ಸೇವಾವಧಿ ಕಾಯಂಗೊಳಿಸುವಂತೆ ಆಗ್ರಹಿಸಿ ಪಂಜಾಬ್​​ ಸಿಎಂ ಮನೆಗೆ ಅರೇಕಾಲಿಕ ಶಿಕ್ಷಕರ ಮುತ್ತಿಗೆ: ಲಾಠಿ ಚಾರ್ಜ್..

By

Published : Jul 1, 2023, 9:52 PM IST

thumbnail

ಸಂಗ್ರೂರ್ (ಪಂಜಾಬ್​): ಸೇವಾವಧಿ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ 8,736 ಅರೇಕಾಲಿಕ ಶಿಕ್ಷಕರು ಸಂಗ್ರೂರಿನಲ್ಲಿರುವ ಸಿಎಂ ಭಗವಂತ ಮಾನ್ ಅವರ ಮನೆಗೆ ಮುತ್ತಿಗೆ ಹಾಕಿದರು. ನಂತರ ಅರೇಕಾಲಿಕ ಶಿಕ್ಷಕರು ಭಗವಂತ ಮಾನ್ ಅವರ ಮನೆಯನ್ನು ಸುತ್ತುವರಿಯಲು ಮುಂದಾದಾಗ, ಪೊಲೀಸರು ಅವರನ್ನು ಬಲವಂತವಾಗಿ ತಡೆಯಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರೊಂದಿಗೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿದೆ. ಬಳಿಕ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್​ ಮಾಡಿದ್ದಾರೆ.  

''ನಮ್ಮ ಬೇಡಿಕೆಗಳನ್ನು ಯಾರೂ ಕೇಳುತ್ತಿಲ್ಲ. ಅಧಿಕಾರಕ್ಕೆ ಬರುವ ಮುನ್ನ ಖುದ್ದು ಮುಖ್ಯಮಂತ್ರಿ ಹಾಗೂ ಕೇಜ್ರಿವಾಲ್, ನಮ್ಮ ಸರ್ಕಾರ ಬಂದರೆ, ಅರೇಕಾಲಿಕ ಶಿಕ್ಷಕರನ್ನು ಕಾಯಂಗೊಳಿಸಲಾಗುವುದು ಎಂದು ಹೇಳಿದ್ದರು. ಆದರೆ, ಸರ್ಕಾರ ರಚನೆಯಾಗಿ ವರ್ಷ ಕಳೆದರೂ ತಾವು ನೀಡಿದ ಭರವಸೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಪ್ರತಿಭಟನಾನಿರತ ಅರೇಕಾಲಿಕ ಶಿಕ್ಷಕರು ಕಿಡಿಕಾರಿದರು. ಪ್ರತಿಭಟನಾಕಾರರ ಮೇಲೆ ಪೊಲೀಸರು ಹಲ್ಲೆ ಮಾಡಿ, ಅವಮಾನ ಮಾಡಿದ್ದಾರೆ ಎಂದು ಅವರು ಕಿಡಿಕಾರಿದರು. ಎಲ್ಲ ಬೇಡಿಕೆಗಳನ್ನು ಈಡೇರಿಸುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಶಿಕ್ಷಕ ಅಭ್ಯರ್ಥಿಗಳಿಂದ ಬೃಹತ್​ ಪ್ರತಿಭಟನೆ, ಪೊಲೀಸರಿಂದ ಲಾಠಿ ಚಾರ್ಜ್: ಹಲವರ ಬಂಧನ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.