ವಿಡಿಯೋ: ನಡುರಸ್ತೆಯಲ್ಲೇ ನಾಗರ ಹಾವುಗಳ ಸರಸ-ಸಲ್ಲಾಪ!

By

Published : Aug 6, 2020, 2:45 PM IST

thumbnail

ಕಲಬುರಗಿ: ನಡುರಸ್ತೆಯಲ್ಲೇ ಹಾವುಗಳೆರಡು ಸರಸ ಸಲ್ಲಾಪಲ್ಲಿ ತೊಡಗಿರುವ ವಿಡಿಯೋ ಮೊಬೈಲ್​ನಲ್ಲಿ ಸೆರೆಯಾಗಿದೆ. ಜಿಲ್ಲೆಯ ಚಿಂಚೋಳಿ ತಾಲೂಕಿನ ರಾಯಕೋಡ್ ಗ್ರಾಮದಲ್ಲಿ ಸರ್ಪಗಳೆರೆಡು ಪ್ರಕೃತಿಯ ಮಡಿಲಲ್ಲಿ ಮೈಮರೆತು ಸರಸದಲ್ಲಿ ತೊಡಗಿದ್ದವು. 10 ರಿಂದ 15 ಅಡಿ ಉದ್ದದ ಎರಡು ಹಾವುಗಳು ಸುಮಾರು 1 ಗಂಟೆಗಳ ಕಾಲ ಸರಸ - ಸಲ್ಲಾಪದಲ್ಲಿ ನಿರತವಾಗಿದ್ದವು. ನಾಲ್ಕೈದು ಅಡಿ ಎತ್ತರಕ್ಕೆ ಜಿಗಿದು ಸರಸದಲ್ಲಿ ತಲ್ಲೀನವಾಗಿದ್ದ ಹಾವುಗಳ ಸಲ್ಲಾಪ ವೀಕ್ಷಿಸಲು ಜನ ಮುಗಿಬಿದ್ದರು. ನೂರಾರು ಜನ ಜಮಾಯಿಸಿದ್ದರೂ ಡೋಂಟ್ ಕೇರ್ ಎನ್ನದ ಹಾವುಗಳು ತಮ್ಮಷ್ಟಕ್ಕೆ ತಾವು ಸರಸದಲ್ಲಿ ಮಗ್ನವಾಗಿದ್ದವು. ಹಾವುಗಳು ಸರಸವಾಡುತ್ತಿರುವುದನ್ನು ಸ್ಥಳೀಯ ಯುವಕರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.