ಕೊಡಗಿನಲ್ಲಿ ಸುರಿದ ಮಹಾಮಳೆಗೆ ದೀರ್ಘಾವಧಿ ವಾಣಿಜ್ಯ ಬೆಳೆ ನಾಶ..ಬೆಳೆಗಾರ ಕಂಗಾಲು

By

Published : Sep 6, 2019, 8:18 PM IST

thumbnail

ಕೊಡಗು: ಈ ವರ್ಷ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಕಾಳು ಮೆಣಸು ನಶಿಸುತ್ತಿದ್ದು, ಕಾವೇರಿ ನದಿ ತಟದಲ್ಲಿ ಕಾಫಿ ತೋಟಗಳನ್ನು ಹೊಂದಿದ್ದ ಬೆಳೆಗಾರರು ಕಂಗಾಲಾಗಿದ್ದಾರೆ. ಆಗಸ್ಟ್‌ನಲ್ಲಿ ಸುರಿದ ವಿಪರೀತ ಮಳೆಗೆ ಒಂದು ವಾರ ಕಾಫಿ ತೋಟದಲ್ಲಿ ನೀರು ನಿಂತಿದ್ದರಿಂದ ಗಿಡಗಳೆಲ್ಲ ಒಣಗಿ ಬಣಗುಡುತ್ತಿವೆ. ಆರು ತಿಂಗಳ ಹಿಂದೆ ಸಕಾಲದಲ್ಲಿ ಹೂ ಮಳೆಯಾಗಿ ಕಾಫಿ ಇಳುವರಿ ಹೆಚ್ಚಳದ ಬಗ್ಗೆ ಸಂತಸಗೊಂಡಿದ್ದ ಬೆಳೆಗಾರರು, ಈಗ ಕಂಗಾಲಾಗಿದ್ದಾರೆ.  ಪ್ರಕೃತಿ ವಿಕೋಪಕ್ಕೆ ತೋಟಗಳು ಕೊಚ್ಚಿ ಹೋಗಿರುವುದು ಒಂದೆಡೆಯಾದರೆ, ಪ್ರವಾಹದಿಂದ ಮುಳುಗಿದ ಕಾಫಿ ತೋಟಗಳು ಈಗ ಫಸಲಿನೊಂದಿಗೆ ಕಪ್ಪು ಬಣ್ಣಕ್ಕೆ ತಿರುಗಿ ನಶಿಸುತ್ತಿದೆ. ಇದರಿಂದಾಗಿ ಈ ಬೆಳೆಗಳನ್ನೆ ನಂಬಿಕೊಂಡು ಬದುಕುತ್ತಿದ್ದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.