ETV Bharat / bharat

ಗಣಿಗಾರಿಕೆ ವೀಕ್ಷಣೆ ವೇಳೆ ಲಿಫ್ಟ್ ವೈರ್ ಕಟ್‌: 8 ಅಧಿಕಾರಿಗಳ ರಕ್ಷಣೆ, ಮುಂದುವರೆದ ಕಾರ್ಯಾಚರಣೆ - Officials Trapped In Mine

author img

By PTI

Published : May 15, 2024, 9:21 AM IST

Updated : May 15, 2024, 10:18 AM IST

ಗಣಿಗಾರಿಕೆ ವೀಕ್ಷಣೆಗೆ ತೆರಳಿದ್ದ ವಿಜಿಲೆನ್ಸ್​ ಅಧಿಕಾರಿಗಳು ಲಿಫ್ಟ್​ ವೈರ್ ತುಂಡಾಗಿ ಗಣಿಯಲ್ಲಿ ಸಿಲುಕಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ರಾಜಸ್ಥಾನದಲ್ಲಿ ಗಣಿ ದುರಂತ
ರಾಜಸ್ಥಾನದಲ್ಲಿ ಗಣಿ ದುರಂತ (ETV Bharat)

ಜೈಪುರ: ರಾಜಸ್ಥಾನದ ನೀಮ್​ ಕಾ ಥಾನಾ ಜಿಲ್ಲೆಯಲ್ಲಿರುವ ಹಿಂದೂಸ್ತಾನ್ ಕಾಪರ್ ಲಿಮಿಟೆಡ್‌ನ ಕೋಲಿಹಾನ್ ಗಣಿಯಲ್ಲಿ ಲಿಫ್ಟ್​ ವೈರ್​ ತುಂಡಾಗಿ 14 ಅಧಿಕಾರಿಗಳು ಗಣಿಯೊಳಗೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಈಗಾಗಲೇ 8 ಮಂದಿಯನ್ನು ರಕ್ಷಿಸಲಾಗಿದ್ದು, ಇನ್ನುಳಿದವರಿಗೆ ಕಾರ್ಯಾಚರಣೆ ನಡೆಯುತ್ತಿದೆ.

ಪೊಲೀಸ್ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಮೇ 14ರಂದು ವಿಜಿಲೆನ್ಸ್ ತಂಡ ತಪಾಸಣೆಗಾಗಿ ಗಣಿಗೆ ಆಗಮಿಸಿತ್ತು. ಈ ವೇಳೆ ಸಿಬ್ಬಂದಿಯ ಸಾಗಣೆಗೆ ಬಳಸಲಾಗುವ ಶಾಫ್ಟ್‌ (ಗಣಿ ಲಿಫ್ಟ್​) ಮೂಲಕ ಗಣಿಯೊಳಗೆ ಪ್ರವೇಶಿಸಿ ಮೇಲಕ್ಕೆ ಬರುವಾಗ ಶಾಫ್ಟ್​ ವೈರ್​ ತುಂಡಾಗಿದೆ. ಸದ್ಯ ಎಂಟು ಮಂದಿಯನ್ನು ರಕ್ಷಿಸಲಾಗಿದ್ದು ಜೈಪುರದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಉಳಿದಂತೆ, ಇನ್ನೂ ನಾಲ್ಕು ಮಂದಿ 1,875 ಅಡಿ ಆಳದಲ್ಲಿ ಸಿಲುಕಿದ್ದಾರೆ. ಗಣಿ ಲಿಫ್ಟ್‌ನಲ್ಲಿ ಕೋಲ್ಕತ್ತಾದ ವಿಜಿಲೆನ್ಸ್ ತಂಡ ಮತ್ತು ಹಿರಿಯ ಕೆಸಿಸಿ ಅಧಿಕಾರಿಗಳು ಸಿಲುಕಿಕೊಂಡಿದ್ದಾರೆ.

ಸದ್ಯ ಎನ್​ಡಿಆರ್​ಎಫ್ ನಿರಂತರ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು ಸ್ಥಳದಲ್ಲಿ ಒಂಬತ್ತು ಆಂಬ್ಯುಲೆನ್ಸ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ, ಅಧಿಕಾರಿಗಳ ರಕ್ಷಣಾ ಕಾರ್ಯ ಮುಂದುವರೆದಿದೆ. ಗಣಿಯೊಳಗೆ ಸಿಲುಕಿರುವ ಎಲ್ಲರಿಗೂ ಆಹಾರ, ಆಕ್ಸಿಜನ್​ ಪೂರೈಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವಿಜಯಪುರ: 60 ಅಡಿ ಆಳದ ಪಾಳು ಬಿದ್ದ ಬಾವಿಯಿಂದ ಆಕಳು ರಕ್ಷಣೆ - Cow rescued

Last Updated :May 15, 2024, 10:18 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.