ಮೋದಿ ಮ್ಯಾಜಿಕ್ ಈಶಾನ್ಯ, ಗುಜರಾತ್, ಯುಪಿ ಸೇರಿ ಕರ್ನಾಟಕದಲ್ಲೂ ಕೆಲಸ ಮಾಡುತ್ತಿದೆ: ಅಮಿತ್ ಶಾ

By

Published : Mar 3, 2023, 3:54 PM IST

Updated : Mar 3, 2023, 10:54 PM IST

thumbnail

ಬೀದರ್​:  ತ್ರಿಪುರ, ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಪಕ್ಷದ ಗೆಲುವಿನ ಕುರಿತು ಬೀದರ್‌ನಲ್ಲಿ ನಡೆದ ಬಿಜೆಪಿಯ ರ‍್ಯಾಲಿ ಉದ್ದೇಶಿಸಿ ಶಾ ಮಾತನಾಡಿದರು. ತ್ರಿಪುರಾ, ನಾಗಾಲ್ಯಾಂಡ್, ಮೇಘಾಲಯ ಫಲಿತಾಂಶಗಳು ನಿನ್ನೆ ಪ್ರಕಟವಾಗಿದ್ದು, ಈ ರಾಜ್ಯಗಳಿಂದ ಕಾಂಗ್ರೆಸ್ ನಿರ್ನಾಮವಾಗಿದೆ ಮತ್ತು ದುರ್ಬೀನು ನೋಡಿಯೂ ನೋಡಲಾಗದ ರೀತಿಯಲ್ಲಿ ಸೋತಿದೆ. ಕರ್ನಾಟಕದಲ್ಲೂ ಇಂತಹದ್ದೇ ಫಲಿತಾಂಶ ಬರಲಿದೆ ಎಂದು ಅಮಿತ್​ ಶಾ ವಿಶ್ವಾಸ ವ್ಯಕ್ತಪಡಿಸಿದರು.

ಅಮಿತ್​​ ಶಾ  ಬೀದರ್‌ನ ಅನುಭವ ಮಂಟಪದಿಂದ 'ವಿಜಯ್ ಸಂಕಲ್ಪ ರಥಯಾತ್ರೆ'ಗೆ ಚಾಲನೆ ನೀಡಿ ಮಾತನಾಡಿದರು. “ಬಿಜೆಪಿ ಈಶಾನ್ಯಕ್ಕೆ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ಎರಡನೇ ಬಾರಿಗೆ ಅಲ್ಲಿ ಬಿಜೆಪಿ ಮತ್ತು ಎನ್‌ಡಿಎ ಸರ್ಕಾರ ರಚನೆಯಾಗುತ್ತಿದೆ. ಪ್ರಧಾನಿ ಮೋದಿಯವರ ಮ್ಯಾಜಿಕ್ ಈಶಾನ್ಯ, ಗುಜರಾತ್, ಯುಪಿ ಅಥವಾ ಕರ್ನಾಟಕ ಆಗಿರಲಿ, ಎಲ್ಲೆಡೆ ಕೆಲಸ ಮಾಡುತ್ತದೆ, ”ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬಸವಕಲ್ಯಾಣದ ಬಳಿಕ ಅವರು ಇಂದೇ ಬೆಂಗಳೂರನಲ್ಲಿ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪ್ರದೇಶದ ಅವತಿಯಲ್ಲಿರುವ ಚೆನ್ನಕೇಶವ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸುವ ನಿರೀಕ್ಷೆಯಿದೆ. ಇಲ್ಲಿ, ಗೃಹ ಸಚಿವರು ಎರಡನೇ 'ವಿಜಯ ಸಂಕಲ್ಪ ರಥ ಯಾತ್ರೆ'ಗೆ ಚಾಲನೆ ನೀಡಲಿದ್ದಾರೆ.  ದೇವನಹಳ್ಳಿಯ ಸರ್ಕಾರಿ ಕಾಲೇಜಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಕರ್ನಾಟಕದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕೇಂದ್ರ ಸರ್ಕಾರ ರಣತಂತ್ರ ರೂಪಿಸಿದೆ. ಹಾಗಾಗಿ ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಸೇರಿದಂತೆ ಪ್ರಧಾನಿ ಸೇರಿದಂತೆ ಕೇಂದ್ರ ನಾಯಕರು ಆಗಾಗ ರಾಜ್ಯಕ್ಕೆ ಬರುತ್ತಿದ್ದಾರೆ. ಈ ಭಾಗವಾಗಿಯೇ ಇಂದಿನಿಂದ ರಾಜ್ಯಕ್ಕೆ ಪ್ರವಾಸ ಕೈಗೊಂಡಿರುವ ಅಮಿತ್​ ಶಾ ಗುರುದ್ವಾರಕ್ಕೆ ಭೇಟಿ ನೀಡಿದರು.

ಇದನ್ನೂ ಓದಿ : ಬೀದರ್‌ : ಗುರುದ್ವಾರಕ್ಕೆ ಚುನಾವಣಾ ಚಾಣಕ್ಯ ಅಮಿತ್ ಶಾ ಭೇಟಿ- ವಿಡಿಯೋ

Last Updated : Mar 3, 2023, 10:54 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.