ಗುರ್ಮೀತ್​​ ರಾಮ್ ರಹೀಮ್​ಗೆ 50 ದಿನಗಳ ಪೆರೋಲ್

author img

By ETV Bharat Karnataka Desk

Published : Jan 19, 2024, 11:53 PM IST

gurmeet ram rahim

ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್​ ರಾಮ್ ಅವರಿಗೆ 50 ದಿನಗಳ ಪೆರೋಲ್ ಸಿಕ್ಕಿದೆ.

ಚಂಡೀಗಢ: ಸಾಧ್ವಿಯರ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಆರೋಪಿ ಸಿರ್ಸಾ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ಮತ್ತೊಮ್ಮೆ ಜೈಲಿನಿಂದ ಹೊರಬರುತ್ತಿದ್ದಾರೆ. ಗುರ್ಮೀತ್ ರಾಮ್ ರಹೀಮ್ ಗೆ 50 ದಿನಗಳ ಪೆರೋಲ್ ಸಿಕ್ಕಿದೆ.

ರಾಮ್ ರಹೀಮ್ ರೋಹ್ಟಕ್ ನ ಸುನಾರಿಯಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಅವರು ಜೈಲಿನಿಂದ ಹೊರಬರಬಹುದು. ಮೊದಲಿನಂತೆ ಬಾಗ್‌ಪತ್‌ನಲ್ಲಿರುವ ಬರ್ನವಾ ಆಶ್ರಮದಲ್ಲಿ ಪೆರೋಲ್ ಅವಧಿಯನ್ನು ಗುರ್ಮೀತ್​ ರಾಮ್​ ರಹೀಂ ಕಳೆಯಲಿದ್ದಾರೆ. ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ರೋಹ್ಟಕ್ ಜೈಲಿನಲ್ಲಿದ್ದಾರೆ. ಅವರು ಜೈಲು ಆಡಳಿತದಿಂದ ಪೆರೋಲ್​ಗೆ ಅರ್ಜಿ ಸಲ್ಲಿಸಿದ್ದರು. ಈ ಹಿಂದೆಯೂ 8 ಬಾರಿ ಜೈಲಿನಿಂದ ಅವರು ಹೊರಬಂದಿದ್ದಾರೆ.

ಸಿರ್ಸಾ ದೋಷಿ ಸಾಧ್‌ಗೆ ಹೋಗುವುದಿಲ್ಲ : ರಾಮ್ ರಹೀಮ್ ದೀರ್ಘಕಾಲದವರೆಗೆ ಬಂದಾಗಲೆಲ್ಲಾ ಅವರು ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯ ಬರ್ನಾವಾ ಆಶ್ರಮದಲ್ಲಿ ಇರುತ್ತಾರೆ. ಪೆರೋಲ್ ಅಥವಾ ಫರ್ಲೋನಲ್ಲಿರುವಾಗ, ಸಿರ್ಸಾದಲ್ಲಿರುವ ಅವರ ಡೇರಾ ಸಚ್ಚಾ ಸೌದಾ ಪ್ರಧಾನ ಕಚೇರಿಯಲ್ಲಿ ಉಳಿಯಲು ಅವರಿಗೆ ಅವಕಾಶವಿಲ್ಲ. ಈ ಬಗ್ಗೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಕೂಡ ರಾಮ್ ರಹೀಮ್ ಜೈಲು ನಿಯಮಗಳ ಪ್ರಕಾರ ಪೆರೋಲ್ ಅಥವಾ ಫರ್ಲೋ ಪಡೆಯುತ್ತಾರೆ ಎಂದು ಹೇಳಿದ್ದಾರೆ. ರಾಮ್ ರಹೀಮ್ ಸಿರ್ಸಾಗೆ ಬರಲು ಸರ್ಕಾರ ಬಿಡುವುದಿಲ್ಲ ಎಂಬ ವಿಚಾರ ಸಿಎಂ ಅವರ ಹೇಳಿಕೆಯಿಂದ ಖಚಿತವಾಗಿದೆ.

ರಾಮ್ ರಹೀಮ್ ಜೈಲಿನಿಂದ ಹೊರಬಂದಿದ್ದು ಯಾವಾಗ?

  • 24 ಅಕ್ಟೋಬರ್ 2020 : ಮೊದಲ ಬಾರಿಗೆ, ಗುರ್ಮೀತ್ ರಾಮ್ ರಹೀಮ್‌ಗೆ ಗುರುಗ್ರಾಮ್‌ನ ಆಸ್ಪತ್ರೆಯಲ್ಲಿ ತನ್ನ ಅನಾರೋಗ್ಯದ ತಾಯಿಯನ್ನು ಭೇಟಿ ಮಾಡಲು 1 ದಿನದ ಪೆರೋಲ್ ನೀಡಲಾಗಿತ್ತು.
  • 21 ಮೇ 2021 : ಎರಡನೇ ಬಾರಿಗೆ, ರಾಮ್ ರಹೀಮ್ ತನ್ನ ಅಸ್ವಸ್ಥ ತಾಯಿಯನ್ನು ಭೇಟಿ ಮಾಡಲು 12 ಗಂಟೆಗಳ ಪೆರೋಲ್ ನೀಡಲಾಗಿತ್ತು.
  • ಜೂನ್ 2022 : ರಾಮ್ ರಹೀಮ್‌ಗೆ ನಾಲ್ಕನೇ ಬಾರಿಗೆ 30 ದಿನಗಳ ಪೆರೋಲ್ ಕೊಡಲಾಗಿತ್ತು. ಈ ಸಮಯದಲ್ಲಿ ಅವರು ಬಾಗ್ಪತ್ ಆಶ್ರಮದಲ್ಲಿ ತಂಗಿದ್ದರು.
  • 14 ಅಕ್ಟೋಬರ್ 2022 : ಡೇರಾ ಸಚ್ಚಾ ಸೌದಾ ಮುಖ್ಯಸ್ಥ ರಾಮ್ ರಹೀಮ್​ ಐದನೇ ಬಾರಿಗೆ 40 ದಿನಗಳ ಪೆರೋಲ್ ಮೇಲೆ ಬಿಡುಗಡೆಗೊಂಡಿದ್ದರು. ಏತನ್ಮಧ್ಯೆ, ಅವರು ಬಾಗ್ಪತ್ ಆಶ್ರಮದಿಂದ 3 ಸಂಗೀತ ವಿಡಿಯೋಗಳನ್ನು ಬಿಡುಗಡೆ ಮಾಡಿ, ಸುದ್ದಿಯಾಗಿದ್ದರು.
  • 21 ಜನವರಿ 2023 : ರಾಮ್ ರಹೀಮ್ ಆರನೇ ಬಾರಿಗೆ ಶಾ ಸತ್ನಾಮ್ ಸಿಂಗ್ ಅವರ ಹುಟ್ಟುಹಬ್ಬಕ್ಕೆ ಹಾಜರಾಗಿದ್ದಕ್ಕಾಗಿ 40 ದಿನಗಳ ಪೆರೋಲ್ ಪಡೆದುಕೊಂಡಿದ್ದರು.
  • 21 ನವೆಂಬರ್ 2023 : ದಿವಂಗತ ಡೇರಾ ಮುಖ್ಯಸ್ಥರ ಜನ್ಮದಿನದಂದು ರಾಮ್ ರಹೀಮ್‌ಗೆ ಪೆರೋಲ್ ನೀಡಲಾಯಿತ್ತು. ಇದೀಗ ಮತ್ತೆ ಅವರಿಗೆ ಪೆರೋಲ್​ ನೀಡಲಾಗಿತ್ತು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.