​ಇಸ್ರೋ ಉಪಗ್ರಹಕ್ಕೆ ಸರ್ಕಾರಿ ಶಾಲಾ ವಿದ್ಯಾರ್ಥಿನಿಯರು ತಯಾರಿಸಿದ ಚಿಪ್ ಅಳವಡಿಕೆ!

By

Published : Feb 8, 2023, 5:23 PM IST

Updated : Feb 14, 2023, 11:34 AM IST

thumbnail

ಅಮೃತಸರ (ಪಂಜಾಬ್): ಸರ್ಕಾರಿ ಶಾಲಾ ವಿದ್ಯಾರ್ಥಿನಿಯರು ಉಪಗ್ರಹಕ್ಕೆ ಅಳವಡಿಸುವ ಚಿಪ್​​ ತಯಾರಿಸುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ಇಲ್ಲಿಯ ಸಿನಿಯರ್​ ಸೆಕ್ರೆಟರಿ ಸ್ಮಾರ್ಟ್​ ಶಾಲೆಯ 10 ವಿದ್ಯಾರ್ಥಿನಿಯರು "ಟೆಸ್ಬರಿ ಪೈ ಪೀಕ್" ಎಂಬ ಚಿಪ್  ತಯಾರಿಸಿದ್ದು, ಅದನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 'ಆಜಾದಿಸ್ಯಾಟ್​-2' ಉಪಗ್ರಹದಲ್ಲಿ ಅಳವಡಿಸಿದೆ. ವಿದ್ಯಾರ್ಥಿನಿಯರ ಈ ಸಾಧನೆಗೆ ರಾಜ್ಯದ ಮುಖ್ಯಮಂತ್ರಿ ಭಗವಂತ್​ ಮಾನ್ ಅಭಿನಂದಿಸಿದ್ದಾರೆ.  

ಅಲ್ಲದೇ ಶ್ರೀಹರಿಕೋಟದಲ್ಲಿ ಫೆ.10ರಂದು 'ಆಜಾದಿಸ್ಯಾಟ್​-2'​ ಉಪಗ್ರಹವನ್ನು ಇಸ್ರೋ ಉಡಾವಣೆ ಮಾಡಲಿದ್ದು, ಇದನ್ನು ನೇರವಾಗಿ ವೀಕ್ಷಿಸಲು ವಿದ್ಯಾರ್ಥಿನಿಯರಿಗೆ ಸಂಸ್ಥೆ ಆಹ್ವಾನ ನೀಡಿದೆ. ಇನ್ನು ವಿದ್ಯಾರ್ಥಿನಿಯರಿಗೆ ಶ್ರೀಹರಿಕೋಟಕ್ಕೆ ಹೋಗಲು ಬೇಕಾಗಿರುವ ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದ್ದು, ಅದಕ್ಕಾಗಿ 3 ಲಕ್ಷ ರೂ.ಗಳ ಚೆಕ್​ ಸಹ ವಿತರಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.   

ಇದನ್ನೂ ಓದಿ: ಸಂಸತ್​ ಎದುರಿಗೆ ಪ್ರತಿಭಟಿಸಿದ ಮೆಹಬೂಬಾ ಮುಫ್ತಿ ಪೊಲೀಸರ ವಶಕ್ಕೆ: ವಿಡಿಯೋ

Last Updated : Feb 14, 2023, 11:34 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.