ಬುಲ್ಡೋಜರ್‌ಗಳು ಅನ್ಸಾರ್‌, ಅಹಮದ್‌ ಮೇಲೆ ಕೆಲಸ ಮಾಡ್ತವೆ; ಅರ್ಜುನ್‌, ಅಜಯ್‌ ಮೇಲಲ್ಲ: ಓವೈಸಿ

By

Published : Apr 20, 2022, 8:45 PM IST

thumbnail

ಬುಲ್ಡೋಜರ್‌ಗಳು ಅನ್ಸಾರ್‌, ಅಹಮದ್‌ ಮೇಲೆ ಕೆಲಸ ಮಾಡುತ್ತವೆ ಆದ್ರೆ, ಅರ್ಜುನ್ ಮತ್ತು ಅಜಯ್‌ ಮೇಲಲ್ಲ. ಇದನ್ನು ನಾನು ಈ ಹಿಂದೆಯೂ ಹೇಳಿದ್ದೆ. ಇದೇ ಇಲ್ಲಿರುವ ವ್ಯತ್ಯಾಸ. ಬಿಜೆಪಿ ಬಂದ್ರೂ ಆಮ್‌ ಆದ್ಮಿ ಪಾರ್ಟಿ ಬಂದ್ರೂ ಅನ್ಸಾರ್‌ ಅನ್ಸಾರ್‌ ಆಗಿಯೇ ಇರ್ತಾನೆ. ನವದೆಹಲಿಯ ಜಹಂಗಿರ್‌ಪುರಿಯಲ್ಲಿ ಒತ್ತುವರಿ ವಿರೋಧಿ ಕಾರ್ಯಾಚರಣೆ ನಡೆಯುತ್ತಿದ್ದು, ಸುಪ್ರೀಂಕೋರ್ಟ್‌ ಮಧ್ಯಪ್ರವೇಶದಿಂದ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಎಐಎಂಐಎಂ ಪಕ್ಷದ ಮುಖ್ಯಸ್ಥ ಹಾಗು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ, ಮುಸ್ಲಿಮರು ಸಾಮೂಹಿಕ ಶಿಕ್ಷೆಗೊಳಗಾಗುತ್ತಿದ್ದಾರೆ ಎಂದು ಅವರು ದೂರಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.