ಬೆಂಗಳೂರಿನಲ್ಲಿ ಆರ್ಭಟಿಸಿದ ವರುಣ.. ರಸ್ತೆಯ ಮೇಲೆ ಬಿದ್ದ ಮರದ ಕೊಂಬೆ ತೆರವುಗೊಳಿಸಿದ ಇನ್ಸ್‌ಪೆಕ್ಟರ್

By

Published : May 21, 2023, 4:48 PM IST

thumbnail

ಬೆಂಗಳೂರು : ನಗರದಲ್ಲಿ ನಿನ್ನೆ ಸಂಜೆ ಸುರಿದ ಭಾರಿ ಮಳೆಗೆ ಹಲವು ಭಾಗಗಳಲ್ಲಿ ಮರಗಳು ಧರೆಗುರಳಿದ್ದವು. ಈ ವೇಳೆ ಮಳೆಯನ್ನೂ ಲೆಕ್ಕಿಸದೇ ರಸ್ತೆಯಲ್ಲಿ ಬಿದ್ದ ಮರದ ಕೊಂಬೆಯನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟ ಇನ್ಸ್‌ಪೆಕ್ಟರ್ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಹವಾಮಾನ ಇಲಾಖೆ ಈ ಹಿಂದೆಯೇ ರಾಜ್ಯದಲ್ಲಿ ಮಳೆಯಾಗುವ ಕುರಿತು ಮಾಹಿತಿ ನೀಡಿತ್ತು. ಅದರಂತೆ ನಿನ್ನೆ ಸಂಜೆ ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಬೃಹತ್ ಮರದ ಕೊಂಬೆಯೊಂದು ವಿಠಲ್ ಮಲ್ಯ ರಸ್ತೆಯಲ್ಲಿ ಧರೆಗುರುಳಿತ್ತು. ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿರುವುದನ್ನು ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಅಶೋಕ್​ ನಗರ ಸಂಚಾರ ಠಾಣೆಯ ಇನ್ಸ್‌ಪೆಕ್ಟರ್ ರಾವ್ ಗಣೇಶ್ ಗಮನಿಸಿದ್ದಾರೆ. ತಕ್ಷಣ ಪರಿಸ್ಥಿತಿಯನ್ನು ಮನಗಂಡು ತಮ್ಮ ವ್ಯಾಪ್ತಿಯಲ್ಲದಿದ್ದರೂ ಸಹ ತಾವೇ ನಿಂತು ಮರದ ಕೊಂಬೆಯನ್ನ ತೆರವುಗೊಳಿಸಿದ್ದಾರೆ.

ವಾಹನ ಸವಾರರಿಗೆ ಓಡಾಟಕ್ಕೆ ತೊಂದರೆಯಾಗುವುದನ್ನು ತಪ್ಪಿಸಲು ಇನ್ಸ್‌ಪೆಕ್ಟರ್ ಕೈಗೊಂಡ ಕಾರ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ಕಾರ್ಯಕ್ಕೆ ಹಿರಿಯ ಅಧಿಕಾರಿಗಳ ಸಹಿತ ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.     

ಇದನ್ನೂ ಓದಿ : ನೊಣವಿನಕೆರೆ ಅಜ್ಜಯ್ಯನ ಮಠದತ್ತ ಡಿಕೆಶಿ ಪ್ರಯಾಣ; ಕೆಟ್ಟು ನಿಂತ ಎಸ್ಕಾರ್ಟ್​ ವಾಹನ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.