ETV Bharat / bharat

ಕಾಂಗ್ರೆಸ್​ ಬಿಟ್ಟು ಬಿಜೆಪಿ ಸೇರಲ್ಲ, ಜನ ಬಯಸಿದರೆ ರಾಜಕೀಯದಿಂದ ನಿವೃತ್ತಿಗೆ ಸಿದ್ಧ: ಕಮಲ್​ನಾಥ್​

author img

By ETV Bharat Karnataka Team

Published : Feb 29, 2024, 11:18 AM IST

Updated : Feb 29, 2024, 12:07 PM IST

ಕಮಲ್​ನಾಥ್​
ಕಮಲ್​ನಾಥ್​

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್​ನಾಥ್ ಅವರು ಕಾಂಗ್ರೆಸ್​ ಬಿಟ್ಟು, ಬಿಜೆಪಿ ಸೇರಲ್ಲ. ಇದು ಮಾಧ್ಯಮಗಳ ಸೃಷ್ಟಿ ಎಂದು ಹೇಳಿದ್ದಾರೆ.

ಛಿಂದ್ವಾರ (ಮಧ್ಯಪ್ರದೇಶ): ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಕಮಲ್​ನಾಥ್ ಬಿಜೆಪಿ ಸೇರುತ್ತಾರೆ ಎಂಬ ವದಂತಿಗೆ ಖುದ್ದು ಅವರೇ ಇತಿಶ್ರೀ ಹಾಡಿದ್ದಾರೆ. ಇದರ ಬೆನ್ನಲ್ಲೇ, 'ಜನರು ಬಯಸಿದರೆ ನಾನು ರಾಜಕೀಯದಿಂದ ನಿವೃತ್ತಿ ಹೊಂದಲು ಸಿದ್ಧ' ಎಂದು ಹೇಳುವ ಮೂಲಕ ನಿವೃತ್ತಿಯ ಮಾತನ್ನಾಡಿದ್ದಾರೆ.

ತಮ್ಮ ಮತ್ತು ಕಾಂಗ್ರೆಸ್​ನ ಭದ್ರಕೋಟೆಯಾದ ಛಿಂದ್ವಾರಾ ಜಿಲ್ಲೆಯ ಚೌರೈ ವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀವು (ಸಾರ್ವಜನಿಕರು) ನನಗೆ ಇಷ್ಟು ವರ್ಷಗಳ ಕಾಲ ಪ್ರೀತಿ ಮತ್ತು ವಿಶ್ವಾಸವನ್ನು ತೋರಿಸಿದ್ದೀರಿ. ನಾನು ರಾಜಕೀಯದಿಂದ ವಿದಾಯ ಹೇಳಬೇಕು ಎಂದು ಬಯಸಿದರೆ, ಅದುವೇ ನಿಮ್ಮ ಆಯ್ಕೆಯಾಗಿದ್ದರೆ, ನಾನು ಪೂರ್ಣವಿರಾಮ ಹಾಕಲು ಸಿದ್ಧನಿದ್ದೇನೆ. ನಾನು ಯಾವುದೇ ಒತ್ತಾಯಪೂರ್ವಕವಾಗಿ ಇಲ್ಲಿ ಮುಂದುವರಿಯಲು ಬಯಸುವುದಿಲ್ಲ. ಎಲ್ಲವನ್ನೂ ಜನರ ನಿರ್ಧಾರಕ್ಕೆ ಬಿಡುತ್ತೇನೆ ಎಂದು ಹೇಳಿದರು.

ನಮ್ಮ ರಾಜಕೀಯವನ್ನು ಅಂತಿಮವಾಗಿ ಜನರೇ ನಿರ್ಧರಿಸಬೇಕು. ಹೀಗಾಗಿ ನಾನು ಇನ್ನು ಮುಂದೆ ಸಕ್ರಿಯ ರಾಜಕಾರಣದಲ್ಲಿ ಇರಬೇಕೆ ಬೇಡವೇ ಎಂಬುದನ್ನು ಅವರ (ಜನರ) ನಿರ್ಧಾರಕ್ಕೆ ಬಿಡುತ್ತಿದ್ದೇನೆ. ಉಳಿದೆಲ್ಲವನ್ನೂ ಜನರೇ ನಿರ್ಧರಿಸಲಿ ಎಂದು ಅವರು ಹೇಳಿದ್ದಾರೆ.

