ETV Bharat / bharat

ದೆಹಲಿ ವಿಶ್ವದ ಅತ್ಯಂತ ಕಳಪೆ ವಾಯುಮಾಲಿನ್ಯ ಹೊಂದಿರುವ ರಾಷ್ಟ್ರ ರಾಜಧಾನಿ

author img

By ETV Bharat Karnataka Team

Published : Mar 19, 2024, 11:16 AM IST

2022ರಲ್ಲಿ ಭಾರತ ವಿಶ್ವದ ಕಳಪೆ ವಾಯುಗುಣಮಟ್ಟ ಪಟ್ಟಿಯಲ್ಲಿ ಸರಾಸರಿ ಪಿಎಂ 2.5 ಹೊಂದುವ ಮೂಲಕ 8ನೇ ಸ್ಥಾನದಲ್ಲಿತ್ತು.

Delhi was identified as the worlds most polluted capital city
Delhi was identified as the worlds most polluted capital city

ನವದೆಹಲಿ: ಬಿಹಾರದ ಬೆಗುಸರೈ ವಿಶ್ವದ ಅತ್ಯಂತ ಹೆಚ್ಚು ವಾಯುಮಾಲಿನ್ಯ ಹೊಂದಿರುವ ಮೆಟ್ರೋಪಾಲಿಟನ್​ ಪ್ರದೇಶವಾದರೆ, ದೆಹಲಿ ವಿಶ್ವದಲ್ಲೇ ಅತ್ಯಂತ ಕಳಪೆ ವಾಯುಗುಣಮಟ್ಟ ಹೊಂದಿರುವ ರಾಷ್ಟ್ರ ರಾಜಧಾನಿಯಾಗಿದೆ ಎಂದು ಹೊಸ ವರದಿ ತಿಳಿಸಿದೆ.

2023ರ ವಿಶ್ವ ವಾಯು ಗುಣಮಟ್ಟ ವರದಿಯಲ್ಲಿ 134 ದೇಶಗಳ ಪೈಕಿ ಭಾರತ ಮೂರನೇ ಸ್ಥಾನ ಪಡೆದಿತ್ತು. ಇಲ್ಲಿನ ವಾರ್ಷಿಕ ಸರಾಸರಿ ಪ್ರತೀ ಘನ ಮೀಟರ್‌ಗೆ 54.4 ಮೈಕ್ರೋಗ್ರಾಂಗಳಷ್ಟು ಪಿಎಂ2.5 ಸಾಂದ್ರತೆ ಇದೆ. ನೆರೆಯ ಬಾಂಗ್ಲಾದೇಶದಲ್ಲಿ ಪ್ರತೀ ಘನ ಮೀಟರ್‌ಗೆ 79.9 ಮೈಕ್ರೋಗ್ರಾಂಗಳು ಮತ್ತು ಪಾಕಿಸ್ತಾನ 73.7 ಮೈಕ್ರೋಗ್ರಾಂ ಪ್ರತೀ ಘನ ಮೀಟರ್ ವಾಯುಗುಣಮಟ್ಟ ಹೊಂದಿದೆ.

2022ರಲ್ಲಿ ಭಾರತ ವಿಶ್ವದ ಕಳಪೆ ವಾಯುಗುಣಮಟ್ಟದಲ್ಲಿ ಸರಾಸರಿ ಪಿಎಂ 2.5 ಹೊಂದುವ ಮೂಲಕ ಎಂಟನೇ ಸ್ಥಾನದಲ್ಲಿತ್ತು. ಬಿಹಾರದ ಬೆಗುಸರಾಯ್ ವಿಶ್ವದ ಅತ್ಯಂತ ಕಳಪೆ ವಾಯುಗುಣಮಟ್ಟ ಹೊಂದಿರುವ ಮೆಟ್ರೋಪಾಲಿಟನ್​ ನಗರವಾಗಿದ್ದು, ಇಲ್ಲಿ ಪಿಎಂ 2.5 ದಾಖಲಾಗಿದೆ. ಈ ನಗರ 2022ರ ವರದಿಯಲ್ಲಿ ಸ್ಥಾನ ಪಡೆದಿರಲಿಲ್ಲ.

