ಕುಡಿದ ಅಮಲಿನಲ್ಲಿ ತನ್ನ 12ನೇ ಪತ್ನಿಯನ್ನೇ ಕೊಂದ ಗಂಡ

By

Published : Apr 3, 2023, 9:53 PM IST

thumbnail

ಗಿರಿಡಿಹ್​ (ಜಾರ್ಖಂಡ್​​): ಕುಡಿದ ಅಮಲಿನಲ್ಲಿ ಗಂಡನೊಬ್ಬ ತನ್ನ 12ನೇ ಪತ್ನಿಯನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಜಾಮ್ದಾರ್​ ಪಂಚಾಯತ್​ ವ್ಯಾಪ್ತಿಯಲ್ಲಿ ನಡೆದಿದೆ. ಸಾವಿತ್ರಿ ದೇವಿ (40) ಮೃತ ಮಹಿಳೆ. ಘಟನೆ ಸಂಬಂಧ ಗವಾನ್​ ಪೊಲೀಸ್​​ ಠಾಣೆ ಪ್ರಕರಣ ದಾಖಲಾಗಿದೆ.

ಘಟನೆ  ಹಿನ್ನೆಲೆ: ಸೋಮವಾರ ರಾತ್ರಿ ಪತಿ ರಾಮಚಂದ್ರ, ಪತ್ನಿ ಸಾವಿತ್ರಿ ಜೊತೆ ಕೊಠಡಿಯಲ್ಲಿ ಮದ್ಯ ಸೇವಿಸುತ್ತಿದ್ದ, ಮದ್ಯ ಸೇವಿಸುವ ವೇಳೆ ಇಬ್ಬರ ನಡುವೆ ವಾಗ್ವಾದ ಶುರುವಾಗಿದೆ, ಮಾತು ತಾರಕಕ್ಕೆರಿ ಕುಡಿದ ಅಮಲಿನಲ್ಲಿದ್ದ ಪತಿ ರಾಮಚಂದ್ರ ದೊಣ್ಣೆಯಿಂದ ಪತ್ನಿಗೆ ಹೊಡೆದಿದ್ದಾನೆ. ಪತ್ನಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ.  

12 ಮದುವೆ ಆಗಿದ್ದ ಭೂಪ: ಪತ್ನಿಯನ್ನೇ ಕೊಲೆ ಮಾಡಿದ ಆರೋಪಿ ಒಟ್ಟು 12 ಮದುವೆ ಆಗಿದ್ದಾನೆ ಎಂದು ತಿಳಿದು ಬಂದಿದೆ. ಈ ಹಿಂದೆ ಇದ್ದ ಪತ್ನಿಯರು ಆರೋಪಿಯ ಕಾಟ ತಾಳಲಾರದೇ ಓಡಿ ಹೋಗಿದ್ದಾರೆ. ಸಾವಿತ್ರಿ ದೇವಿ ರಾಮಚಂದ್ರನ 12ನೇ ಪತ್ನಿಯಾಗಿದ್ದರು. ರಾಮಚಂದ್ರ ತನ್ನ ಹಿಂದಿನ ಹೆಂಡತಿಯರಿಂದ ಒಂದೇ ಒಂದು ಮಗು ಪಡೆದಿರಲಿಲ್ಲ. 12ನೇ ಪತ್ನಿಯಾಗಿದ್ದ ಸಾವಿತ್ರಿಗೆ ಮೂರು ಗಂಡು ಮತ್ತು ಒಂದು ಹೆಣ್ಣು ಮಗು ಇತ್ತು. ಆರೋಪಿ ರಾಮಚಂದ್ರನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕೊಟಕಪುರ ಗುಂಡಿನ ದಾಳಿ ಪ್ರಕರಣ; ಜನರು ಮಾಹಿತಿ ಹಂಚಿಕೊಳ್ಳಲು ಸಮಯ ನಿಗದಿ ಮಾಡಿದ ಎಡಿಜಿಪಿ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.