ಭಾರಿ ಮಳೆಗೆ ಭೂಮಿ ಕುಸಿದು ಧರೆಗುರುಳಿದ ನಾಲ್ಕು ಅಂತಸ್ತಿನ ಕಟ್ಟಡ

By

Published : Jul 9, 2022, 5:34 PM IST

thumbnail

ಹಿಮಾಚಲ​ ಪ್ರದೇಶದಲ್ಲಿ ಎಡಬಿಡದೇ ಸುರಿದ ಮಳೆಯಿಂದಾಗಿ ಶಿಮ್ಲಾ ಜಿಲ್ಲೆಯ ಚೋಪಾಲ್​ ಬಜಾರ್​ನಲ್ಲಿ ಭೂಕುಸಿತ ಉಂಟಾಗಿ ನಾಲ್ಕು ಅಂತಸ್ತಿನ ಕಟ್ಟಡವೊಂದು ಧರೆಗುರುಳಿದೆ. ಈ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಟ್ಟಡದಲ್ಲಿ ಒಂದು ಢಾಬಾ, ಎರಡು ಅಂಗಡಿಗಳು ಹಾಗೂ ಒಂದು ಬ್ಯಾಂಕ್​ ಇತ್ತು ಎಂದು ಹೇಳಲಾಗುತ್ತಿದೆ. ದಿನವೂ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಪ್ರವಾಹ, ಭೂಕುಸಿತ ಸಂಭವಿಸುತ್ತಿದೆ. ಈ ಹಿಂದೆಯೂ ಕುಲುವಿನಿಂದ ಬಿಲಾಸ್‌ಪುರದವರೆಗೆ ಮೇಘಸ್ಫೋಟ ಘಟನೆಗಳು ಬೆಳಕಿಗೆ ಬಂದಿದ್ದು, ಸಾಕಷ್ಟು ಹಾನಿಯಾಗಿದೆ. ಈ ಬಾರಿಯ ಮಳೆಗಾಲದಲ್ಲಿ 90 ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.