2022ಕ್ಕೆ ಹೋಲಿಸಿದಾಗ ದೆಹಲಿ ವಾಯುಗುಣಮಟ್ಟ 2023ರಲ್ಲಿ ಮತ್ತಷ್ಟು ಕಳಪೆಯಾಗಿದೆ. ಈ ಹಿಂದೆ ಪ್ರತೀ ಘನ ಮೀಟರ್​ಗೆ 89.1 ಮೈಕ್ರೋಗ್ರಾಮ್​​ ಹೊಂದಿದ್ದು, ಪಿಎಂ 2.5 ದಾಖಲಾಗಿತ್ತು. ವಿಶ್ವದ ಅತ್ಯಂತ ಕಳಪೆ ವಾಯುಗುಣಮಟ್ಟ ಹೊಂದಿರುವ ವರದಿಯಲ್ಲಿ 2018ರಿಂದಲೂ ಸತತ ನಾಲ್ಕು ವರ್ಷದಿಂದ ಸ್ಥಾನ ಪಡೆಯುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ವಾರ್ಷಿಕ ಮಾರ್ಗಸೂಚಿ ಮಟ್ಟದಲ್ಲಿ ಶಿಫಾರಸು ಮಾಡಿರುವ ಪ್ರತೀ ಘನ ಮೀಟರ್​​ಗೆ 5 ಮೈಕ್ರೋಗ್ರಾಂಗಿಂತ ಕಳಪೆ ವಾಯುವನ್ನು ಭಾರತದ 1.36 ಬಿಲಿಯನ್​ ಮಂದಿ ಉಸಿರಾಡುತ್ತಿದ್ದಾರೆ ಎಂದು ವರದಿ ಹೇಳಿದೆ.

1.33 ಬಿಲಿಯನ್​ ಜನರು ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಪಿಎಂ 2.5ಗಿಂತ ಏಳು ಪಟ್ಟು ಹೆಚ್ಚಿನ ಮಟ್ಟದಲ್ಲಿ ವಾಯುಮಾಲಿನ್ಯ ಅನುಭವಿಸುತ್ತಾರೆ. ದೇಶದ ಶೇ.66ಕ್ಕಿಂತ ಹೆಚ್ಚಿನ ನಗರಗಳ ವಾಯುಗುಣಮಟ್ಟ ವಾರ್ಷಿಕ ಸರಾಸರಿ ಪ್ರತೀ ಘನ ಮೀಟರ್‌ಗೆ 35 ಮೈಕ್ರೋಗ್ರಾಂಗಳಿಗಿಂತ ಹೆಚ್ಚೆಂದು ವರದಿ ತಿಳಿಸಿದೆ.

ಜಾಗತಿಕವಾಗಿ ವಿತರಣೆಯಾದ 30,000ಕ್ಕೂ ಹೆಚ್ಚು ನಿಯಂತ್ರಕ ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರಗಳು ಮತ್ತು ಸಂಶೋಧನಾ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ ಸೌಲಭ್ಯಗಳು, ಲಾಭರಹಿತ ಸರ್ಕಾರೇತರ ಸಂಸ್ಥೆಗಳು, ಖಾಸಗಿಯವರು ನಿರ್ವಹಿಸುವ ಕಡಿಮೆ ವೆಚ್ಚದ ಗಾಳಿಯ ಗುಣಮಟ್ಟದ ಸಂವೇದಕಗಳ ಮಾಹಿತಿಯನ್ನು ಈ ವರದಿ ಒಳಗೊಂಡಿದೆ.

2022ರ ವಿಶ್ವ ವಾಯು ಗುಣಮಟ್ಟ ವರದಿಯಲ್ಲಿ 131 ದೇಶಗಳ 7,323 ಸ್ಥಳ, ಪ್ರದೇಶಗಳ ದತ್ತಾಂಶವನ್ನು ಇದು ಒಳಗೊಂಡಿದೆ. 2023ರಲ್ಲಿ ಈ ಸಂಖ್ಯೆ ಹೆಚ್ಚಿದ್ದು, 134 ದೇಶದ 7,812 ಪ್ರದೇಶದ ಮಾಹಿತಿ ಹೊಂದಿದೆ.

ವಿಶ್ವಾದ್ಯಂತ ವಾಯು ಮಾಲಿನ್ಯವು 9ರ ಪೈಕಿ ಒಬ್ಬರ ಸಾವಿಗೆ ಕಾರಣವಾಗುತ್ತಿದ್ದು, ಮಾನವ ಆರೋಗ್ಯಕ್ಕೆ ಬೆದರಿಕೆ ಒಡ್ಡುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಾಗತ್ತಿನಾದ್ಯಂತ ಮಕ್ಕಳ ಅಕಾಲಿಕ ಜನನಕ್ಕೂ ಕಲುಷಿತ ವಾತಾವರಣ ಕಾರಣವಾಗುತ್ತಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಕಣ್ಮರೆಯಾಗುತ್ತಿರುವ ವಸಂತ ಕಾಲ, ಭಾರತದಲ್ಲಿ ಚಳಿಗಾಲದಲ್ಲೂ ತಾಪಮಾನ ಏರಿಕೆ: ಅಮೆರಿಕ ವಿಜ್ಞಾನಿಗಳ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.