ಧಾರವಾಡ: ಮುಂಗಾರು ಮಳೆಯಾಗದ ಹಿನ್ನೆಲೆ ವರುಣನಿಗಾಗಿ ಪರ್ಜನ್ಯ ಮಂತ್ರ ಜಪ

By

Published : Jul 3, 2023, 2:41 PM IST

thumbnail

ಧಾರವಾಡ: ಮುಂಗಾರು ಮಳೆ ಜಿಲ್ಲೆಯಲ್ಲಿ ತಡವಾಗಿದೆ. ಹೀಗಾಗಿ ಪೂಜೆ ಪುರಸ್ಕಾರಗಳು ನಿರಂತರವಾಗಿ ನಡೆಯುತ್ತಿವೆ. ಒಂದು ಕಡೆ ವರುಣನ ಅಬ್ಬರ ನೀಡುವ ಮುನ್ಸೂಚನೆ ನೀಡಿದೆ. ಇದರ ಮಧ್ಯೆ ಮಳೆಗಾಗಿ ವರುಣ ಜಪದೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ.

ನಗರದ ಮಾಳಮಡ್ಡಿಯಲ್ಲಿ ಸಾಮೂಹಿಕವಾಗಿ ಮಳೆಗಾಗಿ 108 ಪರ್ಜನ್ಯ ಮಂತ್ರ ಜಪಿಸುವ ಮೂಲಕ ವಿಶೇಷ ಪ್ರಾರ್ಥನೆ ಮಾಡಲಾಗಿದೆ. ಮಂತ್ರ ಜಪ ಮಾಡುತ್ತ ಪೂರ್ಣಕುಂಭ ನಗರದ ಪ್ರಮುಖ ಸ್ಥಳಗಳಲ್ಲಿ ಮೆರವಣಿಗೆ ಸಹ ಮಾಡಿ ಬಳಿಕ ವನವಾಸಿ ರಾಮಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ.

ವಿಎಚ್‌ಪಿ, ಡಿಟಿಬಿಎಸ್, ಕಬ್ಬೂರ ರಸ್ತೆ ನಾಗರಿಕ ಸಂಘ ಸೇರಿ ವಿವಿಧ ಸಂಘಟನೆಗಳು ಪ್ರಾರ್ಥನೆಗೆ ಸಾಥ್ ನೀಡಿದ್ದು, ಮೆರವಣಿಗೆಯಲ್ಲಿ ಭಜನೆ ಮೂಲಕ ಮಳೆಗಾಗಿ ಪ್ರಾರ್ಥನಾ ಮೆರವಣಿಗೆ ಮಾಡಿ ವೇದಮೂರ್ತಿ ನಾರಾಯಣ ಜೋಶಿ ಮಾರ್ಗದರ್ಶನದಲ್ಲಿ ವರುಣ ಮಂತ್ರ ಜಪಿಸಲಾಗಿದೆ.‌

ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿದೆ. ಇನ್ನೂ ಐದು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಸಹ ನೀಡಿದೆ. ಮುಂದಿನ 48 ಗಂಟೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: 30 ವರ್ಷಗಳ ಬಳಿಕ ಕೈ ಕೊಟ್ಟ ವರುಣ... ಮಳೆಗಾಗಿ ಕಾಫಿನಾಡಲ್ಲಿ ಗಡಿ ಮಾರಿಗೆ ವಿಶೇಷ ಪೂಜೆ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.