ವಿನಯ ತಿಮ್ಮಾಪೂರ ಮಾಡಿರುವ ಆರೋಪ ನಿರಾಧಾರ: ರಾಹುಲ್ ಕಲೂತಿ

By

Published : Feb 10, 2021, 3:59 PM IST

thumbnail

ಬಾಗಲಕೋಟೆ: ಯುವ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ಎಂಎಲ್​ಸಿ ಆರ್.ಬಿ.ತಿಮ್ಮಾಪೂರ ಅವರ ಪುತ್ರ ವಿನಯ ತಿಮ್ಮಾಪೂರ ಅವರು ಮಾಡಿರುವ ಆರೋಪ ನಿರಾಧಾರ ಎಂದು ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಹುಲ್ ಕಲೂತಿ ಸ್ಪಷ್ಟಪಡಿಸಿದ್ದಾರೆ. ನವನಗರದ ಪ್ರೆಸ್​​ ಕ್ಲಬ್​​ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿನಯ ಅವರು ಮಾಡಿರುವ ಆರೋಪ ಸುಳ್ಳು. ಏಕೆಂದರೆ ಕಾಂಗ್ರೆಸ್ ಪಕ್ಷದ ಆಂತರಿಕವಾಗಿ ನಡೆದ ಈ ಚುನಾವಣೆಯಲ್ಲಿ ಅವರು ರಾಜ್ಯಮಟ್ಟದ ಪ್ರಧಾನ ಕಾರ್ಯದರ್ಶಿ ಆಗಿಯೂ ಆಯ್ಕೆ ಆಗಿದ್ದಾರೆ. ಹಾಗಾದರೆ ಅವರು ಆಯ್ಕೆ ಆಗಿರುವುದು ಅಕ್ರಮದಿಂದಲೇ ಎಂದು ಪ್ರಶ್ನೆ ಮಾಡಿದ್ರು. ಅವರು ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ ಎಂದರು. ಈ ಬಗ್ಗೆ ನಮ್ಮ ಮುಖಂಡರ ಗಮನಕ್ಕೂ ತರಲಾಗಿದೆ. ಆದರೂ‌ ಸಹ ಪಕ್ಷದ ಸಂಘಟನೆ ದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದರು.

TAGGED:

Bagalkote

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.