ETV Bharat / bharat

ಡ್ರಗ್ಸ್​ ಇರುವ ಪಾರ್ಸೆಲ್​ ಬಂದಿದೆ ಎಂದು ಹೇಳಿ ವೈದ್ಯೆಗೆ 48 ಲಕ್ಷ ರೂ. ಪಂಗನಾಮ: ಸೈಬರ್​ ಕಳ್ಳರ ಕರಾಮತ್ತು - money Fraud to doctor

author img

By ETV Bharat Karnataka Team

Published : Apr 24, 2024, 12:59 PM IST

ಕೊರಿಯರ್​ನಲ್ಲಿ ಡ್ರಗ್ಸ್ ಪಾರ್ಸೆಲ್ ಬಂದಿದೆ ಎಂದು ಹೇಳಿ ವೈದ್ಯೆಗೆ 48 ಲಕ್ಷ ರೂಪಾಯಿಗಳನ್ನು ಸೈಬರ್​ ಕಳ್ಳರು ವಂಚಿಸಿರುವ ಪ್ರಕರಣ ಹೈದರಾಬಾದ್​ನಲ್ಲಿ ನಡೆದಿದೆ.

48 lakhs looted  drugs courier parcel  money Fraud to doctor
ಕೊರಿಯರ್​ನಲ್ಲಿ ಡ್ರಗ್ಸ್ ಪಾರ್ಸೆಲ್ ಹೇಳಿ ವೈದ್ಯೆಗೆ 48 ಲಕ್ಷ ರೂ. ಪಂಗನಾಮ ಹಾಕಿದ ಸೈಬರ್​ ಕಳ್ಳರು

ಹೈದರಾಬಾದ್: ಕೊರಿಯರ್​ನಲ್ಲಿ ಡ್ರಗ್ಸ್ ಪಾರ್ಸೆಲ್ ಬಂದಿದೆ ಎಂದು ಸೈಬರ್ ಕಳ್ಳರು ವೈದ್ಯೆಗೆ ಬೆದರಿಸಿ ಹಣ ಸುಲಿಗೆ ಮಾಡಿರುವ ಘಟನೆ ಹೈದರಾಬಾದ್​​ನಲ್ಲಿ ಬೆಳಕಿಗೆ ಬಂದಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ವಂಚಕರು ನಗರದ ವೈದ್ಯರೊಬ್ಬರಿಗೆ ಕರೆ ಮಾಡಿದ್ದಾರೆ. ಮಲೇಷ್ಯಾದಿಂದ ದೆಹಲಿಗೆ ಕೊರಿಯರ್ ಕಂಪನಿ ಮೂಲಕ ತಮ್ಮ ಹೆಸರಿಗೆ ಪಾರ್ಸೆಲ್ ಬಂದಿದೆ. ನಿಮಗೆ ಬಂದಿರುವ ಕೊರಿಯರ್​ನಲ್ಲಿ ಡ್ರಗ್ಸ್ ಇದೆ ಎಂದು ದೆಹಲಿ ಪೊಲೀಸರ ಹೆಸರಿನಲ್ಲಿ ಕರೆ ಮಾಡಿದ್ದಾರೆ.

ಸ್ವಲ್ಪ ಹೊತ್ತಿನ ಬಳಿಕ ಯಾರೋ ತಾನು ಸಿಬಿಐ ಕಾನ್ಸ್​​ಟೇಬಲ್​ ಎಂದು ಕರೆ ಮಾಡಿದ್ದಾರೆ. ನಿಮ್ಮ (ವೈದ್ಯೆ) ಹೆಸರಿನ ಅರೆಸ್ಟ್ ವಾರಂಟ್​ನ ಪ್ರತಿಯನ್ನು ವಾಟ್ಸ್​ಆ್ಯಪ್​​ನಲ್ಲಿ ಹಾಕಲಾಗಿದೆ. ಆಕೆ ದೆಹಲಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಸೈಬರ್​ ವಂಚಕ ಆ ಕಡೆಯಿಂದ ಹೇಳಿದ್ದಾನೆ. ಇಲ್ಲದಿದ್ದರೆ, ಮುಂದಿನ ಸಮಯದಲ್ಲಿ ನಿಮ್ಮನ್ನು ಹೈದರಾಬಾದ್ ಪೊಲೀಸರು ಗೃಹಬಂಧನದಲ್ಲಿ ಇರಿಸಲಿದ್ದಾರೆ. ತಾವು ತನಿಖೆಗೆ ಸಹಕರಿಸಬೇಕು ಎಂದು ವೈದ್ಯೆಗೆ ಬೆದರಿಕೆ ಹಾಕಿದ್ದಾರೆ.

