ಡಿವೈಡರ್​ಗೆ ಗುದ್ದಿ ಪಲ್ಟಿಯಾದ ಬಸ್​.. 15 ಪ್ರಯಾಣಿಕರಿಗೆ ಗಾಯ: ಭೀಕರ ವಿಡಿಯೋ

By

Published : Apr 12, 2023, 12:34 PM IST

thumbnail

ನಂದೂರ್‌ಬಾರ್(ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸೂರತ್‌ನಿಂದ ಮಧ್ಯಪ್ರದೇಶಕ್ಕೆ ಹೋಗುತ್ತಿದ್ದ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ 15 ಜನರು ಗಾಯಗೊಂಡಿದ್ದಾರೆ. ಎಲ್ಲರನ್ನೂ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ರಭಸವಾಗಿ ಬಂದ ಬಸ್​ ಡಿವೈಡರ್​ಗೆ ಗುದ್ದಿ, ಪಲ್ಟಿಯಾಗಿದೆ. 15 ಪ್ರಯಾಣಿಕರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಅಪಘಾತವು ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಸಂಭವಿಸಿದೆ. ಅಪಘಾತದ ನಂತರ ಭಾರಿ ಶಬ್ದ ಉಂಟಾಗಿದ್ದು, ಜನರು ಸಹಾಯಕ್ಕಾಗಿ ಕೂಗಿದ್ದರಿಂದ ಸ್ಥಳೀಯರು ಮತ್ತು ಪೊಲೀಸರು ಸಹಾಯಕ್ಕೆ ಧಾವಿಸಿ, ಅವರನ್ನು ರಕ್ಷಣೆ ಮಾಡಿದ್ದಾರೆ.

ಸೂರತ್​ನ ಬಸ್​ ಅಪಘಾತದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. ಬಸ್ ಡಿವೈಡರ್​ಗೆ ಡಿಕ್ಕಿ ಹೊಡೆಯದೇ ಪಕ್ಕದಲ್ಲೇ ಇದ್ದ ಸಬ್​ಸ್ಟೇಷನ್​ಗೆ ಗುದ್ದಿದ್ದರೆ, ಭಾರಿ ಅವಘಡ ಸಂಭವಿಸುತ್ತಿತ್ತು. ಶಹದಾ ಪಟ್ಟಣಕ್ಕೆ ವಿದ್ಯುತ್ ಸರಬರಾಜು ಮಾಡುವ 132 ಕೆವಿ ಉಪ ಕೇಂದ್ರವು ಅಪಘಾತದ ಹತ್ತಿರದಲ್ಲೇ ಇದೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಸಂಭವಿಸಿದ ಬಸ್ ಅಪಘಾತದಿಂದ ದೊಡ್ಡ ಸದ್ದು ಉಂಟಾಗಿದ್ದು, ಅಕ್ಕಪಕ್ಕದಲ್ಲಿದ್ದ ಜನರು ಬೆಚ್ಚಿ ಬಿದ್ದಿದ್ದಾರೆ.

ಓದಿ: ಭಟಿಂಡಾ ಮಿಲಿಟರಿ ಠಾಣೆ ಮೇಲೆ ಗುಂಡಿನ ದಾಳಿ: ನಾಲ್ವರು ಸಾವು

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.