ಮೊಬೈಲ್ ಕದ್ದು ಗೂಗಲ್ ಪೇ, ಫೋನ್ ಪೇ ಮೂಲಕ ಹಣ ದೋಚುತ್ತಿದ್ದ ಅಂತರ್‌ರಾಜ್ಯ ಕಳ್ಳರ ಬಂಧನ

By

Published : Aug 16, 2023, 6:03 PM IST

thumbnail

ಹಾವೇರಿ : ಮೊಬೈಲ್ ಫೋನ್ ಕದ್ದು, ಗೂಗಲ್ ಪೇ, ಪೋನ್ ಪೇ ಆ್ಯಪ್‌ಗಳ ಮೂಲಕ ಹಣ ಎಗರಿಸುತ್ತಿದ್ದ ಮೂವರು ಅಂತರ್‌ರಾಜ್ಯ ಕಳ್ಳರ ತಂಡವನ್ನು ಬಂಧಿಸುವಲ್ಲಿ ತಾಲೂಕಿನ ಗುತ್ತಲ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಆಂಧ್ರಪ್ರದೇಶದ ಮತ್ತು ತೆಲಂಗಾಣ ರಾಜ್ಯದ ಗುಂಜಾರಿಯಾ ಸಾಯಿಕುಮಾರ್, ಅಕುಲ ವಡಿವೆಲ್ ಹಾಗೂ ಓರ್ವ 12 ವರ್ಷದ ಬಾಲಕ ಎಂದು ಗುರುತಿಸಲಾಗಿದೆ.

ಸುಮಾರು 1.36 ಲಕ್ಷ ರೂ ಹಣ, 27 ವಿವಿಧ ಕಂಪನಿಗಳ ಫೋನ್ ಹಾಗೂ ಕೃತ್ಯಕ್ಕೆ ಬಳಿಸಿದ ಟಾಟಾ ಇಂಡಿಗೋ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಗ್ರಾಮೀಣ ಸಿಪಿಐ ಸಂತೋಷ ಪವಾರ ಮತ್ತು ಪಿಎಸ್ಐ ಶ‌ಂಕರಗೌಡ ಪಾಟೀಲ ನೇತ್ರತ್ವ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. 

ಪ್ರತ್ಯೇಕ ಪ್ರಕರಣ: ಮಂಗಳೂರು ಉತ್ತರ ಪೊಲೀಸ್ ಠಾಣೆ ಹಾಗೂ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ನಗರಾದ್ಯಂತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಕೇರಳದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಒಟ್ಟು 200 ಗ್ರಾಂ ಎಂಡಿಎಂಎ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. 

ಇದನ್ನೂ ಓದಿ : Davanagere crime: ವೈದ್ಯರ ಮನೆಗೆ ಕನ್ನ; ₹22 ಲಕ್ಷ ನಗದು, ಚಿನ್ನಾಭರಣ ಕಳ್ಳತನ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.