G-20 Summit : ಪಂಜಾಬಿನ ಸಾಂಪ್ರದಾಯಿಕ ಫುಲ್ಕಾರಿ ಕಸೂತಿಗೆ ವಿದೇಶಿಗರು ಫಿದಾ

By ETV Bharat Karnataka Team

Published : Sep 9, 2023, 8:04 PM IST

thumbnail

ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ಜಿ-20 ಶೃಂಗಸಭೆ ನಡೆಯುತ್ತಿದೆ. ಶೃಂಗಸಭೆಯ ಸಂದರ್ಭದಲ್ಲಿ ವಿವಿಧ ಜಾನಪದ ಕಲೆಗಳ ಪ್ರದರ್ಶನ ನಡೆಯುತ್ತಿದ್ದು, ಪಂಜಾಬಿನ ಸಾಂಪ್ರದಾಯಿಕ ಕಸೂತಿ ಫುಲ್ಕಾರಿ ಪ್ರದರ್ಶನ ಏರ್ಪಡಿಸಲಾಗಿದೆ. 

2021ರಲ್ಲಿ ಲಜ್ವಂತಿ ಅವರಿಗೆ ಫುಲ್ಕಾರಿ ಕಸೂತಿಗೆ ಜಾಗತಿಕ ಮನ್ನಣೆ ನೀಡಿದ್ದಕ್ಕೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತ್ತು. ಪಂಜಾಬ್​​​ನ ಪಟಿಯಾಲದ ತ್ರಿಪುರ ನಿವಾಸಿಯಾದ ಲಜ್ವಂತಿ ಅವರು ತಮ್ಮ ಆರನೇ ವಯಸ್ಸಿನಲ್ಲಿ ಅಜ್ಜಿಯಿಂದ ಫುಲ್ಕಾರಿ ಕಲೆಯನ್ನು ಕರಗತ ಮಾಡಿಕೊಂಡರು. ಬಳಿಕ ಈ ಕಸೂತಿ ಕಲೆಯನ್ನು ಜಾಗತಿಕವಾಗಿ ಪರಿಚಿತಗೊಳಿಸಿ, ಇಂದು ಸಾವಿರಾರು ಮಹಿಳೆಯರಿಗೆ ಈ ಕಲೆಯನ್ನು ಕಲಿಸಿದ್ದಾರೆ. ಇಂದು ಲಜ್ವಂತಿ ಅವರು ಫುಲ್ಕಾರಿ ಕಸೂತಿಯನ್ನು ಜಿ-20 ಶೃಂಗಸಭೆಯ ಪಂಜಾಬ್​ ಪೆವಿಲಿಯನ್​ನಲ್ಲಿ ಪ್ರದರ್ಶಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪದ್ಮಶ್ರೀ ಪುರಸ್ಕೃತ ಲಜ್ವಂತಿ ಅವರು, ನಾನು ಪ್ರಧಾನಿ ಮೋದಿ ಅವರನ್ನು ಹಲವು ಬಾರಿ ಭೇಟಿ ಮಾಡಿದ್ದೇನೆ. ಪ್ರತೀ ಬಾರಿ ಭೇಟಿಯಾದಾಗಲೂ ನೀವು ಯಾವಾಗಲೂ ಕೆಲಸದಲ್ಲಿ ನಿರತರಾಗಿರುತ್ತೀರಿ ಎಂದು ಹೇಳುತ್ತಾರೆ. ನಾನು ಈ ಕಲೆಯನ್ನು ಜೀವಂತವಾಗಿರಿಸಲು ಇಷ್ಟಪಡುತ್ತೇನೆ. ಆದ್ದರಿಂದ ಎಲ್ಲ ಕಡೆ ಹೋಗಿ ಫುಲ್ಕಾರಿ ತರಬೇತಿ ನೀಡುತ್ತೇನೆ. ಈ ಸಂಬಂಧ ನನಗೆ ರಾಷ್ಟ್ರೀಯ ಪ್ರಶಸ್ತಿ ಮತ್ತು ಖಾದಿ ಪ್ರಶಸ್ತಿಗಳು ಲಭಿಸಿದೆ. ಸದ್ಯ ನಾನು ಪಂಜಾಬ್ ಮಾತ್ರವಲ್ಲದೇ ಹರಿಯಾಣ, ಹಿಮಾಚಲ ಪ್ರದೇಶ, ಹರಿದ್ವಾರ, ಜಮ್ಮು ಕಾಶ್ಮೀರದಲ್ಲೂ ಈ ಕಸೂತಿ ತರಬೇತಿ ನೀಡುತ್ತಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ : 73 ಘೋಷಣೆಗಳಿಗೆ ವಿಶ್ವನಾಯಕರ ಒಪ್ಪಿಗೆ: ದಾಖಲೆ ಬರೆದ ಭಾರತದ ಅಧ್ಯಕ್ಷತೆಯ ಜಿ-20 ಶೃಂಗಸಭೆ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.