ವೈದ್ಯೆಯು ಆರೋಪಿಗಳು ಹೇಳಿದಂತೆ ಎಲ್ಲವನ್ನೂ ಚಾಚು ತಪ್ಪದೇ ಪಾಲನೆ ಮಾಡಿದ್ದಾರೆ. ಬಳಿಕ ವ್ಯಕ್ತಿಯೋರ್ವ ತಾನು ಹಿರಿಯ ಸಿಬಿಐ ಅಧಿಕಾರಿ ಎಂದು ಹೇಳಿ, ಸುಮಾರು ಎರಡು ಗಂಟೆಗಳ ಕಾಲ ವಾಟ್ಸ್​ಆ್ಯಪ್​​ ಮೂಲಕವೇ ವೈದ್ಯೆಯನ್ನು ತನಿಖೆಗೆ ಒಳಪಡಿಸಿದ್ದಾರೆ. ಬ್ಯಾಂಕ್ ಖಾತೆಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ವಿಚಾರಿಸಿದ್ದಾನೆ.

ಸ್ವಲ್ಪ ಸಮಯದ ನಂತರ, ಆ ವ್ಯಕ್ತಿ ಭದ್ರತಾ ನಿಧಿಯ ಅಡಿ ಸ್ವಲ್ಪ ಮೊತ್ತವನ್ನು ಪಾವತಿಸಲು ಹೇಳಿದ್ದಾನೆ. ಸಂತ್ರಸ್ತೆ ತನ್ನ ಖಾತೆಯಲ್ಲಿ ಕೇವಲ 33,000 ರೂ.ಗಳಿವೆ ಎಂದು ಹೇಳಿದಾಗ, ಆತನು ಬ್ಯಾಂಕ್ ಠೇವಣಿ ವಿವರಗಳನ್ನು ಕೇಳಿದ್ದಾನೆ. ಭಯಗೊಂಡ ಸಂತ್ರಸ್ತೆ ತನ್ನ ಬಳಿ ತಲಾ 25 ಲಕ್ಷ ರೂಪಾಯಿಯ ಎರಡು ಸ್ಥಿರ ಠೇವಣಿ ಇದೆ ಎಂದು ತಿಳಿಸಿದ್ದಾರೆ. ಈ ಮೊತ್ತವನ್ನು ಆರ್‌ಬಿಐನ ರಹಸ್ಯ ಖಾತೆಗೆ ಜಮಾ ಮಾಡುವಂತೆ ಸೈಬರ್​ ಖದೀಮ ತಿಳಿಸಿದ್ದಾನೆ.

ಸಂತ್ರಸ್ತೆ 48 ಲಕ್ಷ ರೂ.ಗಳನ್ನು ಆರೋಪಿ ಹೇಳಿದ ಖಾತೆಗೆ ವರ್ಗಾಯಿಸಿದ್ದಾರೆ. ಸ್ವಲ್ಪ ಸಮಯದ ನಂತರ ಎಚ್ಚೆತ್ತುಕೊಂಡ ಅವರು, ತಕ್ಷಣ ಆನ್‌ಲೈನ್‌ನಲ್ಲಿ ದೂರು ದಾಖಲಿಸಿದ್ದಾರೆ. ಹೈದರಾಬಾದ್ ಸೈಬರ್ ಪೊಲೀಸರು ವೈದ್ಯೆ ನೀಡಿದ ದೂರಿನ ಮೇಲೆ ಇದೀಗ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಹಲ್ದಿ ಸಮಾರಂಭದಲ್ಲಿ ವಿದ್ಯುತ್ ಸ್ಪರ್ಶಿಸಿ ವರ ಸಾವು; ಸಂಭ್ರಮದ ಮದುವೆಯಲ್ಲಿ ಸೂತಕ - Groom Electrocuted

ETV Bharat Logo

Copyright © 2024 Ushodaya Enterprises Pvt. Ltd., All Rights Reserved.