ದೆಹಲಿಯಿಂದ ಫೋನ್ ಬಂದಿತ್ತು, ತುರ್ತಾಗಿ ಬರಲು ಹೇಳಿದ್ದಾರೆ : ಮಾಜಿ ಸಚಿವ ವಿ ಸೋಮಣ್ಣ

By ETV Bharat Karnataka Team

Published : Dec 13, 2023, 10:16 AM IST

thumbnail

ತುಮಕೂರು: ದೆಹಲಿಯಿಂದ ನನಗೆ ಫೋನ್ ಬಂದಿತ್ತು, ಸದ್ಯ ಮೂರು ರಾಜ್ಯದ ಮುಖ್ಯಮಂತ್ರಿಗಳ ಆಯ್ಕೆ ಮುಗಿದಿದೆ. ಅದಾದ ಬಳಿಕ ಯಾವತ್ತು ಕರಿತಾರೋ ಅವತ್ತು ಹೋಗ್ತೇನೆ ಎಂದು ಮಾಜಿ ಸಚಿವ ಸೋಮಣ್ಣ ತಿಳಿಸಿದ್ದಾರೆ.

ಇಲ್ಲಿಯ ಹನುಮಂತಪುರದ ಕೊಲ್ಲಾಪುರದಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಅವರು, ವಿಜಯಪುರಕ್ಕೆ ಹೋಗ್ಬೇಕಾದರೆ ದೆಹಲಿಯಿಂದ ಕರೆ ಬಂತು. ದೆಹಲಿಗೆ ತುರ್ತಾಗಿ ಬರಲಿಕ್ಕೆ ಹೇಳಿದ್ರು, ನಾನು ನಾಳೆ ನಾಡಿದ್ದು ಬರೋಕಾಗಲ್ಲ ಅಂತ ಹೇಳಿದೆ. ಇನ್ನೆರಡು ಮೂರು ದಿನದಲ್ಲಿ ನನ್ನ ತಾಯಿ ಆರಾಧನೆ ಇದೆ. ಅದನ್ನು ಮುಗಿಸಿಕೊಂಡು ಹೋಗ್ತೇನೆ. ಮತ್ತೆ ದೆಹಲಿಗೆ ಕರೆ ಮಾಡಿ ಡೇಟ್ ತೆಗೆದುಕೊಳ್ತೇನೆ ಎಂದರು.

ವಿಜಯಪುರದ ಸಿದ್ದನಕೊಳದ ಮಠಕ್ಕೆ ಭೇಟಿ ಕೊಟ್ಟೆದ್ದೇನೆ. ಅಲ್ಲಿ ಆ ತಪಸ್ವಿಗಳ ಜೀವಂತ ಸಮಾಧಿ ನೋಡಿ ಒಂದು ರೀತಿಯ ಅನುಭವವಾಯಿತು. ಕೆಲವು ಸಂದರ್ಭದಲ್ಲಿ ಆಗುವ ಅನಾಹುತಗಳು, ಸ್ವಪಕ್ಷಿಯರಿಂದ ಆದ ಕೆಟ್ಟ ಸಂದೇಶಗಳು ಜಾಸ್ತಿ ದಿನ ಉಳಿಯೋದಿಲ್ಲ ಎಂಬುದು ಅನುಭವಕ್ಕೆ ಬಂತು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ವರಿಷ್ಠರ ಜೊತೆ ಮಾತಾಡಿ ಅವರು ಏನು ಹೇಳ್ತಾರೋ ಹಾಗೆ ಮಾಡ್ತೀನಿ ಎಂದರು.

ಇದನ್ನೂ ಓದಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಅಕ್ರಮ ನೇಮಕಾತಿ ರದ್ದುಗೊಳಿಸುವಂತೆ ಪ್ರತಿಭಟನೆ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.