ಪ್ಲಾಟ್‌ಫಾರ್ಮ್‌ನತ್ತ ನುಗ್ಗಿದ ರೈಲು; ತಪ್ಪಿದ ಭಾರಿ ಅವಘಡ

By ETV Bharat Karnataka Desk

Published : Jan 17, 2024, 11:26 AM IST

thumbnail

ಬಿಲಾಸ್‌ಪುರ(ಛತ್ತೀಸ್​ಗಢ): ರೈಲು ಇಂಜಿನ್ ಏಕಾಏಕಿ ಪ್ಲಾಟ್‌ಫಾರ್ಮ್‌ನತ್ತ ನುಗ್ಗಿದ್ದು, ಬಿಲಾಸ್‌ಪುರ ರೈಲ್ವೆ ನಿಲ್ದಾಣದಲ್ಲಿ ಅದೃಷ್ಟವಶಾತ್​ ಭಾರಿ ಅವಘಡ ತಪ್ಪಿದೆ. ಮಂಗಳವಾರ ರಾತ್ರಿ ಘಟನೆ ಸಂಭವಿಸಿದ್ದು, ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು. ಈ ಸಂದರ್ಭದಲ್ಲಿ ಪ್ಲಾಟ್‌ಫಾರ್ಮ್‌ನಲ್ಲಿ ಹಲವು ಪ್ರಯಾಣಿಕರು ರೈಲಿಗಾಗಿ ಕಾಯುತ್ತಿದ್ದರು.

ಬಿಲಾಸ್‌ಪುರ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 8ರಲ್ಲಿ ರಾತ್ರಿ 9.30ಕ್ಕೆ ಈ ಅವಘಡ ಜರುಗಿದೆ. ಪ್ಲಾಟ್‌ಫಾರ್ಮ್‌ನ ಕೊನೆಯಲ್ಲಿ ಛತ್ತೀಸ್‌ಗಢ ಎಕ್ಸ್‌ಪ್ರೆಸ್‌ ರೈಲಿನ ಎಂಜಿನ್ ಡಿಕ್ಕಿ ಹೊಡೆದಿದೆ. ಇದರಿಂದ ಗೋಡೆ ಸಂಪೂರ್ಣ ಒಡೆದಿದ್ದು, ಪ್ಲಾಟ್‌ಫಾರ್ಮ್‌ನ ನೆಲ ಕಿತ್ತುಬಂದಿದೆ. ಘಟನೆಯಿಂದ ನಿಲ್ದಾಣದಲ್ಲಿ ಕೆಲಕಾಲ ಆತಂಕ ಉಂಟಾಯಿತು.

ಇದನ್ನೂ ಓದಿ: ಬೆಳಗಾವಿಯಲ್ಲಿ ಕಾರು ಡಿಕ್ಕಿಯಾಗಿ ಸ್ಕೂಟಿ ಮೇಲಿಂದ ಹಾರಿಬಿದ್ದ ಯುವತಿ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ತನಿಖೆಗೆ ರೈಲ್ವೆ ಇಲಾಖೆ ಆದೇಶ: ಇಂಜಿನ್​ನ ಶಂಟಿಂಗ್ ವೇಳೆ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ರೈಲಿನಲ್ಲಿ ಪ್ರಯಾಣಿಕರಿಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಸದ್ಯ ಈ ಸಂಬಂಧ ರೈಲ್ವೆ ಇಲಾಖೆಯು ತನಿಖೆಗೆ ಆದೇಶಿಸಿದೆ.

ಇದನ್ನೂ ಓದಿ: ಎಕ್ಸಲೇಟರ್, ಗೇರ್​​ ಜಾಮ್; ನಿಯಂತ್ರಣ ಕಳೆದುಕೊಂಡ ಕಾರು ಚರಂಡಿಗೆ - ವಿಡಿಯೋ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.