ಬಿಜೆಪಿ ವಿರುದ್ಧ ಟೀಕೆ: ರಾಮಮಂದಿರ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡಬಾರದು. ರಾಮಮಂದಿರವನ್ನು ಆ ಪಕ್ಷ ಗುತ್ತಿಗೆ ಪಡೆದಿದಿಯೇ?. ಅದು ಸಾರ್ವಜನಿಕ ಹಣದಿಂದ ಕಟ್ಟಿದ ಭವ್ಯ ಮಂದಿರ. ರಾಮನನ್ನು ರಾಜಕೀಯವಾಗಿ ಬಿಜೆಪಿ ಬಳಸಿಕೊಳ್ಳುತ್ತಿದೆ. ಇದು ಸರಿಯಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಕಾಂಗ್ರೆಸ್​ ಬಿಡುವುದಾಗಿ ಹೇಳಿಲ್ಲ: ಇದಕ್ಕೂ ಮೊದಲು ಮಾತನಾಡಿದ ಕಮಲ್​ನಾಥ್ ಅವರು, ನಾನು ಕಾಂಗ್ರೆಸ್​ ಬಿಟ್ಟು ಬಿಜೆಪಿ ಸೇರುತ್ತೇನೆ ಎಂದು ಎಲ್ಲೂ ಹೇಳಿಲ್ಲ. ನೀವು ಎಂದಾದರೂ ನನ್ನ ಬಾಯಿಂದ ಆ ವಾಕ್ಯವನ್ನು ಕೇಳಿದ್ದೀರಾ? ಯಾವುದೇ ಸೂಚನೆಯನ್ನು ನಾನು ನೀಡಿದ್ದೇನೆಯೇ?, ಸದ್ಯಕ್ಕೆ ನನ್ನ ಮುಂದೆ ಅಂತಹ ಯಾವುದೇ ವಿಚಾರ ಇಲ್ಲ ಎಂದು ಹೇಳುವ ಮೂಲಕ ಪಕ್ಷ ಬದಲಾವಣೆ ಊಹಾಪೋಹಗಳಿಗೆ ತೆರೆ ಎಳೆದರು.

ಮಾಧ್ಯಮಗಳಲ್ಲಿ ಮಾತ್ರ ಈ ವಿಚಾರ ಹರಿದಾಡುತ್ತಿದೆ. ನಾನು ಈ ಬಗ್ಗೆ ಎಲ್ಲೂ ಹೇಳಿಕೆ ನೀಡಿಲ್ಲ. ಪಕ್ಷ ಬದಲಿಸುವ ವಿಚಾರವನ್ನು ಅವರೇ (ಮಾಧ್ಯಮಗಳು) ಚರ್ಚೆ ಮಾಡಿ ನಾನು ಹೇಳಿದಂತೆ ಬಿಂಬಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಮಾಧ್ಯಮಗಳ ಮೇಲೆ ಬೇಸರ ವ್ಯಕ್ತಪಡಿಸಿದರು.

ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಕಮಲ್​ನಾಥ್​ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಬಳಿಕ ಅವರು ಪಕ್ಷದ ನಡೆಯಿಂದ ಮುನಿಸಿಕೊಂಡಿದ್ದಾರೆ. ಬಿಜೆಪಿಗೆ ಸೇರುವ ಸಾಧ್ಯತೆ ಇದೆ ಎಂಬ ವದಂತಿ ಹರಿದಾಡಿತ್ತು.

ಇದನ್ನೂ ಓದಿ: ಕಮಲ್ ನಾಥ್​ಗೆ ಬಿಜೆಪಿಯ ಬಾಗಿಲು ಮುಚ್ಚಲಾಗಿದೆ: ಮಧ್ಯಪ್ರದೇಶದ ಸಚಿವ ಕೈಲಾಶ್ ವಿಜಯವರ್ಗಿಯ

Last Updated :Feb 29, 2024, 12:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.