ಬ್ರೇಕ್​ ಫೇಲ್​​ ​ಆಗಿ ಡಿವೈಡರ್​ಗೆ ಡಿಕ್ಕಿ ಹೊಡೆದ ಬಿಎಂಟಿಸಿ ಬಸ್

By ETV Bharat Karnataka Team

Published : Oct 4, 2023, 10:49 AM IST

thumbnail

ಬೆಂಗಳೂರು: ಬ್ರೇಕ್ ವೈಫಲ್ಯದಿಂದಾಗಿ ಬಿಎಂಟಿಸಿ ಬಸ್​ವೊಂದು ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.‌ ಬಸ್​ನಲ್ಲಿ ಪ್ರಯಾಣಿಕರಿಲ್ಲದ ಪರಿಣಾಮ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಕೆ.ಆರ್.ಮಾರ್ಕೆಟ್ ನಿಂದ ‍ಚಾಮರಾಜಪೇಟೆಗೆ ತೆರಳುತ್ತಿದ್ದ ಬಿಎಂಟಿಸಿ ಬಸ್ ಮಾರ್ಕೆಟ್ ಫ್ಲೈ ಓವರ್ ಮೇಲಿನಿಂದ ಬೆಳಗ್ಗೆ 7:10ರ ಸುಮಾರಿಗೆ ಡಿವೈಡರ್​ಗೆ ಡಿಕ್ಕಿಹೊಡೆದಿದೆ. ಬಸ್​ನಲ್ಲಿದ್ದ ಚಾಲಕ ಮತ್ತು ನಿರ್ವಾಹಕರಿಗೆ ಯಾವುದೇ ಗಾಯಗಳಾಗಿಲ್ಲ. ಚಿಕ್ಕಪೇಟೆ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಸ್ಥಳಕ್ಕೆ ಬಿಎಂಟಿಸಿ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿದ್ದಾರೆ. ಸುಗಮ ಸಂಚಾರಕ್ಕಾಗಿ ಬಸ್ ತೆರವುಗೊಳಿಸಿ ಅನುವು ಮಾಡಿಕೊಟ್ಟಿದ್ದಾರೆ.  ಪ್ರಾಥಮಿಕ ತನಿಖೆಯಲ್ಲಿ ಬ್ರೇಕ್ ಫೇಲ್ಯೂರ್ ಆಗಿ ಅಪಘಾತ ಸಂಭವಿಸಿರೋದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ಚಲಿಸುತ್ತಿದ್ದ ಬಿಎಂಟಿಸಿ ಬಸ್​ ಟೈರ್​ ಸ್ಫೋಟಗೊಂಡು ಪ್ರಯಾಣಿಕರೊಬ್ಬರ ಕಾಲಿಗೆ ಗಂಭೀರ  ಸ್ವರೂಪದ ಗಾಯವಾಗಿದ್ದ ಘಟನೆ ಜಾಲಹಳ್ಳಿಯಲ್ಲಿ ನಡೆದಿತ್ತು. ಹಿಂಬದಿ ಚಕ್ರ ಸ್ಫೋಟಗೊಂಡು ಆ ಭಾಗದಲ್ಲಿನ ಸೀಟ್​ ಮುರಿದು​ ಪ್ರಯಾಣಿಕನ ಕಾಲಿಗೆ ಗಂಭೀರವಾದ ಗಾಯವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. 

ಇದನ್ನೂ ಓದಿ: ಮಂಗಳೂರು: ನಿಂತಿದ್ದ ಬೈಕ್​ಗೆ ವಿರುದ್ಧ ದಿಕ್ಕಿನಲ್ಲಿ ಬಂದು ಗುದ್ದಿದ ಬಸ್​.. ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.