ಕಾಂಗ್ರೆಸ್​ ಅಭ್ಯರ್ಥಿಗೆ ಮತ ಹಾಕಿದ್ದೇನೆ: ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ

By

Published : Jun 10, 2022, 12:48 PM IST

thumbnail

ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಜೆಡಿಎಸ್ ಸದಸ್ಯ ಕೆ ಶ್ರೀನಿವಾಸ್​ ಗೌಡ ಕಾಂಗ್ರೆಸ್​​ಗೆ ಮತ ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಶಾಸಕರೇ ಖುದ್ದಾಗಿ ಹೇಳಿಕೊಂಡಿದ್ದಾರೆ. ಮತಚಲಾವಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್​ಗೆ ಮತ ಹಾಕಿರುವುದನ್ನು ಸ್ಪಷ್ಟಪಡಿಸಿದರು. ನಾನು ಕಾಂಗ್ರೆಸ್​ ಪಕ್ಷವನ್ನ ಪ್ರೀತಿಸುತ್ತೇನೆ. ಹೀಗಾಗಿ, ಕಾಂಗ್ರೆಸ್​ ಅಭ್ಯರ್ಥಿಗೆ ಮತ ಚಲಾಯಿಸಿದ್ದೇನೆ ಎಂದು ಶ್ರೀನಿವಾಸ್​ ಗೌಡ ಹೇಳಿದ್ದಾರೆ. ಈ ಹಿಂದೆ ಕಾಂಗ್ರೆಸ್​ನಲ್ಲಿ ಇದ್ದವ, ಮುಂದೆ ಕಾಂಗ್ರೆಸ್​​​ ಗೆ ಸೇರಲಿದ್ದೇನೆ ಎಂದು ಇದೇ ವೇಳೆ ಹೇಳಿದರು. ಜೊತೆಗೆ ಕುಮಾರಸ್ವಾಮಿಗಳು ಜೆಡಿಎಸ್​ ಅಭ್ಯರ್ಥಿಗೆ ಮತ ಹಾಕುವಂತೆ ಹೇಳಿರಲಿಲ್ಲ ಎಂದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.