಅವರ ಜಾನ್ ಸೂರಾಜ್ ಪಕ್ಷ ಸಹ ಸಾಮಾಜಿಕ ಜಾಲತಾಣ 'ಎಕ್ಸ್' ಖಾತೆಯಲ್ಲಿ ಪೋಸ್ಟ್​ ಮಾಡಿ, ಈ ವೈರಲ್ ಪತ್ರವನ್ನು ತಳ್ಳಿ ಹಾಕಿರುವುದಲ್ಲೇ ಕಾಂಗ್ರೆಸ್​ ವಿರುದ್ಧ ದೂರಿದೆ. ದೆಹಲಿ ಪೊಲೀಸರು, ಕಾಂಗ್ರೆಸ್, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ನ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಅವರಿಗೆ ಟ್ಯಾಗ್ ಮಾಡಿ, ವ್ಯಂಗ್ಯ ನೋಡಿ, ಕಾಂಗ್ರೆಸ್, ರಾಹುಲ್ ಗಾಂಧಿ, ನೀವೆಲ್ಲರೂ ನಕಲಿ ಸುದ್ದಿಗಳ ಬಗ್ಗೆ ಮಾತನಾಡುತ್ತೀರಿ. ಅದಕ್ಕೆ ಬಲಿಪಶುಗಳೆಂದು ಹೇಳಿಕೊಳ್ಳುತ್ತೀರಿ.ಕಾಂಗ್ರೆಸ್‌ನ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಖುದ್ದಾಗಿ ನಕಲಿ ದಾಖಲೆಯನ್ನು ಹೇಗೆ ಹಂಚಿಕೊಳ್ಳುತ್ತಿದ್ದಾರೆ ಎಂಬುದನ್ನು ಈಗ ನೀವೇ ನೋಡಿ ಎಂದು ಆರೋಪಿಸಿದೆ. ಇದರೊಂದಿಗೆ ಈ ಪತ್ರವನ್ನು ಜೈರಾಮ್ ರಮೇಶ್ ಕಳುಹಿಸಿದ್ದಾರೆ ಎಂದು ತೋರಿಸುವ ವಾಟ್ಸಾಪ್ ಸಂದೇಶದ ಸ್ಕ್ರೀನ್‌ಶಾಟ್​ಅನ್ನು ಪೋಸ್ಟ್ ಮಾಡಲಾಗಿದೆ. ಇದೇ ವೇಳೆ, ಈ ಸ್ಕ್ರೀನ್‌ಶಾಟ್​ ಬಗ್ಗೆ ಪರಿಶೀಲಿಸಲು ಸಾಧ್ಯವಾಗಿಲ್ಲ.

ಕಿಶೋರ್ ಕಚೇರಿ ಹೇಳಿದ್ದೇನು?: ಅಲ್ಲದೇ, ಪ್ಯಾಕ್ಟ್​ ಚೆಕ್ ತಂಡವು ಈ ಬಗ್ಗೆ ಪ್ರಶಾಂತ್ ಕಿಶೋರ್ ಅವರ ಕಚೇರಿಯ ಹರ್ಷವರ್ಧನ್ ಸಿಂಗ್ ಅವರನ್ನು ಸಂಪರ್ಕಿಸಿದೆ. ಪ್ರಶಾಂತ್ ಕಿಶೋರ್ ಭಾರತೀಯ ಜನತಾ ಪಕ್ಷದೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ. ಅವರ ಸಂಪೂರ್ಣ ಗಮನವು ಜನ್ ಸುರಾಜ್‌ನ ಮಿಷನ್​ಅನ್ನು ಬಲಪಡಿಸುವತ್ತ ಇದೆ ಎಂದು ಸಿಂಗ್ ಹೇಳಿದರು. ಮತ್ತೊಂದೆಡೆ, ಪ್ಯಾಕ್ಟ್​ ಚೆಕ್ ತಂಡವು ಬಿಜೆಪಿಯ ಅರುಣ್ ಸಿಂಗ್ ಅವರ ಕಚೇರಿಗೆ ಸಂಪರ್ಕಿಸಿದ್ದು, ಇದು ವೈರಲ್ ಪತ್ರ ನಕಲಿ ಎಂದು ಖಚಿತಪಡಿಸಲಾಗಿದೆ.

ಇದನ್ನೂ ಓದಿ: ಶ್ರೀರಾಮನ ಭಾವಚಿತ್ರವನ್ನು ಓವೈಸಿ ಹಿಡಿದುಕೊಂಡಿರುವುದು ನಿಜವೇ?; ಫ್ಯಾಕ್ಟ್​ ಚೆಕ್ ಇಲ್ಲಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.