ನೆಲಮಂಗಲ: ಹೊತ್ತಿ ಉರಿದ ಕಾರು, 50 ಸಾವಿರ ರೂಪಾಯಿ ನಗದು ಭಸ್ಮ

By ETV Bharat Karnataka Team

Published : Oct 5, 2023, 9:19 PM IST

thumbnail

ನೆಲಮಂಗಲ : ನಿಂತಿದ್ದ ಡಸ್ಟರ್ ಕಾರು ಹೊತ್ತಿ ಉರಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಸಮೀಪದ ಸೋಲೂರಿನಲ್ಲಿ ಇಂದು ನಡೆಯಿತು. ಸೋಲೂರಿನ ಶ್ರೀ ರಾಮ ಫೈನಾನ್ಸ್ ಮುಂಭಾಗ ನಿಲ್ಲಿಸಿದ್ದ ಡಸ್ಟರ್ ಕಾರು ಸುಟ್ಟು ಕರಕಲಾಗಿದೆ.  

ಇದನ್ನೂ ಓದಿ: ಶಿವಮೊಗ್ಗ: ಬೆಂಕಿಯಿಂದ ಹೊತ್ತಿ ಉರಿದ ಕಾರು, ಮಾಲೀಕನ ಪತ್ತೆಗೆ ಪೊಲೀಸರ ಹುಡುಕಾಟ

₹50 ಸಾವಿರ ಹಣ ಭಸ್ಮ : ಬ್ಯಾಟರಿ ಶಾರ್ಟ್​ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಕಾರು ನೆಲಮಂಗಲದ ಕಿರಣ್​ಗೌಡ ಅವರಿಗೆ ಸೇರಿದ್ದು, ಶ್ರೀ ರಾಮ ಫೈನಾನ್ಸ್​ನಲ್ಲಿ ಹಣ ಕಟ್ಟಲು ತೆರಳಿದ್ದಾಗ ಅನಾಹುತ ನಡೆದಿದೆ ಎಂದು ತಿಳಿದು ಬಂದಿದೆ. 

ಅಗ್ನಿ ದುರಂತದ ವೇಳೆ ಕಾರಿನಲ್ಲಿದ್ದ ₹ 50 ಸಾವಿರ ಹಣ ಕೂಡಾ ಉರಿದು ಬೂದಿಯಾಗಿದೆ. ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅವಘಡದ ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು.

ಇದನ್ನೂ ಓದಿ: ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಧಗಧಗನೆ ಹೊತ್ತಿ ಉರಿದ ಕಾರು - ವಿಡಿಯೋ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.