ಭರಚುಕ್ಕಿಯಲ್ಲಿ ಡೆಡ್ಲಿ ಸೆಲ್ಪಿ ಶೂಟ್.. ಪೋಟೋಗಾಗಿ ಪ್ರಾಣ ಪಣಕ್ಕಿಡುತ್ತಿರುವ ಪ್ರವಾಸಿಗರು!

By

Published : Jul 13, 2023, 6:45 PM IST

thumbnail

ಚಾಮರಾಜನಗರ: ಕಾವೇರಿ ನದಿ ಕವಲಾಗಿ ಧುಮ್ಮಿಕ್ಕುವ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತದಲ್ಲಿ ಪ್ರವಾಸಿಗರು ಪುಂಡಾಟ ಪ್ರದರ್ಶನ ಮಾಡುತ್ತಿದ್ದು‌, ಫೋಟೋಗಾಗಿ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ. ಮಳೆಗಾಲ ಪ್ರಾರಂಭವಾಗಿದ್ದು, ಮಲೆನಾಡು ಜಿಲ್ಲೆಗಳಲ್ಲಿ ಭರ್ಜರಿಯಾಗಿಯೇ ಮಳೆ ಸುರಿಯುತ್ತಿದೆ. ನೀರು ಕಡಿಮೆಯಾಗಿ ಅಥವಾ ಬತ್ತಿಯೇ ಹೋಗಿದ್ದ ನದಿಗಳು ಜೀವ ಪಡೆದು, ಧುಮ್ಮುಕ್ಕಿ ಹರಿಯಲು ಪ್ರಾರಂಭಿಸಿವೆ. ನೀರು ತುಂಬಿ ಹರಿಯಲು ಪ್ರಾರಂಭಿಸಿದರೆ, ನದಿಗಳು ಕೂಡ ಪ್ರವಾಸಿ ಆಕರ್ಷಣೆಯಾಗತೊಡಗುತ್ತದೆ. ಜಲಪಾತಗಳನ್ನು ನೋಡಲು ಅದೆಷ್ಟೋ ದೂರದ ಊರುಗಳಿಂದಲೂ ಪ್ರವಾಸಿಗರು ಬರುತ್ತಾರೆ.

ಇದೀಗ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತ ತುಂಬಿ ಹರಿಯುತ್ತಿರುವುದನ್ನು ನೋಡಲು ಜನರು ಬರುತ್ತಿದ್ದಾರೆ. ಅಷ್ಟೇ ಅಲ್ಲದೆ ಜಲಪಾತ ವೀಕ್ಷಣೆಗೆ ಕಳ್ಳ ಮಾರ್ಗ ಹಿಡಿದು ಜಲಪಾತದ ತುತ್ತ ತುದಿ ಮೇಲೆ ನಿಂತು ಪ್ರವಾಸಿಗರು ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ. ಸೆಲ್ಫಿ ಕ್ಲಿಕ್ಕಿಸುತ್ತಿರುವ ವೇಳೆ ಸ್ವಲ್ಪ ಯಾಮಾರಿದರೂ ಪ್ರಪಾತಕ್ಕೆ ಬೀಳುವ ಅಪಾಯವಿದ್ದರೂ ಬಂದವರು ಪುಂಡಾಟ ಪ್ರದರ್ಶಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ನಿಷೇಧಿತ ಪ್ರದೇಶದಲ್ಲಿ ಪ್ರವಾಸಿಗರೂ ತೆರಳಿದರೂ ಅರಣ್ಯ ಮತ್ತು ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸವಾಗಿದೆ. ಅಪಾಯ ಸಂಭವಿಸುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಅಪಾಯಕಾರಿ ಫೋಟೋಶೂಟ್​ಗೆ ಬ್ರೇಕ್ ಹಾಕಬೇಕಿದೆ.

ಇದನ್ನೂ ಓದಿ: Jog Falls: ಮುಂಗಾರಿನಿಂದ ಜೋಗದಲ್ಲಿ ಜಲಸಿರಿ; ಪ್ರವಾಸಿಗರಿಗೆ ರಾಜಾ, ರಾಣಿ, ರೋರರ್, ರಾಕೆಟ್ ಮೋಡಿ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.