ETV Bharat / bharat

ರಾಜ್ಯಸಭೆ ಚುನಾವಣೆ: ಗುಜರಾತ್​ನಿಂದ ನಡ್ಡಾ ಕಣಕ್ಕೆ, ಅಶೋಕ್ ಚವಾಣ್​ಗೂ ಬಿಜೆಪಿ ಟಿಕೆಟ್​

author img

By ETV Bharat Karnataka Team

Published : Feb 14, 2024, 3:44 PM IST

Updated : Feb 14, 2024, 10:25 PM IST

ಮುಂಬರುವ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಗುಜರಾತ್​ನಿಂದ ಮತ್ತು ಅಶೋಕ್ ಚವಾಣ್ ಮಹಾರಾಷ್ಟ್ರದಿಂದ ಕಣಕ್ಕಿಳಿಯಲಿದ್ದಾರೆ.

bjp-chief-jp-nadda-is-rajya-sabha-poll-candidate-from-gujarat-ex-cm-chavan-from-maharashtra
ರಾಜ್ಯಸಭೆ ಚುನಾವಣೆ: ಗುಜರಾತ್​ನಿಂದ ನಡ್ಡಾ ಕಣಕ್ಕೆ, ನಿನ್ನೆಯಷ್ಟೇ ಬಿಜೆಪಿ ಸೇರಿದ ಅಶೋಕ್ ಚವಾಣ್​ಗೆ ಟಿಕೆಟ್​

ನವದೆಹಲಿ: ರಾಜ್ಯಸಭೆ ಚುನಾವಣೆಗೆ ಬಿಜೆಪಿ ಮತ್ತಷ್ಟು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಗುಜರಾತ್​ ಮತ್ತು ಕಾಂಗ್ರೆಸ್​ ತೊರೆದು ನಿನ್ನೆಯಷ್ಟೇ ಬಿಜೆಪಿಗೆ ಸೇರ್ಪಡೆಗೊಂಡ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರಿಗೆ ಮಹಾರಾಷ್ಟ್ರದಿಂದ ಟಿಕೆಟ್​ ಘೋಷಿಸಲಾಗಿದೆ.

ರಾಜ್ಯಸಭಾ ಚುನಾವಣೆಗೆ ಬಿಜೆಪಿ ಗುಜರಾತ್‌ನಿಂದ ನಾಲ್ವರು ಮತ್ತು ಮಹಾರಾಷ್ಟ್ರದಿಂದ ಮೂವರು ಸೇರಿ ಒಟ್ಟು 7 ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಬಹುದಾಗಿದೆ. ಪ್ರಸ್ತುತ ನಡ್ಡಾ ಹಿಮಾಚಲ ಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ. ಆದರೆ, ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಸದ್ಯ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಈ ರಾಜ್ಯದಿಂದ ಏಕೈಕ ಸ್ಥಾನವನ್ನು ಗೆಲ್ಲಲು ಅಗತ್ಯವಾದ ಸಂಖ್ಯಾಬಲವನ್ನು ಬಿಜೆಪಿ ಹೊಂದಿಲ್ಲ.

ಇದನ್ನೂ ಓದಿ: ಮಾಜಿ ಪಿಎಂ ಮನಮೋಹನ್​ ಸಿಂಗ್​ ಬದಲಿಗೆ ರಾಜಸ್ಥಾನದಿಂದ ರಾಜ್ಯಸಭೆಗೆ ಸೋನಿಯಾ ನಾಮಪತ್ರ

ಕೇಂದ್ರ ಸಚಿವರಾದ ಮನ್ಸುಖ್ ಮಾಂಡವಿಯಾ ಮತ್ತು ಪರ್ಷೋತ್ತಮ್ ರೂಪಾಲಾ ಗುಜರಾತ್‌ನಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಮತ್ತೊಬ್ಬ ಕೇಂದ್ರ ಸಚಿವ ನಾರಾಯಣ ರಾಣೆ ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಮೂವರಿಗೂ ಈ ಬಾರಿ ಟಿಕೆಟ್​ ಘೋಷಣೆ ಮಾಡಿಲ್ಲ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇವರು ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇವರ ಬದಲಿಗೆ ಗುಜರಾತ್​ನಿಂದ ಗೋವಿಂದ್​ಭಾಯ್​ ಧೋಲಾಕಿಯ, ಮಯಾಂಕ್​ಭಾಯ್​ ನಾಯಕ್, ಡಾ.ಜಯಶ್ವಂತ್ ಸಿನ್ಹಾ ಹಾಗೂ ಮಹಾರಾಷ್ಟ್ರದಿಂದ ಮೇಧಾ ಕುಲಕರ್ಣಿ, ಡಾ.ಅಜೀತ್ ಗೋಪಾಚ್ಚಾಡೆ ಅವರಿಗೆ ಬಿಜೆಪಿ ಟಿಕೆಟ್​ ಘೋಷಿಸಲಾಗಿದೆ. ಇದಕ್ಕೂ ಮುನ್ನ ಇಂದು ಬೆಳಗ್ಗೆ ಮಧ್ಯಪ್ರದೇಶದಿಂದ ಡಾ.ಎಲ್​.ಮುರುಗನ್​, ಉಮೇಶ್​ನಾಥ್​ ಮಹಾರಾಜ್​, ಮಯಾ ನರೋಲಿಯಾ ಮತ್ತು ಬನ್ಸಿಲಾಲ್ ಗುರ್ಜರ್​ ಹಾಗೂ ಒಡಿಶಾದಿಂದ ಅಶ್ವಿನಿ ವೈಷ್ಣವ್​ ಅವರಿಗೆ ಟಿಕೆಟ್​ ಪ್ರಕಟಿಸಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಲಾಲ್​ ಬಹದ್ದೂರ್​ ಶಾಸ್ತ್ರಿ ಮೊಮ್ಮಗ ವಿಭಕರ್​ ಶಾಸ್ತ್ರಿ

Last Updated : Feb 14, 2024, 10:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.