ಕಾಡಿನಿಂದ ಬಂದ ಮರಿ ಆನೆಗೆ ಗ್ರಾಮಸ್ಥರಿಂದ ಆಶ್ರಯ; ಹಾಡಿ ಜನರ ಮನೆ ಮಗನಾದ 'ಮಣಿಕಂಠ'

By

Published : Apr 26, 2021, 10:05 AM IST

thumbnail

ಪತನಂತಿಟ್ಟ (ಕೇರಳ): ಮಲಪ್ಪುರಂ ಜಿಲ್ಲೆಯ ವಝಿಕ್ಕಡವು ಪರುತ್ತಿಪಾಡಂನಲ್ಲಿ ಆನೆ ಮರಿಯೊಂದನ್ನು ಸ್ಥಳೀಯರು ಮಗುವಿನಂತೆ ಪೋಷಿಸುತ್ತಿದ್ದಾರೆ. ಇಲ್ಲಿನ ಮೈದಾನವೊಂದರಲ್ಲಿ ಒಂದು ದಿನ ಮಕ್ಕಳು ಆಡುತ್ತಿರಬೇಕಾದರೆ ಈ ಆನೆ ಮರಿ ಅವರ ಗುಂಪಿನತ್ತ ಓಡಿ ಬಂದಿತ್ತು. ಈ ಬಗ್ಗೆ ತಿಳಿದ ಅರಣ್ಯ ಅಧಿಕಾರಿಗಳು ಆನೆಗಳ ಗುಂಪಿನೊಂದಿಗೆ ಸೇರಿಸಲು ಹರಸಾಹಸಪಟ್ಟಿದ್ದಾರೆ. ಹಲವು ಬಾರಿ ಕಾಡಿನಲ್ಲಿ ಆನೆಗಳು ಓಡಾಡುವ ಕಡೆ ಬಿಟ್ಟು ಬಂದಿದ್ದಾರೆ. ಆದರೂ, ಈ ಆನೆ ಮರಿ ಕಾಡಿಗೆ ಹೋಗದೆ ವಾಪಸ್ ಬಂದಿದೆ. ಸ್ಥಳೀಯ ಕೋನಿ ಆನೆ ಶಿಬಿರದಲ್ಲಿರುವ ಈ ಪುಟ್ಟ ಆನೆಗೆ ಸ್ಥಳೀಯರು 'ಮಣಿಕಂಠನ್' ಎಂಬ ಹೆಸರಿಟ್ಟಿದ್ದಾರೆ. ಅಮ್ಮನಿಂದ ದೂರವಾದ ಮಣಿಕಂಠನ್ ಪರಿಪಾಲಕರೊಂದಿಗೆ ಮನೆ ಮಗನಂತೆ ಜೀವಿಸುತ್ತಿದ್ದಾನೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.