ಮುರುಘಾ ಮಠದ ಉಸ್ತುವಾರಿಯಾಗಿ ಬಸವಪ್ರಭು ಸ್ವಾಮೀಜಿ ಆಯ್ಕೆ

By

Published : May 29, 2023, 5:22 PM IST

thumbnail

ಚಿತ್ರದುರ್ಗ: ಈ ಹಿಂದೆ ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವುದನ್ನು ಹೈಕೋರ್ಟ್​ ವಜಾ ಮಾಡಿದೆ. ಈ ಮೂಲಕ ಬಸವಪ್ರಭು ಶ್ರೀಗಳಿಗೆ ಮಠ ಮೇಲೆ ಸಂಪೂರ್ಣವಾದ ಅಧಿಕಾರವಿದೆ ಅನ್ನೋದನ್ನು ಸಹ ಆ ಆದೇಶದಲ್ಲಿ ತಿಳಿಸಿದೆ. ಆ ಆದೇಶದ ಪ್ರಕಾರ ಬಸವಪ್ರಭು ಗುರುಗಳಿಗೆ ಜನರಲ್ ಪವರ್​ ಆಫ್​ ಅಟಾರ್ನಿ ನೀಡಲಾಗಿತ್ತು. ಇದೀಗ ಆಡಳಿತಾಧಿಕಾರಿಯಾಗಿ ಮತ್ತು ಮಠದ ಪ್ರತಿದಿನದ ಕಾಯಕದ ಉಸ್ತುವಾರಿ (ದಾಸೋಹ, ಸೇವೆ ಮತ್ತು ಪೂಜಾ ಕೈಂಕರ್ಯಗಳು) ಆಗಿ ಆಯ್ಕೆ ಮಾಡಲಾಗಿದೆ ಎಂದು ಚಿತ್ರದುರ್ಗ ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ತಿಳಿಸಿದರು. 

ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಪೋಕ್ಸೋ ಪ್ರಕರಣ ಇತ್ಯರ್ಥವಾಗುವವರೆಗೆ ತಾತ್ಕಾಲಿಕ ಆಡಳಿತ ಸಮಿತಿ ರಚನೆ ಮಾಡುವಂತೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಇದರಂತೆ ಸಮಿತಿಯನ್ನು ರಚನೆ ಮಾಡಲಾಗಿತ್ತು. ಅದರಂತೆ ಸಮಿತಿ ಕೂಡ ರಚಿಸಲಾಗಿದೆ. ಅದರನ್ವಯ ಚಿತ್ರದುರ್ಗ ಮುರುಘಾಮಠದಲ್ಲಿ ಭಾನುವಾರ ಸಭೆ ಕೂಡ ನಡೆಯಿತು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ತಾತ್ಕಾಲಿಕ ಆಡಳಿತ ಸಮಿತಿಯು ಮುರುಘಾ ಮಠದ ಉಸ್ತುವಾರಿಯಾಗಿ ಬಸವಪ್ರಭು ಸ್ವಾಮೀಜಿ ಅವರನ್ನು ಆಯ್ಕೆ ಮಾಡಿದೆ. ಇನ್ನು ಮುಂದೇ ಅವರೇ ದೈನಂದಿನ ವ್ಯವಹಾರವನ್ನು ನೋಡಿಕೊಳ್ಳಲಿದ್ದಾರೆ ಎಂದರು. ಸಭೆಯಲ್ಲಿ ಮುರುಘಾಮಠದ ಉಸ್ತುವಾರಿ ಬಸವಪ್ರಭು ಶ್ರೀಗಳು, ಹರಿಹರ ಮಾಜಿ ಶಾಸಕ ಶಿವಶಂಕರ್ ಸೇರಿದಂತೆ ಹಲವರ ಉಪಸ್ಥಿತರಿದ್ದರು. ಸಾಮಾಜಿಕ ಜಾಲತಾಣದ ಮೂಲಕ ಈ ಸಭೆಯಲ್ಲಿ ಪಾಲ್ಗೊಳ್ಳುವಂತೆ ಹಲವರಿಗೆ ಮಾಹಿತಿ ಸಹ ನೀಡಲಾಗಿತ್ತು ಎಂದು ಅವರು ಇದೇ ವೇಳೆ ಹೇಳಿದರು. 

ಇದನ್ನೂ ಓದಿ: ಗ್ಯಾರಂಟಿ ಜಾರಿ ಸಂಬಂಧ ಸಿಎಂ ಮಹತ್ವದ ಸಭೆ: ಗೃಹಲಕ್ಷ್ಮಿ ಯೋಜನೆಗೆ ವಾರ್ಷಿಕ 12,038 ಕೋಟಿ ಹೊರೆ?

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.