ಬೆಂಗಳೂರು: ರಸ್ತೆ ಅಪಘಾತದಲ್ಲಿ ಬೈಕ್​ ಸವಾರ ಸಾವು, ಮತ್ತೋರ್ವ ಗಂಭೀರ

By

Published : Jul 18, 2022, 7:59 AM IST

thumbnail

ಬೆಂಗಳೂರು: ಸ್ಕೂಟರ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಓರ್ವ ಸವಾರ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಜೆ.ಪಿ.ನಗರ 3ನೇ ಹಂತದ ಖಾಸಗಿ ಶಾಲೆಯ ಬಳಿ ನಡೆದಿದೆ. ಕಾರ್ತಿಕ್ (26) ಮೃತ ದುರ್ದೈವಿ. ಇಂದು ಮುಂಜಾನೆ 5 ಗಂಟೆ ಸುಮಾರಿಗೆ ತಿಲಕ್ ನಗರದ ಮಾರ್ಗವಾಗಿ ಕಾರ್ತಿಕ್ ಬೈಕ್​ನಲ್ಲಿ ಹೋಗುತ್ತಿದ್ದಾಗ ಮುಂಭಾಗದಿಂದ ವೇಗವಾಗಿ ಬಂದ ಸಂತೋಷ್ ಎಂಬಾತನ ಸ್ಕೂಟರ್​ ಡಿಕ್ಕಿ ಹೊಡೆದಿದೆ. ಕಾರ್ತಿಕ್ ಪತ್ನಿ ನೀಡಿರುವ ದೂರಿನನ್ವಯ ಜಯನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.