ಎನ್‌ಎಚ್‌ಪಿಸಿ ಚಿರ್ಕಿಲಾ ಅಣೆಕಟ್ಟೆಯಿಂದ ನೀರು ಬಿಡುಗಡೆ.. ಧೌಲಿ-ಕಾಳಿ ನದಿಗಳ ನೀರಿನ ಮಟ್ಟ ಹೆಚ್ಚಳ

By

Published : Jul 12, 2023, 6:35 PM IST

thumbnail

ಡೆಹ್ರಾಡೂನ್​(ಉತ್ತರಾಖಂಡ): ಇಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದೆ. ಮಳೆಯಿಂದಾಗಿ ಮಲೆನಾಡಿನಿಂದ ಹಿಡಿದು ಬಯಲು ಸೀಮೆಯವರೆಗಿನ ಎಲ್ಲ ಜಿಲ್ಲೆಗಳು ತತ್ತರಿಸಿವೆ. ಮಲೆನಾಡಿನಲ್ಲಿ ಮಳೆಯಿಂದಾಗಿ ಭೂಕುಸಿತದ ಘಟನೆಗಳು ಹೆಚ್ಚಾಗಿದ್ದು, ಬಯಲು ಸೀಮೆಯಲ್ಲಿ ಹರಿಯುವ ನದಿಗಳು ಉಗ್ರ ಸ್ವರೂಪ ಪಡೆದಿವೆ. 

ಪಿಥೋರಗಢ್ ಜಿಲ್ಲೆಯ ಗಡಿ ಪ್ರದೇಶವಾದ ಧಾರ್ಚುಲಾದಲ್ಲಿನ ಎನ್​ಹೆಚ್​ಪಿಸಿಯ ಚಿರ್ಕಿಲಾ ಅಣೆಕಟ್ಟೆಯಿಂದ ನೀರನ್ನು ಬಿಡುಗಡೆ ಮಾಡುವುದರಿಂದ, ಧೌಲಿ ಮತ್ತು ಕಾಳಿ ನದಿಗಳ ನೀರಿನ ಮಟ್ಟ ಗಣನೀಯವಾಗಿ ಹೆಚ್ಚಾಗಿದೆ. ಕಾಳಿ ನದಿ ಉಗ್ರ ಸ್ವರೂಪದಲ್ಲಿ ಹರಿಯುತ್ತಿದೆ. 

ಇದನ್ನೂ ಓದಿ: ಉತ್ತರ ಭಾರತದಲ್ಲಿ ಮಳೆಯ ರುದ್ರನರ್ತನ; 39ಕ್ಕೂ ಹೆಚ್ಚು ಮಂದಿ ಸಾವು, ಹಿಮಾಚಲದಲ್ಲಿ ಜಲಪ್ರಳಯ!

ನದಿ ತೀರದ ಗ್ರಾಮದ ಜನರಲ್ಲಿ ಹೆಚ್ಚಿದ ಭೀತಿ: ಸದ್ಯ ಕಾಳಿ ನದಿ ಅಪಾಯದ ಅಂಚಿನಲ್ಲಿ ಹರಿಯುತ್ತಿದೆ. ಇದರಿಂದ ನದಿಯ ಸುತ್ತಮುತ್ತಲಿನ ಗ್ರಾಮ, ಪಟ್ಟಣಗಳ ನಿವಾಸಿಗಳಿಗೆ ಅಪಾಯ ಎದುರಾಗಿದೆ. ಮಂಗಳವಾರ ನದಿಯ ದಡದಲ್ಲಿ ನಿರ್ಮಿಸಿದ್ದ ಎರಡು ಮನೆಗಳು ಕ್ಷಣಾರ್ಧದಲ್ಲಿ ಮುಳುಗಿದ್ದವು.

ಇದನ್ನೂ ಓದಿ: ಭಾರಿ ಮಳೆಗೆ ಪೊಲೀಸ್‌ ಠಾಣೆ ಮುಳುಗಡೆ; ಆರೋಪಿಯನ್ನು ದೋಣಿಯಲ್ಲಿ ಕೋರ್ಟ್‌ಗೆ ಕರೆದೊಯ್ದ ಪೊಲೀಸರು!

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.