ಚಿನ್ನದ ಅಂಬಾರಿ ಹೊತ್ತ ಅರ್ಜುನನ ಗಾಂಭೀರ್ಯದ ನಡಿಗೆ, ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಜನಸಾಗರ!

By

Published : Oct 8, 2019, 6:15 PM IST

thumbnail

ಮೈಸೂರು: ಮೈಸೂರು ದಸರಾದ ಪ್ರಮುಖ ಭಾಗ ಜಂಬೂ ಸವಾರಿ ಅಂತಿಮ ಹಂತ ತಲುಪಿದೆ. ಅರಮನೆ ಮುಂಭಾಗ ಕುಂಭ ಲಗ್ನದಲ್ಲಿ ಅರ್ಜುನನ ಮೇಲೆ ವಿರಾಜಮಾನಳಾದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಚಾಲನೆ ಕೊಟ್ಟರು. ಈ ಐತಿಹಾಸಿಕ ಸಂದರ್ಭದಲ್ಲಿ ರಾಜವಂಶಸ್ಥ ಯದುವೀರ್​ ಕೃಷ್ಣದತ್ತ ಚಾಮರಾಜ​ ಒಡೆಯರ್​, ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಮೈಸೂರು ಮೇಯರ್​ ಪುಷ್ಪಲತಾ ಉಪಸ್ಥಿತರಿದ್ದರು. ಸತತ 8 ನೇ ಬಾರಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಅರ್ಜುನ ಆನೆ ರಾಜ ಗಾಂಭೀರ್ಯದಿಂದ ಸಾಗುತ್ತಿದ್ದಾನೆ. ಅರ್ಜುನನ ಬಲ ಭಾಗದಲ್ಲಿ ಕಾವೇರಿ, ಎಡಭಾಗದಲ್ಲಿ ವಿಜಯ ಎಂಬ ಕುಮ್ಕಿ ಆನೆಗಳು ಸಾಥ್​ ನೀಡಿದ್ದು, ಸಯ್ಯಾಜಿರಾವ್ ವೃತ್ತ, ಬಂಬೂ ಬಜಾರ್ ಮಾರ್ಗವಾಗಿ 5 ಕಿ ಮೀ ಸಾಗಿ ಬನ್ನಿ ಮಂಟಪದಲ್ಲಿ ಸಮಾಪನಗೊಳ್ಳಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.